Wednesday, July 2, 2025

Latest Posts

ದರ್ಶನ್ ಅಸಲಿ ದಸರಾ ಶುರು? – ಡಿ ಬಾಸ್ ಫ್ಯಾನ್ಸ್​ ಜಾತ್ರೆ ಫಿಕ್ಸ್!

- Advertisement -

ದಸರಾ ಹಬ್ಬ ಈ ಸಲ ಡಿ ಬಾಸ್ ಫ್ಯಾನ್ಸ್​ ಪಾಲಿಯಗೆ ಭರ್ಜರಿ ಹಬ್ಬವಾಗಲಿದೆ.. ಮತ್ತೊಮ್ಮೆ ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಿ ಜಾತ್ರೆ ಮಾಡೋ ಸಾಧ್ಯತೆ ಹೆಚ್ಚಾಗಿದೆ.. ಕಾರಣ ಇಷ್ಟೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇದೇ ಸೆಪ್ಟೆಂಬರ್ 25ಕ್ಕೆ ರಿಲೀಸ್​ ಆಗಲಿದೆ ಅನ್ನೋ ಅಪ್ಡೇಟ್ ಸಿಕ್ಕಿದೆ..

ಕಾಟೇರ ಸಿನಿಮಾ ಬಳಿಕ ರೇಣುಕಾಚಾರ್ಯ ಕೊಲೆ ಕೇಸ್​​ ನಲ್ಲಿ ಜೈಲು ಸೇರಿ ಬಂದಿದ್ದ ದರ್ಶನ್​ ಅವರನ್ನ ಕಣ್ತುಂಬಿಕೊಳ್ಳಬೇಕು ಅಂತ ಫ್ಯಾನ್ಸ್ ಕಾಯ್ತಾನೇ ಇದ್ರು.. ಅತಿದೊಡ್ಡ ಫ್ಯಾನ್ ಬೇಸ್ ಹೊಂದಿರೋ ದರ್ಶನ್ ಹೊಸ ಚಿತ್ರಕ್ಕಾಗಿ ಅಭಿಮಾನಿಗಳೂ ಸಹ ಬಕಪಕ್ಷಿಗಳಂತೆ ಕಾಯ್ತಿದ್ರು.. ದರ್ಶನ್ ಫ್ಯಾನ್ಸ್ ಗಳಲ್ಲಿ ಈಗಾಗಲೇ excitement ಶುರುವಾಗಿದ್ದು ಸಿನೆಮಾ ಬಿಡುಗಡೆಗೆ ಕಾದು ಕುಳಿತ್ತಿದ್ದಾರೆ.

ಚಿತ್ರತಂಡ 10 ದಿನಗಳಲ್ಲಿ ಹಾಡುಗಳ ಶೂಟ್ ಮುಗಿಸಲು ಯೋಜನೆ ಮಾಡಿದ್ದು, ಸೆಪ್ಟೆಂಬರ್ 25 ಕ್ಕೆ ಸಿನಿಮಾ ರಿಲೀಸ್ ಫಿಕ್ಸ್ ಆಗಿದೆ. ಜುಲೈ 9 ನಂತರ ದರ್ಶನ್ ಅವರಿಗೆ ವಿದೇಶ ಪ್ರಯಾಣಕ್ಕೆ ಅನುಮತಿ ಸಿಕ್ಕಿದ್ದು, 27 ದಿನಗಳ ಶೆಡ್ಯೂಲ್ ರೆಡಿಯಾಗಿದೆ.

ಇನ್ನು ಬೆಂಗಳೂರು – ಪ್ಯಾಲೆಸ್ ಗ್ರೌಂಡ್ಸ್ ನಲ್ಲಿ ನಡೆಯುತ್ತಿರುವ ರಾಮ್, ಲಕ್ಷ್ಮಣ್ ನಿರ್ದೇಶನದ ಆಕ್ಷನ್ ಸೀಕ್ವೆನ್ಸ್ ನಲ್ಲಿ ದರ್ಶನ ಬ್ಯುಸಿಯಾಗಿದ್ದಾರೆ. ದರ್ಶನ್ ಕೂಡಾ ಫುಲ್ ಎನರ್ಜಿ ಇಂದ ತಯಾರಿ ಮಾಡಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಈ ಶೂಟ್ ನಡೆಯುತ್ತಿದೆ. ಇನ್ನೂ ಮೂರು ದಿನಗಳು ಶೂಟಿಂಗ್ ಬೆಂಗಳೂರಲ್ಲೇ ನಡೆಯಲಿದೆ.

ಅಭಿಮಾನಿಗಳು ಈಗಿನಿಂದಲೇ ಸೆಪ್ಟೆಂಬರ್ 25 ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ದಸರಾ ಹಬ್ಬಕ್ಕೆ ಒಂದು ಸಿನಿ ಹಬ್ಬವೂ ಕೂಡಾ ಜೊತೆಯಾಗಲಿದೆ ಅನ್ನೋದ್ರಲ್ಲಿ ಡೌಟ್ ಬೇಡ.

- Advertisement -

Latest Posts

Don't Miss