ಮುಂಬೈ:ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದ ನೆರೆವಿನಿಂದ ಗುಜರಾತ್ ಟೈಟಾನ್ಸ್ ಬಲಿಷ್ಠ ರಾಜಸ್ಥಾನ ರಾಯಲ್ಸ್ ವಿರುದ್ಧ 33 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 193 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ಆರಂಭಿಕಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕಲ್ ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ದೇವದತ್ ಪಡಿಕಲ್ ಯಶ್ ದಯಾಳ್‍ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ದಾಳಿಗಿಳಿದ ವೇಗಿ ಫಗ್ರ್ಯಸನ್ ಅಶ್ವಿನ್ (8) ಹಾಗೂ ಅರ್ಧ ಶತಕ ಗಳಿಸಿದ್ದ ಜೋಸ್ ಬಟ್ಲರ್ ಅವನ್ನು ಬಲಿ ತೆಗೆದುಕೊಂಡು. ನಂತರ ಬಂದ ಸಂಜು ಸ್ಯಾಮ್ಸನ್ 11, ರಾನ್ ವೆನ್ ಡೆರ್ ಡಸನ್ (6), ಶಿಮ್ರಾನ್ ಹೇಟ್ಮಂiÀiರ್ 29, ರಿಯಾನ್ ಪರಾಗ್ 18, ಜೇಮ್ಸ್ ನಿಶಾಮ್ 17, ಪ್ರಸಿದ್ಧ ಕೃಷ್ಣ ಅಜೇಯ 4, ಯಜ್ವಿಂದರ್ ಚಾಹಲ್ 5 ರನ್ ಗಳಿಸಿದರು.
ರಾಜಸ್ಥಾನ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿತು. ವೇಗಿಗಳಾದ ಫಗ್ರ್ಯೂಸನ್ ಹಾಗೂ ಯಶ್ ದಯಾಳ್ ತಲಾ 3 ವಿಕೆಟ್ ಪಡೆದರು.
ರಾಯಲ್ಸ್‍ಗೆ 193 ರನ್‍ಗಳ ಗುರಿ
ನಾಯಕ ಹಾರ್ದಿಕ್ ಪಾಂಡ್ಯ ಅವರ ಅಮೋಘ ಬ್ಯಾಟಿಂಗ್ ನೆರೆವಿನಿಂದ ಗುಜರಾತ್ ಟೈಟಾನ್ಸ್ ಬಲಿಷ್ಠ ರಾಜಸ್ಥಾನ ರಾಯಲ್ಸ್‍ಗೆ 193 ರನ್‍ಗಳ ಗುರಿ ನೀಡಿತು.
ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದÀ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಗುಜರಾತ್ ಪರ ವಥ್ಥೀವ್ ವೇಡ್ 12, ಶು`Àಮನ್ ಗಿಲ್ 13, ವಿಜಯ್ ಶಂಕರ್ 2, ಹಾರ್ದಿಕ್ ಪಾಂಡ್ಯ ಅಜೇಯ 87, ಅಭಿನವ್ ಮನೋಹರ್ 43 ರನ್, ಡೇವಿಡ್ ಮಿಲ್ಲರ್ ಅಜೇಯ 31 ಗಳಿಸಿದರು. ಗುಜರಾತ್ ತಂಡ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆ ಹಾಕಿತು.