Thursday, November 13, 2025

Latest Posts

ಸಾಕು ಪ್ರಾಣಿ – ಪಕ್ಷಿಗಳ ಬಂಧನ ಶುಭವೋ – ಅಶುಭವೋ ?

- Advertisement -

ಮನೆಯಲ್ಲಿ (pets)ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನು ಇಡುವುದು ಸಾಮಾನ್ಯವಾದ ವಿಷಯ. ಆದರೆ ಪಂಜರಗಳಲ್ಲಿ ಹಕ್ಕಿಗಳನ್ನು ಇಡುವುದು ಶುಭವೇ ಅಥವಾ ಅಶುಭವೇ ಎಂಬ ಪ್ರಶ್ನೆ ಬಹಳ ಮಂದಿಯಲ್ಲಿ ಇದೆ.ಶಾಸ್ತ್ರಜ್ಞರು ಹೇಳುವಂತೆ ಭಗವಂತನ ವರಗಳಾದ ಭೂಮಿ, ಗಾಳಿ, ನೀರು ಎಲ್ಲ ಜೀವಿಗಳಿಗೂ ಸೇರಿವೆ. ಹೀಗಿರುವಾಗ ಪಕ್ಷಿಗಳನ್ನು ಬಂಧಿಸುವುದು ಅವುಗಳ ಸ್ವಾತಂತ್ರ್ಯ ಕಸಿದುಕೊಂಡಂತಾಗುತ್ತದೆ. ಇದು ಮನೆಯ ಶಾಂತಿಗೆ ಭಂಗ ತರಬಹುದು..

ಶಾಸ್ತ್ರಜ್ಞರು ಹೇಳುವಂತೆ, ಜೀವಿಗಳನ್ನು ನಾವು ಪ್ರೀತಿ ಮಾಡಬೇಕು, ಆದರೆ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು. ಮನುಷ್ಯರನ್ನು ಕಾರಾಗೃಹದಲ್ಲಿ ಇಟ್ಟು ಆಹಾರ ಕೊಟ್ಟರೂ ಅದು ಶಿಕ್ಷೆಯೇ ಆಗುತ್ತದೆ. ಹಾಗಾದರೆ ಯಾವ ಅಪರಾಧವಿಲ್ಲದ ಹಕ್ಕಿಗಳನ್ನು(Birds) ಪಂಜರಗಳಲ್ಲಿ ಇಡುವುದು ಹೇಗೆ ಸಮರ್ಥನೆ ಪಡೆಯಬಹುದು? ಪಂಜರಗಳಲ್ಲಿ ಪಕ್ಷಿಗಳನ್ನು ಇಡುವುದು ಅಷ್ಟು ಶುಭಕರವಲ್ಲ. ಆದರೆ ಪಂಜರಗಳಿಲ್ಲದೆ ಅಥವಾ ಮುಕ್ತವಾಗಿ ಬಿಟ್ಟು ಸಾಕುವುದರಲ್ಲಿ ದೋಷವಿಲ್ಲ. ಹಕ್ಕಿಗಳಿಗೆ ಸ್ವತಂತ್ರವಾಗಿ ಹಾರಾಡಲು ಅವಕಾಶ ನೀಡಿದರೆ, ಅದು ಮನೆಯಲ್ಲಿ ಶಾಂತಿ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ.

ಪುರಾಣಗಳಲ್ಲಿ ಸಹ ಇದರ ಬಗ್ಗೆ ಉಲ್ಲೇಖವಿದೆ. ಸೀತಾದೇವಿಯು ಒಂದು ಬಾರಿ ಗಿಳಿಯನ್ನು ಪಂಜರದಲ್ಲಿ ಇಟ್ಟು ಸಾಕಿದ್ದರು. ಅದರ ಪರಿಣಾಮವಾಗಿ ಶ್ರೀರಾಮರಿಗೆ ವನವಾಸ ಎದುರಾಯಿತೆಂಬ ಪ್ರತೀತಿ ಇದೆ. ಇದು ಪಂಜರದಲ್ಲಿ ಪಕ್ಷಿಗಳನ್ನು ಇಡುವ ಅಶುಭ ಪರಿಣಾಮದ ಉದಾಹರಣೆಯಾಗಿದೆ. ಹೀಗಾಗಿ, ಜೀವಿಗಳನ್ನು ಬಂಧಿಸುವುದು ಧರ್ಮದ ದೃಷ್ಟಿಯಿಂದ ಮತ್ತು ವಾಸ್ತುಶಾಸ್ತ್ರದ ದೃಷ್ಟಿಯಿಂದಲೂ ಅಶುಭಕರ ಎಂದು ಶಾಸ್ತ್ರಜ್ಞರು ಹೇಳಿದ್ದಾರೆ.

ಪಕ್ಷಿಗಳನ್ನು ಸಾಕಲು ಬಯಸಿದರೆ ಪಂಜರ ಯಾವಾಗಲೂ ತೆರೆದಿರಲಿ. ಹಕ್ಕಿಗಳು ಬಂದು ಆಹಾರ ಸೇವಿಸಿ, ತಮ್ಮಿಷ್ಟದಂತೆ ಹಾರಾಡಲಿ. ಆದರೆ ಅವುಗಳನ್ನು ಬಲವಂತವಾಗಿ ಬಂಧಿಸಬೇಡಿ. ಭಗವಂತನು ಎಲ್ಲಾ ಜೀವಿಗಳಿಗೆ ಭೂಮಿ, ಗಾಳಿ, ನೀರು ಎಂಬ ವರಗಳನ್ನು ನೀಡಿದ್ದಾನೆ. ಅವುಗಳ ಸ್ವಾತಂತ್ರ್ಯ ಕಸಿದುಕೊಳ್ಳುವುದು ಪಾಪದಂತೆಯೇ ಆಗುತ್ತದೆ. ಹೀಗಾಗಿ ಮನೆಯಲ್ಲಿ ಪ್ರಾಣಿ-ಪಕ್ಷಿಗಳನ್ನು ಪಂಜರದಲ್ಲಿ ಇಡುವುದನ್ನು ತಪ್ಪಿಸಿ, ಅವುಗಳಿಗೆ ಮುಕ್ತ ಜೀವನ ನೀಡಿ, ಅದು ನಿಜವಾದ ದಯೆ ಮತ್ತು ಧರ್ಮ….

ಗಾಯತ್ರಿ ಗುಬ್ಬಿ

- Advertisement -

Latest Posts

Don't Miss