Friday, April 11, 2025

Latest Posts

ಪಾಕಿಸ್ತಾನ:ಮಸೀದಿಯಲ್ಲಿ ಬಾಂಬ್ ಸ್ಫೋಟ…!

- Advertisement -

International News:

ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟಗೊಂಡ ಪ್ರಕರಣ ನಡೆದಿದೆ.ಮಸೀದಿಯೊಂದರಲ್ಲಿ  ನಡೆದ ಆತ್ಮಾಹುತಿ ದಾಳಿಯಿಂದಾಗಿ ಕನಿಷ್ಠ 28 ಜನ ಸಾವನ್ನಪ್ಪಿದ್ದು, 150 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಪೇಶಾವರದಲ್ಲಿ  ನಡೆದಿದೆ.ಜುಹರ್ ಪ್ರಾರ್ಥನೆಯ ನಂತರ ಅಫ್ಘಾನಿಸ್ತಾನದ ಗಡಿಗೆ ಸಮೀಪವಿರುವ ವಾಯುವ್ಯ ನಗರದಲ್ಲಿ ಪೇಶಾವರದ ಪೊಲೀಸ್ ಹೆಡ್ ಕ್ವಾಟ್ರಸ್ ಬಳಿ ಈ ಘಟನೆ ನಡೆದಿದೆ. ಸ್ಫೋಟದ ರಭಸಕ್ಕೆ ಮಸೀದಿಯ ಒಂದು ಬದಿ ಕುಸಿದಿದೆ.ವ್ಯಕ್ತಿಯೊಬ್ಬ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಳಗೆ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತ ಪ್ರಾರ್ಥನೆಯ ಸಮಯದಲ್ಲಿ ಮೊದಲ ಸಾಲಿನಲ್ಲಿ ಇದ್ದನು. ಅವನು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಭದ್ರತಾ ಇಲಾಖೆ ತಿಳಿಸಿದೆ. ಘಟನೆ ವೇಳೆ ಗಾಯಗೊಂಡವರನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರೆಲ್ಲರೂ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಕೆಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಐಸಿಸ್ ಅಡಗುತಾಣದ ಮೇಲೆ ದಾಳಿ ಮಾಡಿದ ಅಮೆರಿಕ ಸೇನೆ: ಹತ್ಯೆಯಾದ10 ಉಗ್ರರು

ಗೂಗಲ್ ಡೋಡಲ್ ನಲ್ಲಿ ಬಬಲ್ ಕಾಫಿ ಮಾಡಿತ್ತಿರುವ ನಾಯಿ

ಲಂಡನ್ ನಲ್ಲಿ ಕನ್ನಡ ಪ್ರೇಮ ಮೆರೆದ ಯುವಕ..!

 

- Advertisement -

Latest Posts

Don't Miss