Friday, December 13, 2024

Latest Posts

ಬಾಲಿವುಡ್ ಖ್ಯಾತ ಕೋರಿಯೋಗ್ರಾಫರ್ ಫರಾ ಖಾನ್ ಹೇಳಿದ್ದು ನಿಜವೇ..? Sad Reality of Celebs

- Advertisement -

Bollywood News: ನೀವು ನಾವು ನೋಡಿರುವಂತೆ ಇನ್‌ಸ್ಟಾಗ್ರಾಮ್, ಸೋಶಿಯಲ್ ಮೀಡಿಯಾ ಬಳಕೆದಾರರು ಹೆಚ್ಚಾಗುತ್ತಿದ್ದಂತೆ, ಸೆಲೆಬ್ರಿಟಿಗಳಿಗೆ ಪಾಪರಾಜಿಗಳ ಕಾಟವೂ ಹೆಚ್ಚಾಗಿದೆ. ಅದರಲ್ಲೂ ಏರ್ಪೋರ್ಟ್‌ನಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡರೆ, ಪಾಪರಾಜಿಗಳು ನಾ ಮುಂದು ತಾ ಮುಂದು ಹೋಗಿ ವೀಡಿಯೋ ಮಾಡಿ, ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಆ ವೀಡಿಯೋ ಇನ್‌ಸ್ಟಾಗ್ರಾಮ್‌ಗೆ ಹಾಕಿದ್ರೆ, ರಾಶಿ ರಾಶಿ ವೀವ್ಸ್ ಬರುತ್ತದೆ. ಕೆಲವರು ಯೂಟ್ಯೂಬ್‌ನಲ್ಲೂ ಈ ವೀಡಿಯೋಗಳನ್ನು ಹಾಕಿ, ಚೆನ್ನಾಗಿ ದುಡ್ಡು ಸಂಪಾದನೆ ಮಾಡಿದ್ದಾರೆ. ಇದರಿಂದ ಸೆಲೆಬ್ರಿಟಿಗಳ ಖ್ಯಾತಿಯೂ ಹೆಚ್ಚಾಗುತ್ತಿದೆ.

ಆದರೆ ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೋ ಒಂದರಲ್ಲಿ ವಿದೇಶ ಪ್ರಯಾಣ ಮಾಡುವಾಗ, ಅಥವಾ ಏರ್ಪೋರ್ಟ್‌ನಲ್ಲಿ ಶಾಪಿಂಗ್ ಮಾಡುವಾಗ, ಯಾವ ನಿಯಮ ಅನುಸರಿಸಬೇಕು ಅಂತಾ, ಬಾಲಿವುಡ್ ಕೋರಿಯೋಗ್ರಾಫರ್ ಫರಾ ಖಾನ್ ಹೇಳಿದ್ದಾರೆ. ಇದರೊಂದಿಗೆ ಆಕೆ ಹೇಳಿದ ಇನ್ನೊಂದು ಸಂಗತಿ ಸದ್ಯ ಬಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಹಾಗಾದ್ರೆ ಫರಾ ಖಾನ್ ಏನು ಟಿಪ್ಸ್ ಕೊಟ್ರು ಅಂತಾ ನೋಡೋದಾದ್ರೆ, ನಿಮಗೆ ಕಂಫರ್ಟೇಬಲ್ ಆಗುವಂಥ ಚಪ್ಪಲಿಯನ್ನೇ ಧರಿಸಿ, ಕೆಲವರು (ಅಂದ್ರೆ ಕೆಲವು ನಟಿಯರನ್ನು ಕುರಿತು ಪರೋಕ್ಷವಾಗಿ) ಹೀಲ್ಸ್ ಹಾಕಿಕೊಂಡು ವಿಮಾನದಲ್ಲಿ ಪ್ರಯಾಣ ಮಾಡ್ತಾರೆ. ಅದು ಹೇಗೆ ಸಾಧ್ಯವೋ ಗೊತ್ತಿಲ್ಲ ಎಂದಿದ್ದಾರೆ.

