ಪುಣೆ:ಪುಣೆಯಲ್ಲಿ ನಡೆದ ಆರ್‍ಸಿಬಿ ಹಾಗೂ ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯ ಅಹಿತಕರ ಘಟನೆಗೆ ಸಾಕ್ಷಿಯಾಯಿತು.
ಪಂದ್ಯದ ವೇಳೆ ವೇಗಿ ಹರ್ಷಲ್ ಪಟೇಲ್ ಹಾಗೂ ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಹರ್ಷಲ್ ಪಟೇಲ್ ಅವರ ಕೊನೆಯ ಓವರ್‍ನಲ್ಲಿ 1 ಬೌಂಡರಿ 2 ಸಿಕ್ಸರ್ ಸೇರಿ ಒಟ್ಟು 18 ರನ್ ಚೆಚ್ಚಿದ್ದರು, ಕೊನೆಯ ಎಸೆತದಲ್ಲಿ ರಿಯಾನ್ ಪರಾಗ್ ಸಿಕ್ಸರ್ ಹೊಡೆದಿದ್ದು ಹರ್ಷಲ್ ಪಟೇಲ್ಗೆ ಕೋಪ ತರಿಸಿತ್ತು.
ನಂತರ ಇನ್ನಿಂಗ್ಸ್ ಮುಗಿಸಿ ಪೆಲಿಯನಗೆ ಮರಳುತ್ತಿದ್ದಾಗ ಹರ್ಷಲ್ ಪಟೇಲ್ ರಿಯಾನ್ ಪರಾಗ್ ಅವರನ್ನು ಕೆಣಕಿದ್ದಾರೆ. ಆ ಕ್ಷಣ ಕೋಪಗೊಂಡ ರಿಯಾನ್ ಪರಾಗ್ ಕೂಡ ಮಾತಿನ ಚಕಮಕಿ ನಡೆಸಿದ್ದಾರೆ. ಸಹ ಆಟಗಾರರು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.
ಬ್ಯಾಟಿಂಗ್ ಮಾಡಿದ ಆರ್ಸಿಬಿ 19.3 ಓವರ್ ಗಳಲ್ಲಿ 115 ರನ್ ಗಳಿಸಿ 29 ರನ್ಗಳಿಂದ ಸೋಲು ಕಂಡಿತು. ಕೊನೆಯದಾಗಿ ಔಟ್ ಆಗಿದ್ದು ಹರ್ಷಲ್ ಪಟೇಲ್. ಹರ್ಷಲ್ ಪಟೇಲ್ ಕ್ಯಾಚ್ ಕೊಟ್ಟಿದ್ದು ರಿಯಾನ್ ಪರಾಗೆಗೆ.
ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಿದರು. ಆದರೆ ಹರ್ಷಲ್ ಪಟೇಲ್ ರಿಯಾನ್ ಪರಾಗ್ಗೆ ಕೈಕುಲಕಲಿಲ್ಲ ಅವರನ್ನು ನಿರ್ಲಕ್ಷಿಸಿದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕ್ರೀಡಾಸ್ಫೂರ್ತಿ ಮರೆತ ಹರ್ಷಲ ಪಟೇಲ್ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಗರಂ ಆಗಿದ್ದಾರೆ.