Tuesday, November 18, 2025

Latest Posts

ಐಶ್ವರ್ಯ ಮಗಳು ಆರಾಧ್ಯ ಸ್ಕೂಲ್‌ ಫೀಸ್ ಇಷ್ಟೊಂದಾ?

- Advertisement -

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಮಗಳು ಆರಾಧ್ಯ ಬಚ್ಚನ್ ತನ್ನ 14ನೇ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡಿದ್ದಾರೆ. ಬಾಲಿವುಡ್‌ನ ಬಹು ಚರ್ಚಿತ ಸ್ಟಾರ್‌ಕಿಡ್ಸ್‌ಗಳಲ್ಲಿ ಆರಾಧ್ಯ ಪ್ರಮುಖರು. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ವೈರಲ್ ಆಗುತ್ತವೆ. ಈಗ ಅವರ ಶಾಲಾ ಶುಲ್ಕ ಎಷ್ಟು ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ.

ಬಾಲಿವುಡ್‌ನ ಅನೇಕ ಸೆಲೆಬ್ರಿಟಿ ಮಕ್ಕಳು ಶಿಕ್ಷಣ ಪಡೆಯುವ ಸ್ಥಳವೆಂದರೆ ಮುಂಬೈನ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆ. ಈ ಶಾಲೆಯ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಸ್ಟಾರ್ ಪೋಷಕರು ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆರಾಧ್ಯ ಬಚ್ಚನ್ ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ.

2011ರ ನವೆಂಬರ್ 16ರಂದು ಜನಿಸಿದ ಆರಾಧ್ಯ, ಈಗ 14 ವರ್ಷದವರು. ಬಾಲ್ಯದಿಂದಲೇ ಈ ಶಾಲೆಯಲ್ಲೇ ನರ್ಸರಿ ತರಗತಿಯನ್ನು ಪ್ರಾರಂಭಿಸಿದ ಅವರು, ಪ್ರಸ್ತುತ ಎಂಟನೇ ತರಗತಿಗೆ ಪದೋನ್ನತಿ ಪಡೆದಿದ್ದಾರೆ. ಈ ಶಾಲೆಯ ಶುಲ್ಕಗಳು ಲಕ್ಷಾಂತರದಲ್ಲಿ ಇರುವುದೇ ವಿಶೇಷ. ಲಭ್ಯವಿರುವ ಮಾಹಿತಿಯ ಪ್ರಕಾರ, ನರ್ಸರಿ ರಿಂದ 7ನೇ ತರಗತಿಯವರೆಗೆ ತಿಂಗಳಿಗೆ ಸುಮಾರು 1.70 ಲಕ್ಷ. 8ನೇ ತರಗತಿಯಿಂದ 12ನೇ ತರಗತಿ ವರೆಗೆ ತಿಂಗಳಿಗೆ ಸುಮಾರು 4.5 ಲಕ್ಷ ರೂಪಾಯಿ.

ಐಶ್ವರ್ಯಾ ಮತ್ತು ಅಭಿಷೇಕ್, ತಮ್ಮ ಮಗಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ಇದೇ ಪ್ರಮಾಣದ ಫೀಸ್ ಪಾವತಿಸುತ್ತಾರೆ ಎಂದು ವರದಿಗಳು ಹೇಳುತ್ತವೆ. ವಿದ್ಯಾರ್ಥಿಗಳಿಗೆ ಆಧುನಿಕ ತರಗತಿಗಳು, ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳು ಈ ಶಾಲೆಯ ವಿಶೇಷತೆ. ಆರಾಧ್ಯ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಹಲವು ಬಾರಿ ವೇದಿಕೆ ಮೇಲಿನ ಪ್ರದರ್ಶನಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನೃತ್ಯ ಮತ್ತು ನಾಟಕದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಕಳೆದ ವರ್ಷ ಅವರು ಶಾರುಖ್ ಖಾನ್ ಅವರ ಮಗ ಅಬ್‌ರಾಮ್ ಜೊತೆಗೆ ವೇದಿಕೆಯ ಮೇಲೆ ನಾಟಕ ಪ್ರದರ್ಶಿಸಿದ್ದರೂ ವಿಶೇಷ ಸುದ್ದಿಯಾಯಿತು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss