ಶಿವಮೊಗ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಸ್ವಾಮಿ ವಿವೇಕಾನಂದ ಯುವಕರ ಸ್ವ-ಸಹಾಯ ಗುಂಪುಗಳನ್ನು ರಚಿಸಿ, ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿ 18-29 ವರ್ಷದೊಳಗಿನ 10 ಯುವಕ/ಯುವತಿಯರನ್ನು ಆಯ್ಕೆ ಮಾಡಲು ಗೂಗಲ್ ಶೀಟ್ ನಮೂನೆಯಲ್ಲಿ ಭರ್ತಿ ಮಾಡಲು ಅವಶ್ಯ ಮಾಹಿತಿಯನ್ನು ಭರ್ತಿ ಮಾಡುವಂತೆ ತಿಳಿಸಿದೆ.
ಈಗಾಗಲೇ ನೋಂದಾವಣೆಗೊಂಡು ಚಾಲ್ತಿಯಲ್ಲಿರುವ ಯುವ ಸಂಘ ಮತ್ತು ಸದಸ್ಯರುಗಳ ವಿವರಗಳನ್ನು https://forms.gle/Hx9k2Qbtj844yKLV9 ಇಲ್ಲಿ ಸ್ಪಷ್ಟವಾಗಿ ಕೂಡಲೇ ದಾಖಲೀಕರಣ ಮಾಡಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರನ್ನು ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




