ಬೆಂಗಳೂರು: ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ವರ್ಗಾವಣೆ ಮಾಡಲಾಗಿದೆ. ಬುಧವಾರ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸೀಮಾ ಲಾಟ್ಕರ್‌ರನ್ನು ಮೈಸೂರಿನ ನೂತನ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಕಳೆದ ಎರಡು ವಾರಗಳಿಂದ ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಹಲವಾರು ವರ್ಗಾವಣೆಗಳನ್ನು ಮಾಡುತ್ತಿದೆ. ಮೊದಲು ಇನ್ಸ್‌ಪೆಕ್ಟರ್, ಬಳಿಕ ಸಿವಿಲ್ ಡಿವೈಎಸ್ಪಿಗಳ ವರ್ಗಾವಣೆ ನಡೆದಿತ್ತು. ನಂತರ ಸಿವಿಎಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ನಡೆದಿತ್ತು. ಈಗ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಜನಸಂದಣಿಯಲ್ಲಿ ಮಾಸ್ಕ್ ಧರಿಸಿ : ಪರಿಶೀಲನಾ ಸಭೆಯಲ್ಲಿ ಕೇಂದ್ರ ಸರ್ಕಾರ ಸಲಹೆ
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು ಆರ್. ಚೇತನ್. ಎಸ್ಪಿ ರಾಜ್ಯ ಗುಪ್ತಚರ ಇಲಾಖೆ , ಸೀಮಾ ಲಾಟ್ಕರ್. ಎಸ್ಪಿ ಮೈಸೂರು ಜಿಲ್ಲೆ , ಶಿವಪ್ರಕಾಶ್ ದೇವರಾಜ್. ಎಐಜಿಪಿ, ಸಿಸಿಬಿ ಬೆಂಗಳೂರು, ಎಂ. ಮುತ್ತುರಾಜ್. ಮೈಸೂರು ಡಿಸಿಪಿ. ಕಾನೂನು ಸುವ್ಯವಸ್ಥೆ, ಬಾಬಾಸಾಬ್ ನೇಮೇಗೌಡ. ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆಗೆ ಮಂಜೂರಾಗಿದ್ದ ಹುದ್ದೆಗಳನ್ನು ಬಳಸಿಕೊಂಡು ಹೊಸದಾಗಿ ಪೊಲೀಸ್ ಉಪ ವಿಭಾಗ ಮತ್ತು ಸಂಚಾರ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುವ ಕುರಿತು ಸಹ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಂಜೂರಾಗಿದ್ದ ಸಿವಿಲ್ ಮತ್ತು ಸಶಸ್ತ್ರ ಹುದ್ದೆಗಳನ್ನು ಲೋಕಾಯುಕ್ತ ಸಂಸ್ಥೆಗೆ ಹಾಗೂ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿ, ಮುಂದಿನ ಮರು ಸ್ಥಳ ನಿಯುಕ್ತಿಗೊಳಿಸಿ ಸಹ ಆದೇಶಿಸಲಾಗಿದೆ.
ಗ್ರಾ.ಪಂ.ನಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸಿ ಸಾಮಾನ್ಯ ಸಭೆ ರದ್ದು : ಸದಸ್ಯರಿಂದ ತೀವ್ರ ಆಕ್ರೋಶ
ರಾಜ್ಯದಲ್ಲಿ ಜನತಾದಳ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ : ಹೆಚ್.ಡಿ..ಕುಮಾರಸ್ವಾಮಿ