Wednesday, June 19, 2024

Latest Posts

ಡೆಲ್ಲಿ ತಂಡಕ್ಕೆ ವಿರೋಚಿತ ಸೋಲು  

- Advertisement -

ಮುಂಬೈ:ಮೊಹ್ಸಿನ್ ಖಾನ್ ಅವರ ಸೊಗಸಾದ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಲಕ್ನೊ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ರನ್ ಗಳ ರೋಚಕ ಗೆಲುವು ದಾಖಲಿಸಿದೆ.

ವಾಂಖೆಡೆ ಮೈದಾನದಲ್ಲಿ ನಡೆದ ಜಿದ್ದಜಿದ್ದಿನ ಕದನದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಲಕ್ನೊ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟಾನ್ ಡಿಕಾಕ್ ಹಾಗೂ ನಾಯಕ ಕೆ.ಎಲ್.ರಾಹುಲ್ ಮೊದಲ ವಿಕೆಟ್ಗೆ 42 ರನ್ ಸೇರಿಸಿದರು.

ಈ ವೇಳೆ ದಾಳಿಗಿಳಿದ ವೇಗಿ ಶಾರ್ದೂಲ್ ಕ್ವಿಂಟಾನ್ ಡಿ ಕಾಕ್ ಅವರನ್ನು ಪೆವಲಿಯನ್ಗೆ ಅಟ್ಟಿದರು.ಬೊಂಬಾಟ್ ಬ್ಯಾಟಿಂಗ್ ಮಾಡಿದ ರಾಹುಲ್ 35 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ಹೂಡಾ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. 52 ರನ್ ಗಳಿಸಿದ್ದ ದೀಪಕ್ ಹೂಡಾ ಶಾದೂ್ಲ್ಗೆ ವಿಕೆಟ್ ಒಪ್ಪಿಸಿದರು. 77 ರನ್ ಗಳಿಸಿ ಮುನ್ನುಗುತ್ತಿದ್ದ ರಾಹುಲ್ ಲಿಲಿತ್ ಯಾದವ್ ಕ್ಯಾಚ್ ಗೆ ನೀಡಿ ಹೊರ ನಡೆದರು.

ಸ್ಟೋಯ್ನಿಸ್ 17, ಕೃಣಾಲ್ 9 ರನ್ ಗಳಿಸಿದರು. ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಶಾರ್ದೂಲ್ 3 ವಿಕೆಟ್ ಪಡೆದರು.

196 ರನ್ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ವೇಗಿ ಮೊಹ್ಸಿನ್ ಖಾನ್ ಆಘಾತ ಮೇಲೆ ಆಘಾತ ನೀಡಿದರು. ಆರಂಭಿಕರಾದ ಪೃಥ್ವಿ ಶಾ 5, ಡೇವಿಡ್ ವಾರ್ನರ್ 3,  ಮಿಚೆಲ್ ಮಾರ್ಷ್ ಜೊತೆಗೂಡಿದ ನಾಯಕ ರಿಷಭ್ ಪಂತ್ ತಂಡದ ಕುಸಿತ ತಡೆದರು. 37 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ಗೌತಮ್ಗೆ ಬಲಿಯಾದರು.

44 ರನ್ ಗಳಿಸಿದ್ದ ಮೊಹ್ಸನ್ ಖಾನ್ ಗೆ ಬಲಿಯಾದರು. ಲಿಲಿತ್ ಯಾದವ್ 3,  ರೊವಮನ್ ಪೊವೆಲ್ 35, ಅಕ್ಷರ್ ಪಟೇಲ್ ಅಜೇಯ 42 ರನ್ ಗಳಿಸಿದರು. ಕುಲದೀಪ್ ಅಜೇಯ 16 ರನ್ ಗಳಿಸಿದರು.

ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. 7 ರನ್ ಗಳ ವಿರೋಚಿತ ಸೋಲು ಅನುಭವಿಸಿತು. ಮೊಹ್ಸಿನ್ ಖಾನ್ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿದರು.

- Advertisement -

Latest Posts

Don't Miss