ಎರಡನೇಯದಾಗಿ ಬೆಚ್ಚಗಿನ ಜಾಕೇಟ್ ಧರಿಸಿ. ಏರ್ಪೋರ್ಟ್‌ನಲ್ಲಿ ಚಳಿ ಇಲ್ಲದಿದ್ದರೂ, ವಿಮಾನದಲ್ಲಿ ಖಂಡಿತವಾಗಿಯೂ ನಿಮಗೆ ಚಳಿಯಾಗುತ್ತದೆ. ಹಾಗಾಗಿ ವಿಮಾನ ಪ್ರಯಾಣ ಮಾಡುವಾಗ, ಜಾಕೇಟ್ ಧರಿಸಿ ಅಂದಿದ್ದಾರೆ ಫರಾ ಖಾನ್.

ಇನ್ನು ಮೂರನೇಯಾದಾಗಿ ಏರ್ಪೋರ್ಟ್‌ನಲ್ಲಿ ಶಾಪಿಂಗ್ ಮಾಡುವಾಗ ದೊಡ್ಡ ಬ್ಯಾಗ್ ತೆಗೆದುಕೊಂಡು ಬನ್ನಿ. ಏಕೆಂದರೆ ಏರ್ಪೋರ್ಟ್‌ನಲ್ಲಿ ಕಡಿಮೆ ರೇಟ್‌ನಲ್ಲಿ ಬ್ರ್ಯಾಂಡೆಡ್ ಪ್ರಾಡಕ್ಟ್‌ಗಳು ಸಿಗುತ್ತದೆ. ನಾನಂತೂ ಇದನ್ನೇ ಬಳಸುತ್ತೇನೆ. ಅದರಲ್ಲೂ ಮೇಕಪ್ ಐಟಮ್‌ಗಳು 20 ಪರ್ಸೆಂಟ್ ಚೀಪ್ ರೇಟ್‌ಗೆ ಸಿಗುತ್ತದೆ ಎಂದಿದ್ದಾರೆ.

ಇಷ್ಟು ಟಿಪ್ಸ್ ಕೊಟ್ಟಾದ ಬಳಿಕ, ಫರಾ ಖಾನ್ ಇಡೀ ಏರ್ಪೋರ್ಟ್ ತೋರಿಸಿ, ಇಲ್ಲಿ ನೋಡಿ ನಮ್ಮ ವೀಡಿಯೋ ಮಾಡಲು ಯಾವ ಪಾಪರಾಜಿಯೂ ಇಲ್ಲ. ಏಕೆಂದರೆ ನಾವು ಯಾರನ್ನೂ ಕರೆದಿಲ್ಲ ಎಂದಿದ್ದಾರೆ. ಇದರ ಅರ್ಥ, ಸೆಲೆಬ್ರಿಟಿಗಳು ಪಾಪರಾಜಿಗಳನ್ನು ಕರೆಯದೇ, ಅವರು ಬರೋದಿಲ್ಲಾ ಅಂತಾ. ಇದು ಎಷ್ಟರ ಮಟ್ಟಿಗೆ ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಫರಾ ಖಾನ್ ತುಂಬಾ ಪ್ರಸಿದ್ಧಿ ಪಡೆದಿರುವ ಕೋರಿಯೋಗ್ರಾಫರ್ ಹಾಗಾಗಿ ಆಕೆಯ ವೀಡಿಯೋ ಮಾಡಲು ಓರ್ವ ಪಾಪರಾಜಿ ಆದರೂ ಇರಬೇಕಿತ್ತು. ಇಲ್ಲವೆಂದಲ್ಲಿ, ಫರಾ ಹೇಳಿದಂತೆ ನಿಜವಾಗಿಯೂ ಸೆಲೆಬ್ರಿಟಿಗಳು ಪಾಪರಾಜಿಗಳನ್ನು ಕರೆಯುತ್ತಾರಾ ಅನ್ನೋ ಪ್ರಶ್ನೆ ಮೂಡೋದಂತೂ ಗ್ಯಾಾರಂಟಿ.

ಫರಾ ಖಾನ್ ಈ ಹೇಳಿಕೆ ಕೊಟ್ಟ ವೀಡಿಯೋ ನೋಡಲು ಇದನ್ನು ಕ್ಲಿಕ್ಕಿಸಿ

- Advertisement -

Latest Posts

Don't Miss