ನೇತ್ರಾವತಿ ಅರಣ್ಯದಲ್ಲಿ ಆಪರೇಷನ್ ಅಸ್ಥಿಪಂಜರಕ್ಕೆ, ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ ಎಸ್‌ಐಟಿ ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿಲ್ಲ. ಅಸ್ಥಿಪಂಜರ ಶೋಧ ಕಾರ್ಯಾಚರಣೆ ನಿಲ್ಲಿಸಿದ್ರೂ, ತನಿಖೆ ಮಾತ್ರ ಮುಂದುವರೆದಿದೆ. ಪ್ರತಿ ದಿನವೂ ಹೊಸ ಹೊಸ ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ.
SIT ಅಧಿಕಾರಿಗಳು ದೂರುದಾರನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆಗಸ್ಟ್ 21ರಂದು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರೇ ವಿಚಾರಣೆ ನಡೆಸಿದ್ದಾರೆ. ಆಗಸ್ಟ್ 22ರಂದೂ ಅನಾಮಿಕನಿಗೆ ಡ್ರಿಲ್ ಆಗಿದೆ.
ಇದೀಗ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ, ಆನ್ ಸ್ಪಾಟ್ ಪೋಸ್ಟ್ ಮಾರ್ಟಂನತ್ತ, ಎಸ್‌ಐಟಿ ಕಣ್ಣು ಬಿದ್ದಿದೆ. ಕೊಳೆತ ಸ್ಥಿತಿಯಲ್ಲೇ ಸಿಕ್ಕ ಮೃತದೇಹಗಳಿಗೆ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ್ಯಾಕೆ ಎನ್ನುವ ಪ್ರಶ್ನೆ ಮೂಡಿದೆ.
ಶವ ಸಾಗಿಸಲು ಸಾಧ್ಯವಾಗದ ಕಾರಣ ಸ್ಥಳದಲ್ಲೇ ಪೋಸ್ಟ್ ಮಾರ್ಟಂ ಮಾಡಿ ದಫನ್ ಪ್ರಕ್ರಿಯೆ ನಡೆಸಲಾಗಿದೆಯಂತೆ. ಆದರೂ ಪಟ್ಟು ಸಡಿಲಿಸದ ಅಧಿಕಾರಿಗಳು, ಮೃತದೇಹಗಳನ್ನು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ಮಾಡಿದ್ದೇಕೆ ಎಂಬ ಅನುಮಾನಕ್ಕೆ ಕಾರಣ ಹುಡುಕಿ ಹೊರಟಿದೆ.
ಈಗಾಗಲೇ 1995ರಿಂದ 2014ರವರೆಗಿನ ಮಾಹಿತಿ ಸಂಗ್ರಹಿಸಲಾಗಿದೆ. ಎಲ್ಲಾ ವೈದ್ಯರಿಂದ ಮಾಹಿತಿ ಸಂಗ್ರಹ ಮಾಡಿದೆ. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ, ಎಸ್‌ಐಟಿ ಬುಲಾವ್ ನೀಡಿದೆ.
ಫಾರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ಅವರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಧರ್ಮಸ್ಥಳ ದ ನೇತ್ರಾವತಿ ತೀರದಲ್ಲಿ ಅನಾಮಿಕ ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ್ದ ಮಹಾಬಲ ಶೆಟ್ಟಿ ಅವರ, ವಿಚಾರಣೆಗೆ ಮುಂದಾಗಿದೆ.
20ಕ್ಕೂ ಹೆಚ್ಚು ಶವಗಳ ಮರಣೋತ್ತರ ಪರೀಕ್ಷೆ ಮಾಡಿದ್ದಾಗಿ ಮಹಾಬಲ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಅವ್ರಿಂದ ಫಾರೆನ್ಸಿಕ್ ಮಾಹಿತಿಗಳನ್ನ, ಎಸ್ ಐಟಿ ಪಡೆದಿದೆ. ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಯಿಂದಲೂ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.




