ಮುಂಬೈ:ಕೊನೆಯಲ್ಲಿ ರಾಹುಲ್ ತೆವಾಟಿಯಾ ಅವರ ಎರಡು ರೋಚಕ ಸಿಕ್ಸರ್‍ಗಳ ನೆರೆವಿನಿಂದ ಗುಜರಾತ್ ಟೈಟಾನ್ಸ್ ಪಂಜಾಬ್ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಗೆಲುವಿನ ಓಟವನ್ನು ಮುಂದುವರೆಸಿದೆ.
ಬ್ರಾಬೊರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು.ಪಂಜಾಬ್ ಪರ ಮಯಾಂಕ್ ಅಗರ್‍ವಾಲ್ (5 ರನ್) ಮತ್ತೆ ವೈಫಲ್ಯ ಅನುಭವಿಸಿದರು.
ಜಾನಿ ಬೈರ್‍ಸ್ಟೊ (8) ಲಿವೀಂಗ್ ಸ್ಟೋನ್ ಜೊತೆಗೂಡಿದ ಶಖರ್ ಧವನ್ 35 ರನ್‍ಗಳಿಸಿದರು. ಅಬ್ಬರದ ಬ್ಯಾಟಿಂಗ್ ಮಾಡಿದ ಲಿವೀಂಗ್ ಸ್ಟೋನ್ 21 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.ಜಿತೇಶ್ ಶರ್ಮಾ23, ಇಡಿಯಾನ್ ಸ್ಮಿತ್ 0,ಶಾರುಖ್ ಖಾನ್ 15, ರಬಾಡ 1, ರಾಹುಲ್ ಚಾಹರ್ 22, ವೈಭವ್ 2, ಅರ್ಷದೀಪ್ ಅಜೇಯ 22 ರನ್ ಗಳಿಸಿದರು.
ಲಿವೀಂಗ್ ಸ್ಟೋನ್ 64 ರನ್ ಗಳಿಸಿದರು. ಪಂಜಾಬ್ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.
190 ರನ್‍ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಓಪನರ್ ಮ್ಯಾಥ್ಯುವ್ ವೇಡ್ 6, ಸಾಯಿ ಸುದರ್ಶನ್ 35, ಹಾರ್ದಿಕ್ ಪಾಂಡ್ಯ 27, ಶುಭಮನ್ ಗಿಲ್ 96 ರನ್ ಗಳಿಸಿದರು. 20ನೇ ಓವರ್‍ನ ಕೊನೆಯ 2 ಎಸೆತಗಳಲ್ಲಿ 12 ರನ್ ಬೇಕಿದ್ದಾಗ ರಾಹುಲ್ ತೆವಾಟಿಯಾ ಒಡಿಯಾನ್ ಸ್ಮಿತ್ ಸಿಕ್ಸರ್‍ಗೆ ಅಟ್ಟಿ ತಂಡಕ್ಕೆ ರೋಚಕ ಗೆಲುವನ್ನು ತಂದುಕೊಟ್ಟರು.
ಡೇವಿಡ್ ಮಿಲ್ಲರ್ 6 ರನ್ ಗಳಿಸಿದರು. ಗುಜರಾತ್ 4 ವಿಕೆಟ್ ನಷ್ಟಕ್ಕೆ 190 ರನ್‍ಗಳಿಸಿ ಗೆಲುವಿನ ದಡ ಸೇರಿತು. 96 ರನ್ ಗಳಿಸಿದ ಶುಭಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.