ಮುಂಬೈ:ಐಪಿಎಲ್ ನ 62ನೇ ಪಂದ್ಯದಲ್ಲಿ ಇಂದು ಬಲಿಷ್ಠ ಟೈಟಾನ್ಸ್ ತಂಡವನ್ನು ಚೆನ್ನೈ ತಂಡ ಎದುರಿಸಲಿದೆ.
ವಾಂಖೆಡೆ ಯಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿದೆ. ಅಗ್ರ ಸ್ಥಾನದಲ್ಲಿರುವ ಟೈಟಾನ್ಸ್ ಈಗಾಗಲೇ ಪ್ಲೇಆಫ್ ಪ್ರವೇಶಿಸಿದೆ. ಇನ್ನು ಧೋನಿ ನೇತೃತ್ವದ ಚೆನ್ನೈ ತಂಡ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರ ಬಿದ್ದಿದೆ.
ಈ ಪಂದ್ಯ ಎರಡೂ ತಂಡಗಳಿಗೂ ಬೆಂಚ್ ಪರೀಕ್ಷಿಸಲು ಸಹಾಯ ಮಾಡಲಿದೆ. ಟೈಟಾನ್ಸ್ ತಂಡಕ್ಕೆ ಈ ಪಂದ್ಯ ಗೆದ್ದಿದ್ದೆ ಆದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡಲಿದೆ.
ಚೆನ್ನೈ ಪರ ಋಉತುರಾಜ್ ಗಾಯಕ್ವಾಡ್ ಹಾಗೂ ಡೇವೊನ್ ಕಾನ್ವೆ ಅದ್ಬುತ ವಾಗಿ ಬ್ಯಾಟಿಂಗ್ ಮಾಡಿದರು. ಮುಖೇಶ್ ಚೌಧರಿ ಹಾಗೂ ಸಿಮ್ರಾನ್ ಜೀತ್ ಸಿಂಗ್ ಭರವಸೆ ಮೂಡಿಸಿದರು.
ಮಹೇಶ್ ತೀಕ್ಷ್ಣ ಚೊಚ್ಚಲ ಐಪಿಎಲ್ನಲ್ಲಿ 12 ವಿಕೆಟ್ ಪಡೆದರು. ಮುಂದಿನ ಆವೃತ್ತಿಯಲ್ಲೂ ಎಂ.ಎಸ್.ಧೋನಿ ನಾಯಕರಾಗಿ ಮುಂದುವರೆಯುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ಅಂಬಾಟಿ ರಾಯ್ಡುಗೆ ಇದು ಕೊನೆ ಐಪಿಎಲ್ ಆಗಿದೆ. ಡ್ವೇನ್ ಬ್ರಾವೋ ಇನ್ನು ಯುವ ಕ್ರಿಕೆಟಿಗರಂತೆ ಪ್ರದರ್ಶನ ನೀಡುತ್ತಿರುವುದು ಅಚ್ಚರಿ ನೀಡಿದೆ.
ಇನ್ನು ಟೈಟಾನ್ಸ್ ತಂಡ ಲಕ್ನೊ ವಿರುದ್ಧ ಗೆಲ್ಲುವ ಮೂಲಕ ಲಯಕ್ಕೆ ಮರಳಿದೆ. ಮ್ಯಾಥೀವ್ ವೇಡ್ ಓಪನರ್ ಆಗಿ ವಿಫಲರಾಗಿದ್ದರು.ಇದೀಗ ನಂ.3ರಲ್ಲಿ ಆಡುತ್ತಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಲಾಕಿ ಫರ್ಗ್ಯೂಸನ್ ಕಳೆದ ಪಂದ್ಯದಲ್ಲ ಆಡಿರಲಿಲ್ಲ. ಅಲಜಾರಿ ಜೋಸೆಫ್ ಅಥವಾ ಮೊಹ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

