Thursday, July 24, 2025

Latest Posts

ಅಮೆರಿಕಾ ಗೊಡ್ಡು ಬೆದರಿಕೆ ಕೇರ್ ಮಾಡುತ್ತಾ ಭಾರತ?

- Advertisement -

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಹಾಗೂ ಸಂಸದ ಲಿಂಡ್ಸೆ ಗ್ರಾಹಮ್‌ ಅವರು ಭಾರತ, ಚೀನಾ, ಬ್ರೆಜಿಲ್‌ ದೇಶಗಳನ್ನು ಬೆದರಿಸುವ ತಂತ್ರ ಅನುಸರಿಸಿದ್ದಾರೆ. ರಷ್ಯಾ ಜತೆ ನೀವೇನಾದ್ರೂ ವ್ಯಾಪಾರ ಮುಂದುವರೆಸಿದರೆ ನಿಮ್ಮ ಆರ್ಥಿಕತೆಯನ್ನೇ ಹೊಸಕಿ ಹಾಕುತ್ತೇವೆ ಎಂದು ಫಾಕ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಲಿಂಡ್ಸೆ ಗ್ರಾಹಮ್‌ ಎಚ್ಚರಿಕೆ ನೀಡಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ ಆಮದು ವಹಿವಾಟು ಮುಂದುವರಿಸಿದ್ದೇ ಆದಲ್ಲಿ ಅಮೆರಿಕದಿಂದ ಇನ್ನೂ ಹೆಚ್ಚಿನ ಸುಂಕ ಎದುರಿಸಬೇಕಾಗುತ್ತದೆ ಎಂದು ಈ ಮೂರು ರಾಷ್ಟ್ರಗಳಿಗೆ ಬೆದರಿಕೆ ಹಾಕಿದ್ದಾರೆ.

ತೈಲ ಸಂಬಂಧಿತ ಆಮದುಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಯೋಜಿಸುತ್ತಿದೆ. ಟ್ರಂಪ್‌ ಅವರ ಆಪ್ತ ಹಾಗೂ ಸಂಸದ ಲಿಂಡ್ಸೆ ಗ್ರಾಹಮ್‌ ಅವರು ರಷ್ಯಾದ ಕಚ್ಚಾ ತೈಲ ರಪ್ತು ವಹಿವಾಟಿನಲ್ಲಿ ಭಾರತ, ಚೀನಾ, ಬ್ರೆಜಿಲ್‌ ಶೇ80ಷ್ಟು ಪಾಲು ಹೊಂದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಉಕ್ರೇನ್‌ ಯುದ್ದ ಮುಂದುವರೆಸಲು ಈ ಆಮದು ವಹಿವಾಟು ಉತ್ತೇಜನ ನೀಡುತ್ತಿದೆ. ಹಾಗಾಗಿ ನೀವು ರಷ್ಯಾದಿಂದ ತೈಲ ಆಮದು ನಿಲ್ಲಿಸಬೇಕು. ಇಲ್ಲದೇ ಹೋದರೆ ನಿಮ್ಮ ಆರ್ಥಿಕತೆಯನ್ನು ನಾಶ ಮಾಡುತ್ತೇವೆ ಎಂದು ಗ್ರಾಹಮ್‌ ಈ ಮೂರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಭಾರತ ಮತ್ತು ಚೀನಾ ಸೇರಿದಂತೆ ವ್ಯಾಪಾರ ಮುಂದುವರೆಸುವ ದೇಶದ ಸರಕುಗಳ ಮೇಲೆ ಶೇ500ರಷ್ಟು ಸುಂಕ ವಿಧಿಸುವ ವಿಧೇಯಕದ ಪ್ರಸ್ತಾಪವನ್ನು ಈ ಹಿಂದೆ ಲಿಂಡ್ಸ್‌ ಗ್ರಾಹಮ್‌ ಸಲ್ಲಿಸಿದ್ದರು. ಇದೇ ವೇಳೆ ಪುಟಿನ್‌ ವಿರುದ್ದ ಗುಡುಗಿರುವ ಗ್ರಾಹಮ್‌, ನೀವು ಟ್ರಂಪ್‌ ಅವರೊಂದಿಗೆ ಉದ್ದಟತನ ತೋರಿದ್ದೀರಿ. ಟ್ರಂಪ್‌ ಮಾತಿಗೆ ಬೆಲೆ ಕೊಡದೇ ಉಕ್ರೇನ್‌ ಜತೆ ಸಮರ ಮುಂದುವರಿಸಿದ್ದೀರಿ. ನಾವು ಉಕ್ರೇನ್‌ ಗೆ ಶಸ್ತ್ರಾಸ್ತ್ರ ಪೂರೈಸುತ್ತಲೇ ಇರುತ್ತೇವೆ. ಯುದ್ದ ಮುಂದುವರಿಸಿದಷ್ಟೂ ನಿಮ್ಮ ಆರ್ಥಿಕತೆ ಕುಸಿಯುತ್ತಲೇ ಇರುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss