Sunday, September 8, 2024

Latest Posts

Post Office: ವಿಮಾ ಅರ್ಜಿ ತಿರಸ್ಕರಿಸಿದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗ ದಂಡ..!

- Advertisement -

ಧಾರವಾಡ: ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ನಾಗಪ್ಪ ಶಿವಪ್ಪ ಕುರಹಟ್ಟಿ ಜೀವ ವಿಮಾ ಪಾಲಿಸಿ ಮಾಡಿಸಿದ್ದರು. 31 ಜನವರಿ 2019 ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು ಜೀವ ವಿಮೆ ಪಾಲಿಸಿಯಲ್ಲಿ ನಾಮಿನಿಗಾಗಿ ತನ್ನ ಅಣ್ಣನ ಮಗಳಾದ  ಅರ್ಚನಾ ಹೆಸರನ್ನು ನೊಂದಣಿ ಮಾಡಿದ್ದರು ಅದರಂತೆ ಮರಣಾ ನಂತರ ಅರ್ಚನಾ ವಿಮಾ ಹಣಕ್ಕಾಗಿ ಅರ್ಜಿ ಸಲ್ಲಿಸಿದ್ದರು ಆದರೆ ಅದನ್ನು ಅಂಚೆ ಇಲಾಖೆ ತಿರಸ್ಕರಿಸಿದೆ ಇದರಿಂದ ಬೇಸತ್ತ ಅರ್ಚನಾ ಕೋರ್ಟ ಮೊರೆ ಹೋಗಿ ಅಂಚೆ ಮೂಲಕ ದಂಡ ಕಟ್ಟಿಸಿಕೊಂಡಿದ್ದಾಳೆ. 

ವ್ಯಾಪಾರಕ್ಕೆಂದು ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು. ಹೀಗೆ ವ್ಯಾಪಾರಕ್ಕೆಂದು ಹೋದಾಗ 28 ಮಾರ್ಚ್ 2019 ರಂದು ರೂ.7,291/- ಪ್ರೀಮಿಯಮ್ ನೀಡಿ ಸೊರಬ ಅಂಚೆ ಕಛೇರಿಯಿಂದ ಗ್ರಾಮೀಣ ಅಂಚೆ ಜೀವ ವಿಮೆಯನ್ನು ಪಡೆದುಕೊಂಡಿದ್ದರು. ನಾಗಪ್ಪ ಕುರಹಟ್ಟಿ 31 ಜನವರಿ 2019 ರಂದು ತೀವ್ರ ಹೃದಯಾಘಾತದಿಂದ ಹಿರೆಹರಕುಣಿಯ ತಮ್ಮ ಮನೆಯಲ್ಲಿ ನಿಧನ ಹೊಂದಿದ್ದರು. ಆ ವಿಮೆ ಪಾಲಸಿಗೆ ನಾಗಪ್ಪ ಅವರ ಸಹೋದರನ ಮಗಳು ಅರ್ಚನಾ ನಾಮಿನಿ ಆಗಿದ್ದಳು. ವಿಮೆದಾರ ನಾಗಪ್ಪನ ಮರಣಾನಂತರ ಅರ್ಚನಾ ಹುಬ್ಬಳ್ಳಿಯ ಅಂಚೆ ಕಛೇರಿಗೆ ವಿಮೆ ಪರಿಹಾರ ರೂ. 2 ಲಕ್ಷ 50 ಸಾವಿರ ಕೊಡುವಂತೆ ದಾಖಲೆಗಳ ಸಮೇತ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.

ವಿಮೆ ಮಾಡಿಸುವ ಮೊದಲು ಮೃತ ನಾಗಪ್ಪ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದನು. ಆದರೆ ವಿಮೆ ಪಡೆಯುವಾಗ ಆ ಸಂಗತಿಗಳನ್ನು ಅಂಚೆ ಇಲಾಖೆಗೆ ಬಹಿರಂಗ ಪಡಿಸಿರಲಿಲ್ಲ ಅಂತಾ ಹುಬ್ಬಳ್ಳಿಯ ಅಂಚೆ ಕಛೇರಿಯವರು ಅರ್ಚನಾಳ ಕ್ಲೇಮ್‍ನ್ನು ತಿರಸ್ಕರಿಸಿದ್ದರು. ತನ್ನ ಚಿಕ್ಕಪ್ಪ ಯಾವುದೇ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಆದರೆ ಹೃದಯಾಘಾತದಿಂದ ಅವರು ಮೃತಪಟ್ಟಿರುವುದರಿಂದ ಅಂಚೆ ಇಲಾಖೆಯವರ ತೀರ್ಮಾನ ತಪ್ಪು ಮತ್ತು ಇದು ಸೇವಾ ನ್ಯೂನ್ಯತೆ ಆಗಿದೆ ಅಂತಾ ಅಂಚೆ ಇಲಾಖೆ ಮೇಲೆ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ಅರ್ಚನಾ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಮೃತ ನಾಗಪ್ಪ ಕುರಹಟ್ಟಿ ಅವರ ಅಂಚೆ ಜೀವವಿಮೆ ಪಾಲಸಿ, ಅವರು ನಿಧನ ಹೊಂದುವ ಕಾಲಕ್ಕೆ ಚಾಲ್ತಿಯಲ್ಲಿತ್ತು. ಅಂಚೆ ಕಛೇರಿಯವರು ತಮ್ಮ ವಿಮಾ ನಿಯಮಾವಳಿಯಂತೆ ವಿಮಾ ಹಣವನ್ನು ಅರ್ಚನಾಳಿಗೆ ಕೊಡುವುದು ಕರ್ತವ್ಯವಾಗಿರುತ್ತದೆ. ಆದರೆ ಅಂತಹ ಕರ್ತವ್ಯ ನಿರ್ವಹಣೆಯಲ್ಲಿ ಅಂಚೆ ಜೀವವಿಮಾ ಕಛೇರಿ ವಿಫಲವಾಗಿದೆ. ಅವರು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟಿದೆ.

ವಿಮಾ ಪಾಲಸಿಯ ನಿಯಮದಂತೆ ನಾಮಿನಿಯಾದ ಅರ್ಚನಾಳಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ. 2 ಲಕ್ಷ 50 ಸಾವಿರ ವಿಮಾ ಹಣ ಮತ್ತು ಅದರ ಮೇಲೆ ಕ್ಲೇಮನ್ನು ತಿರಸ್ಕರಿಸಿದ ದಿನದಿಂದ ಶೇ. 8 ರಂತೆ ಬಡ್ಡಿ ಲೆಕ್ಕ ಹಾಕಿ ಸಂದಾಯ ಮಾಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ. ದೂರುದಾರಳಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ. 50 ಸಾವಿರ ಪರಿಹಾರ ಮತ್ತು ರೂ. 3 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಅಂಚೆ ಜೀವವಿಮೆ ಕಛೇರಿಯವರಿಗೆ ಆದೇಶಿಸಿದೆ.

Sheep: ಮಾಂಸಕ್ಕೆ ಹೆಚ್ಚಿನ ಬೇಡಿಕೆ, ಧಾರವಾಡದಲ್ಲಿ ಹೆಚ್ಚಾದ ಮೇಕೆಗಳ ಕಳ್ಳತನ..!

Congress: ಯಾರೇ ಸೇರಿದರು ನಾವು ಹೆಚ್ಚು ಸೀಟು ಗೆಲ್ಬೇಕು ಗೆಲ್ತಿವಿ..!

Chaithra Kundapura : ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ : ಚೈತ್ರಾ ಕುಂದಾಪುರ ಅರೆಸ್ಟ್

- Advertisement -

Latest Posts

Don't Miss