Thursday, November 21, 2024

Latest Posts

ಕಾಂಗ್ರೆಸ್‌ನವರದ್ದು ಅಕ್ಬರ್ ಆಡಳಿತವೋ, ಬಾಬರ್ ಆಡಳಿತವೋ..?: ಪ್ರಮೋದ್ ಮುತಾಲಿಕ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ವಕ್ಫ್ ವಿಚಾರದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಹಾಗೂ ದೇಶಾದ್ಯಂತ ವಕ್ಫ‌ಬೋರ್ಡ್ ವಿಚಾರವಾಗಿ ಚರ್ಚೆ, ಸಂಘರ್ಷ ನಡೆಯುತ್ತಿದೆ. ಇದು ಗಂಭೀರವಾದಂತಹ ವಿಚಾರ. ಪ್ರತಿಯೊಂದು ಆಸ್ತಿ ವಿಚಾರದಲ್ಲೂ ವೈರಸ್ ಹರಡುತ್ತಿದೆ. ವಕ್ಫ್ ಬೋರ್ಡ್ ನ‌ ಅತಿಕ್ರಮಣ ನಡೆಯುತ್ತಿರೋದು ದೇಶಕ್ಕೆ ಬಹುದೊಡ್ಡ ಗಂಡಾಂತರ ಬಂದಂತೆ ಭಾಸವಾಗುತ್ತಿದೆ. ಕೇಂದ್ರ ಸರ್ಕಾರ ಕೇವಲ‌ ಕಾನೂನು‌ ತಿದ್ದುಪಡೆ ಅಂತಾ ಹೇಳಿದೆ. ಕೇಂದ್ರ ಸರ್ಕಾರ ತಿದ್ದುಪಡೆ ಬಗ್ಗೆ ಹೇಳಿದ‌ ಬೆನ್ನಲ್ಲೇ ಈ ರೀತಿ ವಿರೋಧ ಗಲಾಟೆ ನಡೆದಿದೆ. ಸ್ವತಂತ್ರ ಬಂದ‌ನಂತರ 6 ಪ್ರತಿಶತ‌ ಇದ್ದ ಜನಸಂಖ್ಯೆ 15 ಪ್ರತಿಶತ ಆಗಿದೆ. 2047 ರಲ್ಲಿ ಇಸ್ಲಾಂ ದೇಶ ಮಾಡ್ತೀವಿ‌ ಅಂತಾರೆ. ಆದ್ರೆ ಇನ್ನು 20 ವರ್ಷಗಳಲ್ಲಿ‌ ದೇಶವನ್ನ ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

ಈ‌ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು‌ ತೆಗೆದುಕೊಂಡ ನಿರ್ಣಯ ಸರಿಯಾಗಿದೆ. ಮತಬ್ಯಾಂಕ್ , ಅಧಿಕಾರದ ದಾಹ ದಾಹದಿಂದ‌ ಈ ರೀತಿ ಕಾಂಗ್ರೆಸ್ ಸರ್ಕಾರ ಹೇಳಿಕೆ‌ ನೀಡುತ್ತಿದೆ. ಧಾರವಾಡ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಅರ್ಧಕ್ಕರ್ಧ ಗ್ರಾಮಗಳ ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ಸೇರಿಸಿದ್ದಾರೆ. ಇದಕ್ಕೆಲ್ಲ ಕಾರಣೀಕರ್ತರು ಕಾಂಗ್ರೆಸ್ ನವರು. ಕಾಂಗ್ರೆಸ್ ಕೂಡಲೇ ಈ‌ ಸಂಬಂಧ ಕ್ಷಮೆ‌ ಕೇಳಬೇಕು. ಇದು‌ ಅಕ್ಬರ್ ನ ಆಡಳಿತನಾ..? ಬಾಬರ್ ನ‌ ಆಡಳಿತನಾ ..? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.

ಜಮೀರ್ ಅಹ್ಮದ ಎಂಬ‌ ದೇಶದ್ರೋಹಿ ವ್ಯಕ್ತಿ‌ ವಕ್ಫ್ ಅದಾಲತ್ ನಡೆಸ್ತಾರೆ. ಕಾಂಗ್ರೆಸ್ ತನ್ನ ಚಾಳಿಯನ್ನ ನೆಹರೂ , ಗಾಂಧಿ‌ ಇಂದ ಸಿದ್ಧರಾಮಯ್ಯ ವರೆಗೂ ಬಿಟ್ಟಿಲ್ಲ. ಜಮೀರ್ ಅಹ್ಮದ್ ಅವರನ್ನ ಕೇವಲ‌ ಗಡಿಪಾರು ಮಾಡೋದಲ್ಲ ಗಲ್ಲಿಗೇರಿಸಬೇಕು. ಲಕ್ಷಾಂತರ ರೈತರು ಬೀದಿ ಪಾಲಾಗುತ್ತಿದ್ದಾರೆ. ರಾಜ್ಯವನ್ನ ಜಮೀರ್ ಏನು‌ ಮಾಡೋಕೆ ಹೊರಟಿದ್ದಾರೆ..? ಎಂದು ರಾಜ್ಯ ಸರ್ಕಾರ ಮತ್ತು ಜಮೀರ್ ಅಹಮದ್ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

- Advertisement -

Latest Posts

Don't Miss