Thursday, November 13, 2025

Latest Posts

ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜಾನಾ ? ಕ್ಲಾರಿಟಿ ಕೊಡಿ ಬಿಗ್ ಬಾಸ್ !

- Advertisement -

ಬಿಗ್ ಬಾಸ್ ವೀಕೆಂಡ್ ಎಪಿಸೋಡ್ಸ್ ನೋಡಿದ್ರೆ ನಿಮಗೆ ಗೊತ್ತಾಗಿರುತ್ತೆ , ಕಿಚ್ಚ ಸುದೀಪ್ (Kiccha Sudeep ) ಸರ್ ಮುಂದೆ ಪದೇ ಪದೇ ‘’ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ಲು, 4 ಬಾರಿ ಚಪ್ಪಲಿ ತೋರಿಸಿದ್ಲು’’ ಅಂತ ಅಶ್ವಿನಿ ಗೌಡ ಆರೋಪಿಸಿದರು. ಆದರೆ, ಸುದೀಪ್‌ ಸರ್ ಇದಕ್ಕೆ ಕ್ಯಾರೇ ಎನ್ನಲಿಲ್ಲ. ‘’ರಕ್ಷಿತಾ ಶೆಟ್ಟಿ( Rakshitha Shetty ) ಚಪ್ಪಲಿ ತೋರಿಸಿದ್ದನ್ನ ನಾವು ನೋಡಲೇ ಇಲ್ಲ. ಅಶ್ವಿನಿ ಗೌಡ ಸುಳ್ಳು ಹೇಳುತ್ತಿದ್ದಾರೆ’’ ಅನ್ನೋದು ವೀಕ್ಷಕರ ವಾದ.

ಅದ್ಯಾಕೆ ಅಂತ ಗೊತ್ತಿಲ್ಲ.. ರಕ್ಷಿತಾ ಶೆಟ್ಟಿ ಕಂಡ್ರೆ ಅಶ್ವಿನಿ ಗೌಡಗೆ ಆಗ್ಬರ್ತಿಲ್ಲ. ಮೊದಲು ರಕ್ಷಿತಾ ಶೆಟ್ಟಿಯನ್ನ ‘ಕಾರ್ಟೂನ್’ ಅಂತ ಅಶ್ವಿನಿ ಗೌಡ ಕರೆದರು. ಆನಂತರ, ‘ಎಸ್‌’ ಪದ ಬಳಸಿದರು. ‘ನೀನು ಎಲ್ಲಿಂದ ಬಂದಿದ್ದೀಯಾ ಅಂತ ಇದರಲ್ಲೇ ಗೊತ್ತಾಗುತ್ತೆ’ ಅಂತೆಲ್ಲಾ ಕಾಮೆಂಟ್ ಮಾಡಿದ್ದರು. ಇದೀಗ ನೋಡಿದ್ರೆ, ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಕಲಾವಿದರಿಗೆ ರಕ್ಷಿತಾ ಶೆಟ್ಟಿ ಅವಮಾನ ಮಾಡಿದ್ದಾರೆ, ಚಪ್ಪಲಿ ತೋರಿಸಿದ್ದಾರೆ’ ಅಂತ ಅಶ್ವಿನಿ ಗೌಡ ಪದೇ ಪದೇ ಹೇಳಿದ್ದಾರೆ. ಆದರೆ, ಈ ಟಾಪಿಕ್ ಬಗ್ಗೆ ಕಿಚ್ಚ ಸುದೀಪ್‌ ಚರ್ಚೆ ಮಾಡಲೇ ಇಲ್ಲ.

‘’ರಕ್ಷಿತಾ ಶೆಟ್ಟಿ ಚಪ್ಪಲಿ ತೋರಿಸಲೇ ಇಲ್ಲ. ಅದಕ್ಕೆ ಕಿಚ್ಚ ಸುದೀಪ್ ಮಾತಾಡಲಿಲ್ಲ. ಅಶ್ವಿನಿ ಗೌಡ( Ashwini Gowda )ಹೇಳ್ತಿರೋದು ಶುದ್ಧ ಸುಳ್ಳು’’ ಅಂತ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ‘’ರಕ್ಷಿತಾ ಶೆಟ್ಟಿ ನಿಜವಾಗಿಯೂ ಚಪ್ಪಲಿ ತೋರಿಸಿದ್ರೆ ಕ್ಲಾರಿಟಿ ಕೊಡಿ’’ ಅಂತಲೂ ವೀಕ್ಷಕರು ಆಗ್ರಹಿಸುತ್ತಿದ್ದಾರೆ.ಕಳೆದ ವಾರ ಕಾವ್ಯ ಶೈವ–ಅಶ್ವಿನಿ ಗೌಡ ನಡುವೆ ಜಗಳ ನಡೆದಿತ್ತು. ಈ ವೇಳೆ ಕಾವ್ಯ ಪರವಾಗಿ ರಕ್ಷಿತಾ ಶೆಟ್ಟಿ ಮಧ್ಯೆ ಬಂದು, “ನಿಮ್ಮ ಧಾರಾವಾಹಿ ಹೊರಗೆ ಮಾಡಿ, ಇದು ಸೀರಿಯಲ್ ಅಲ್ಲ” ಎಂದರು. ಅದಕ್ಕೆ ಅಶ್ವಿನಿ, “ಕಲಾವಿದರಿಗೆ ಅವಮಾನ ಮಾಡಬೇಡ, ನಾಚಿಕೆ ಆಗಲಿ ನಿನಗೆ” ಎಂದು ತಿರುಗೇಟು ನೀಡಿದರು.

ಅಶ್ವಿನಿ ಪ್ರಕಾರ, ರಕ್ಷಿತಾ ಚಪ್ಪಲಿ ತೋರಿಸಿದ್ದಾರೆ, ಆದರೆ ಆ ದೃಶ್ಯ ಸಂಚಿಕೆಯಲ್ಲಿ ಇರಲಿಲ್ಲ. ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಕಿಚ್ಚ ಸುದೀಪ್ ಈ ವಿಷಯ ಮುಟ್ಟಲೇ ಇಲ್ಲ.ಅಶ್ವಿನಿ ಹೇಳುವಂತೆ, “ರಕ್ಷಿತಾ ನಾಲ್ಕು ಬಾರಿ ಚಪ್ಪಲಿ ತೋರಿಸಿದರು” ಎಂದು ಆರೋಪಿಸಿದರೆ, ಕಾವ್ಯ ಶೈವ ಸ್ಪಷ್ಟನೆ ನೀಡುತ್ತಾ, “ಅದು ಮ್ಯಾನಿಪ್ಯುಲೇಷನ್, ರಕ್ಷಿತಾ ಉದ್ದೇಶ ತಪ್ಪಾಗಿ ತೋರಿಸಲಾಗಿದೆ” ಎಂದರು. ಇದಕ್ಕೆ ಆಡಿಯೆನ್ಸ್ ಚಪ್ಪಾಳೆ ತಟ್ಟಿದರು.
ಅಂತಿಮವಾಗಿ, “ರಕ್ಷಿತಾ ಮೂರು ಬಾರಿ ಚಪ್ಪಲಿ ತೋರಿಸಿದರು ಅಂತ ಅಶ್ವಿನಿ ಸುಳ್ಳು ಹೇಳಿದ್ರಾ? ನಾವು ನೋಡ್ಲೆ ಇಲ್ವಲ್ಲ ?” ಎಂಬ ಪ್ರಶ್ನೆ ವೀಕ್ಷಕರಲ್ಲಿ ಎದ್ದಿದೆ…. ಹೌದು ವೀಕ್ಷಕರೇ ?ನೀವ್ ನೋಡುದ್ರಾ ಕಾಮೆಂಟ್ ಮಾಡಿ ತಿಳಿಸಿ ….

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss