ಶ್ರೀನಗರದಲ್ಲಿ ಪ್ರಧಾನಿ ಮೋದಿ ಯೋಗ

ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದಾರೆ. ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್​ನಲ್ಲಿ ಮೋದಿ ಯೋಗ ಮಾಡಿದರು.
ಅಂತರಾಷ್ಟ್ರೀಯ ಯೋಗ ದಿನದ 2024ರ ಥೀಮ್ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಘೋಷಣೆಯೊಂದಿಗೆ ಆಚರಣೆ ಮಾಡಲಾಯಿತು. ಯೋಗ ನಮಗಾಗಿ ಮತ್ತು ನಮ್ಮ ಸಮಾಜಕ್ಕಾಗಿ ಎಂಬ ವಿಷಯದೊಂದಿಗೆ ಯೋಗಾಭ್ಯಾಸದ ಅಗತ್ಯವನ್ನು ಎಲ್ಲರಿಗೂ ಜಾಗೃತಿ ಮೂಡಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ಯೋಗದ ವಿಸ್ತರಣೆಯು ಯೋಗಕ್ಕೆ ಸಂಬಂಧಿಸಿದ ಗ್ರಹಿಕೆಯನ್ನು ಬದಲಾಯಿಸಿದೆ. ಇಂದು, ಜಗತ್ತು ಹೊಸ ಯೋಗ ಆರ್ಥಿಕತೆಯನ್ನು ನೋಡುತ್ತಿದೆ. ಭಾರತದಲ್ಲಿ ಅಧಿಕೃತ ಪಾರಂಪರಿಕ ಯೋಗವನ್ನು ಕಲಿಯಲು ಬಯಸುತ್ತಾರೆ. ಜನರು ತಮ್ಮ ಫಿಟ್‌ನೆಸ್‌ಗಾಗಿ ವೈಯಕ್ತಿಕ ಯೋಗ ತರಬೇತುದಾರರನ್ನು ಸಹ ಇರಿಸುತ್ತಿದ್ದಾರೆ. ಇವೆಲ್ಲವೂ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.

About The Author