ಪಾಕಿಸ್ತಾನ ಸೇನೆಯ ಸಂವಹನ ಉದ್ದೇಶಕ್ಕಾಗಿ ಚೀನಾ ಕಂಪನಿಗಳು ವಿಶೇಷವಾಗಿ ತಯಾರಿಸಿ ಕೊಟ್ಟಿರುವ ಟೆಲಿಕಾಂ ಉಪಕರಣಗಳು ಭಾರತದ ಮೇಲೆ ದಾಳಿಗೆ ಬರುತ್ತಿರುವ ಉಗ್ರರ ಕೈ ಸೇರುತ್ತಿರುವ ಆತಂಕಕಾರಿ ಸಂಗತಿ ಪತ್ತೆಯಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಸದೆಬಡಿದಾಗ ಚೀನಾ ನಿರ್ಮಿತ ಮೊಬೈಲ್ ಸಾಧನವಾಗಿರುವ ‘ಅಲ್ಟಾಸೆಟ್’ ಭಯೋ ತ್ಪಾದಕರ ಬಳಿ ಪತ್ತೆಯಾಗಿವೆ.
ಭಾರತದಲ್ಲಿ ದಾಳಿ ನಡೆಸುತ್ತಿರುವ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಬಳಿ ಈಸಾಧನಗಳು ಪತ್ತೆಯಾಗುವುದರೊಂದಿಗೆ ಭಯೋತ್ಪಾದಕ ಸಂಘಟನೆಗಳು ಪಾಕ್ ಸೇನೆಯಿಂದಲೇ ತರಬೇತಿ, ಶಸ್ತ್ರಾಸ್ತ್ರ ಹಾಗೂ ಇನ್ನಿತರೆ ವಸ್ತುಗಳನ್ನು ಪಡೆಯುತ್ತಿರುವುದಕ್ಕೆ ಮತ್ತೊಮ್ಮೆ ಸಾಕ್ಷ್ಯ ಸಿಕ್ಕಂತಾಗಿದೆ.
ಪಾಕಿಸ್ತಾನ ಸೇನೆಯ ಉದ್ದೇಶಕ್ಕಾಗಿ ಚೀನಾದ ಕಂಪನಿಗಳು ವಿಶೇಷ ವಾಗಿ ವಿನ್ಯಾಸ ಮಾಡಿಕೊಟ್ಟಿರುವ ಮೊಬೈಲ್ ಸಾಧನಗಳು ಇವು. ಸಾಮಾನ್ಯ ಮೊಬೈಲ್ ಫೋನ್‍ಗಳಂತೆ ಜಿಎಸ್‍ಎಂ ಅಥವಾ ಸಿಡಿಎಂಎ ತಂತ್ರಜ್ಞಾನದ ಮೇಲೆ ಅವಲಂಬಿತವಾಗದೆ ಕಾರ್ಯನಿರ್ವಹಿಸುತ್ತಿದೆ.
ರೇಡಿಯೋ ತರಂಗಾಂತರಗಳ ಮೂಲಕ ಸಂದೇಶ ರವಾನೆ ಹಾಗೂ ಸ್ವೀಕಾರಕ್ಕೆ ಇವು ಬಳಕೆಗೆ ಬರುತ್ತವೆ. ಪ್ರತಿ ಅಲಾಸೆಟ್ ಕೂಡ ಗಡಿಯಾಚೆಗಿನ ನಿಯಂತ್ರಣ ಕೊಠಡಿ ಜತೆ ಲಿಂಕ್ ಆಗಿರುತ್ತದೆ. ನೇರವಾಗಿ ಎರಡು ಅಲ್ಪಾಸೆಟ್‍ಗಳ ನಡುವೆ ಸಂವಹನ ನಡೆಸಲು ಆಗದು. ಈ ಅಲ್ಪಾಸೆಟ್‍ಗಳ ಸಂದೇಶವನ್ನು ಚೀನಾದ. ಉಪಗ್ರಹಗಳು ರವಾನೆ ಮಾಡುತ್ತವೆ. ಇವು ಗೂಢ ಲಿಪಿಯ ಮೂಲಕ ವರ್ಗವಾಗುತ್ತವೆ.
ಕಳೆದ ವರ್ಷ ಜು.17, 18ರಂದು ಜಮ್ಮುವಿನ ಪೂಂಛ್ ಜಿಲ್ಲೆಯ ಸುರನ್‍ಕೋಟ್‍ನಲ್ಲಿ ನಡೆದ ಎನ್‍ಕೌಂಟರ್ ಹಾಗೂ ಇದೇ ವರ್ಷ ಏ.26 ರಂದು ಉತ್ತರ ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಈ ಅಲ್ಪಾಸೆಟ್ ಸಾಧನಗಳು ಉಗ್ರರ ಬಳಿ ಪತ್ತೆಯಾಗಿರುವುದು ಭದ್ರತಾ ಪಡೆಗಳ ಆತಂಕಕ್ಕೆ ಕಾರಣವಾಗಿದೆ.
International ; ಪಾಕಿಸ್ತಾನದ ಕೃತ್ಯಗಳಿಗೆ ಚೀನಾ ಸಾಥ್!
- Advertisement -
- Advertisement -