ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ನೇತೃತ್ವದ NDA ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಬಲ ಪ್ರದರ್ಶನ ನೀಡಿದೆ. ಕೇರಳದಂತಹ ರಾಜ್ಯದಲ್ಲಿ ತಿರುವನಂತಪುರಂ ಭಾಗದಲ್ಲಿ ಬಿಜೆಪಿ ಗೆದ್ದಿರುವುದು ಪಕ್ಷಕ್ಕೆ ಸ್ಪೂರ್ತಿದಾಯಕವಾಗಿದೆ ಮತ್ತು ಇತರ ಪಕ್ಷಗಳಿಗೆ ಶಾಕ್ ನೀಡಿದೆ.
1987ರಲ್ಲಿ 26 ವರ್ಷ ವಯಸ್ಸಿನರಾಗಿದ್ದ ಮಲಯಾಳಿ ಮಹಿಳೆಯ ಹೆಸರು ಸುದ್ದಿಯಲ್ಲಿತ್ತು. R. ಶ್ರೀಲೇಖಾ. IPS ಅಧಿಕಾರಿಯಾಗುವ ಕನಸನ್ನು ಸಾಧಿಸಿದ ಮೊದಲ ಮಲಯಾಳಿ ಮಹಿಳೆ. ತಮ್ಮ ತಂದೆ ವೇಲಾಯುಧನ್ ನಾಯರ್ ಅವರ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದ ಮೂಲಕ ಈ ಸಾಧನೆಯನ್ನು ಸಾಧಿಸಿದ್ದರು.
ಶ್ರೀಲೇಖಾ ತಮ್ಮ ಶಿಕ್ಷಣವನ್ನು ತಿರುವನಂತಪುರಂ ನಗರದ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಕಾಲೇಜು ಶಿಕ್ಷಕಿ, ರಿಸರ್ವ್ ಬ್ಯಾಂಕ್ ಅಧಿಕಾರಿ, ಬರಹಗಾರ್ತಿ ಮತ್ತು IPS ಅಧಿಕಾರಿಯಾಗಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಇದೀಗ ತಿರುವನಂತಪುರಂ ಸಸ್ತಮಂಗಲಂ ವಾರ್ಡ್ನ ಜನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲೇ ಗಮನ ಸೆಳೆದ ಸ್ಪರ್ಧಿಗಳಲ್ಲಿ ಶ್ರೀಲೇಖಾ ಒಬ್ಬರು.
ರಾಜಧಾನಿಯ ನಟ ಮತ್ತು ಸಂಸದ ಸುರೇಶ್ ಗೋಪಿ ಅವರ ಮನೆಯೂ ಸಸ್ತಮಂಗಲಂ ವಾರ್ಡ್ನಲ್ಲಿ ಇರುವುದರಿಂದ, ಬಿಜೆಪಿ ಭಾರಿ ಪ್ರಗತಿ ಸಾಧಿಸಿರುವ ಪುರಸಭೆಯಲ್ಲಿ, ಶ್ರೀಲೇಖಾ ವಾರ್ಡ್ ಮಟ್ಟದ ಮಾತ್ರವಲ್ಲ, ಬಹುಶಃ ಇಡೀ ನಗರದ ಮೇಯರ್ ಸ್ಥಾನಕ್ಕೂ ಮುಂಚೂಣಿಯಲ್ಲಿದ್ದಾರೆ ಎಂದು ವಿಶ್ಲೇಷಕರ ಅಭಿಪ್ರಾಯ.
ಶ್ರೀಲೇಖಾ ಅವರ ಸೇವಾ ಅವಧಿಯಲ್ಲಿ ಕೆಲ ವಿವಾದಗಳೂ ಎದುರಾದವು. ಖ್ಯಾತ ನಟ ದಿಲೀಪ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅವರು ಜೈಲಿನ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಆರೋಪಿಗಳಿಗೆ ಆಹಾರ ಮತ್ತು ನೀರು ನೀಡಿದ್ದ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ. ಆದರೆ ಶ್ರೀಲೇಖಾ ತಮ್ಮ ನಿಲುವಿನಲ್ಲಿ ದೃಢವಾಗಿ ನಿಂತಿದ್ದು, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಪ್ರಕರಣದಲ್ಲಿ ದಿಲೀಪ್ ಖುಲಾಸೆ ಹೊಂದಿದ್ದುದರಿಂದ, ಶ್ರೀಲೇಖಾ ಹೀರೋತ್ವ ಮತ್ತಷ್ಟು ಬಲವಂತವಾಗಿದೆ.
33 ವರ್ಷ ಐದು ತಿಂಗಳು ಸೇವೆ ಸಲ್ಲಿಸಿದ ನಂತರ, ಡಿಸೆಂಬರ್ 31, 2020 ರಂದು ಶ್ರೀಲೇಖಾ ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿಯಾಗಿ ನಿವೃತ್ತರಾಗಿದರು. ಈಗ ಅವರು ತಮ್ಮ ರಾಜಕೀಯ ಪ್ರವೇಶದ ಮೂಲಕ ಸ್ಥಳೀಯ ಆಡಳಿತದಲ್ಲಿ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.
ವರದಿ : ಲಾವಣ್ಯ ಅನಿಗೋಳ




