ಮುಂಬೈ:ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ 29 ರನ್ಗಳ ಸೋಲು ಅನುಭವಿಸಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಸ್ ಬಟ್ಲರ್(8) ಹಾಗೂ ದೇವದತ್ ಪಡಿಕಲ್ (7 ರನ್) ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ಮೂರನೆ ಕ್ರಮಾಂಕದಲ್ಲಿ ಬಂದ ಆರ್ .ಅಶ್ವಿನ್ 17, ಸಂಜು ಸ್ಯಾಮ್ಸನ್ 27, ಡಿರಿಲಿ ಮಿಚೆಲ್ 16 ರನ್ ಗಳಿಸಿದರು. ಶಿಮ್ರಾನ್ ಹೇಟ್ಮಯರ್ 3, ಟ್ರೆಂಟ್ ಬೌಲ್ಟ್ 5, ಪ್ರಸಿದ್ದ ಕಷ್ಣ 2 ರನ್ ಗಳಿಸಿದರು.
ಸ್ಪೋಟಕ ಬ್ಯಾಟಿಂಗ್ ಮಾಡಿದರಿಯಾನ್ ಪರಾಗ್ 3 ಬೌಂಡರಿ ಹಾಗೂ 4 ಸಿಕ್ಸರ್ ನೆರೆವಿನಿಂದ 56 ರನ್ ಚಚ್ಚಿದರು. ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಮೊಹ್ಮದ್ ಸಿರಾಜ್, ಜೋಶ್ ಹೆಜ್ಲವುಡ್ ಹಾಗೂ ವನಿಂದು ಹಸರಂಗ ತಲಾ 2 ವಿಕೆಟ್ ಪಡೆದರು.
145 ರನ್ ಗಳ ಬೆನ್ನತ್ತಿದ ಆರ್ಸಿಬಿ ಉತ್ತಮ ಆರಂಭ ಕೊಡಲಿಲ್ಲ. ವಿರಾಟ್ ಕೊಹ್ಲಿ 9, ಫಾಫ್ ಡುಪ್ಲೆಸಿಸ್ 23, ರಜತ್ ಪಟಿದಾರ್ 16, ಗ್ಲೆನ್ ಮ್ಯಾಕ್ಸವೆಲ್ 0, ಶಬಾಜ್ ಅಹ್ಮದ್ 17, ಸುಯೇಷ್ ಪ್ರಭುದೇಸಾಯಿ 2, ದಿನೇಶ್ ಕಾರ್ತಿಕ್ 6, ವನಿಂದು ಹಸರಂಗ 18, ಹರ್ಷಲ ಪಟೇಲ್ 8, ಮೊಹ್ಮದ್ ಸಿರಾಜ್ 5 ರನ್ ಗಳಿಸಿದರು.
ಆರ್ ಸಿಬಿ 19.3 ಓವರ್ ಗಳಲ್ಲಿ 115 ರನ್ ಗಳಿಗೆ ಆಲೌಟ್ ಆಯಿತು. ಕುಲದೀಪ್ ಸೇನ್ 4, ಆರ್.ಅಶ್ವಿನ್ 3 ವಿಕೆಟ್ ಪಡೆದರು. ರಿಯಾನ್ ಪರಾಗ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.