Dharwad News: ಧಾರವಾಡ: ನಾಳೆ ಹುಬ್ಬಳ್ಳಿ- ಧಾರವಾಡದಲ್ಲಿ 52 ಸೆಂಟರ್ಗಳಲ್ಲಿ ಪಿಎಸ್ಐ ಪರೀಕ್ಷೆ ನಡೆಯುತ್ತಿದ್ದು, ಈ ಬಗ್ಗೆ ಕಮಿಷನರ್ ಶಶಿಕುಮಾರ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ಅವಳಿ ನಗರದಲ್ಲಿ ನಾಳೆ 52 ಸೆಂಟರ್ ಗಳಲ್ಲಿ ಪಿ ಎಸ್ ಐ ಪರೀಕ್ಷೆ ನಡೆಯುತ್ತಿದೆ. ಎಲ್ಲಾ ಸೆಂಟರ್ ಗಳಲ್ಲಿ ಸಿಸಿಟಿವಿ ಹಾಕಲಾಗಿದೆ. ಕೆ ಇ ಇ ಅವರು ಪರೀಕ್ಷೆಯನ್ನ ಕಂಡೆಕ್ಟ ಮಾಡಿದ್ದಾರೆ. ಸಿಬ್ಬಂದಿಗಳನ್ನ ಅವರೆ ನಿಯೋಜನೆ ಮಾಡಿಕ್ಕೊಳ್ಳುತ್ತಾರೆ. ಅಬ್ಯರ್ಥಿಗಳು ಎಲೆಕ್ಟ್ರಿಕಲ್ ಡಿವೈಸ್ ತರಬಾರದು. ವಾಚ್ ಮೊಬೈಲ್ ಏನೂ ತರಬಾರದು. ಬೆಳಿಗ್ಗೆ 10:30 ರಿಂದ ಮದ್ಯಾಹ್ನ 2:30 ರವೆಗೆ ಪರಿಕ್ಷೆ ಇರುತ್ತೆ. ಎರಡು ಘಂಟೆ ಮುಂಚನೆ ಸೆಂಟರ ಗಳಿಗೆ ಬರಬೇಕು. ಪ್ರತಿ ಸೆಂಟರಗಳಲ್ಲಿ ಹಿರಿಯ ಅಧಿಕಾರಿಗಳು ಇರುತ್ತಾರೆ. ಮಾಲ್ ಪ್ರ್ಯಾಕ್ಟಿಸ್ ಗೆ ಅವಕಾಶವಿಲ್ಲ. ಅವಳಿ ನಗರದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಸರಳವಾಗಿ ನಡೆಯುವ ಹಾಗೆ ಕಮಿಷನರೇಟ್ ನಿಂದ ಬಂದೋಬಸ್ತ್ ಮಾಡಲಾಗುವುದು ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಧಾರವಾಡದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ, ಧಾರವಾಡದ ಟಿಪ್ಪು ಸರ್ಕಲ್ಗೆ ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರ ಜೊತೆ ಮಾತನಾಡಿರುವ ಶಶಿಕುಮಾರ್, ಗಾಂಧಿ ಜಯಂತಿ ಸಮಯದಲ್ಲಿ ದಲಿತಪರ ಸಂಘಟನೆಗಳು ಗಾಂಧಿ ಜಯಂತಿ ಆಚರಣೆ ಮಾಡಿದ್ದಾರೆ.ಕೆಲವರು ಪ್ಲ್ಯಾಗ್ ಗಳನ್ನ ಅಲ್ಲಿ ಹಾಕಿ ಹೋಗಿದ್ದಾರೆ. ಸದ್ಯ ಸ್ಥಳದಲ್ಲಿ ಟಿಪ್ಪು ಸುಲ್ತಾನ್ ಅವರನ್ನ ಬಿಂಬಿಸುವ ದ್ವಜವನ್ನ ಕಟ್ಟಿದ್ದರು. ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಮೇಲ್ಗಡೆ ಇತ್ತು. ಅದನ್ನ ನಮ್ಮ ಶಹರ ಪೋಲಿಸರು ಗಮನಕ್ಕೆ ತಂದಿದ್ದರು. ಕೂಡಲೆ ಮಹಾನಗರ ಪಾಲಿಕೆಗೆ ಕರೆ ಮಾಡಿ ಧ್ವಜವನ್ನ ತೆರವು ಮಾಡಲಾಗಿದೆ. ಅಗತ್ಯ ಕ್ರಮ ತೆಗೆದುಕ್ಕೊಳ್ಳುತ್ತೆವೆ ಎಂದು ಶಶಿಕುಮಾರ್ ಹೇಳಿದ್ದಾರೆ.




