Sunday, October 5, 2025

Latest Posts

ಎಲಿಮಿನೇಟ್ ಆದ್ರೂ ಸೀಕ್ರೆಟ್ ರೂಮ್ ನಲ್ಲಿದ್ದಾರಾ ರಕ್ಷಿತಾ ಶೆಟ್ಟಿ!?

- Advertisement -

ಬಿಗ್ ಬಾಸ್ ಕನ್ನಡ ಸೀಸನ್ 12 ಹೊಸ ಸೀಸನ್ ಪ್ರಾರಂಭವಾಗಿದೆ. ಮೊದಲ ದಿನವೇ ಪ್ರೇಕ್ಷಕರಿಗೆ ಹಾಗು ಸ್ಪರ್ಧಿಗಳಿಗೆ ದೊಡ್ಡ ಶಾಕ್ ಎದುರಾಗಿದೆ. ಸ್ಪರ್ಧಿಗಳ ಮನೆಯಲ್ಲಿ ಪ್ರವೇಶವಾಗುತ್ತಿದ್ದ ಮೊದಲ ದಿನವೇ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಸಮಾಚಾರಗಳ ಪ್ರಕಾರ, ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್‌ಗೆ ಸ್ಥಳಾಂತರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮನೆಗೆ ಎಂಟ್ರಿ ಪಡೆಯುತ್ತಿದ್ದ ಸ್ಪರ್ಧಿಗಳು ಮೊದಲ ದಿನವೇ ಪರಸ್ಪರ ಪರಿಚಯ ಮಾಡಿಕೊಂಡು, ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಬಿಗ್ ಬಾಸ್ ಮಹಾ ಟ್ವಿಸ್ಟ್ ನೀಡಿದರು. ವೀಕ್ಷಕರು ಮತ ಚಲಾಯಿಸಿ, 75% ರಷ್ಟು ಮತ ಪಡೆದ ಸ್ಪರ್ಧಿಗಳನ್ನು ಒಂಟಿ ಮತ್ತು 75% ಕ್ಕಿಂತ ಕಡಿಮೆ ಮತ ಪಡೆದವರಿಗೆ ಜಂಟಿ ಎಂದು ವರ್ಗೀಕರಿಸಿದರು. ಕೊನೆಗೆ ಸ್ಪಂದನಾ, ಮಾಳು, ರಕ್ಷಿತಾ ಶೆಟ್ಟಿ ಉಳಿದುಕೊಂಡಿದ್ದರು.

ಈ ವೇಳೆ ಮನೆಯಲ್ಲಿ ಉಳಿಯಲು ಮನವಿ ಮಾಡಿದ ಮೂವರು ಸ್ಪರ್ಧಿಗಳ ಮಧ್ಯೆ, ಉಳಿದವರು ಯಾರನ್ನು ಮನೆಯಿಂದ ಹೊರಗಡೆ ಕಳಿಸಬೇಕೆಂದು ನಿರ್ಧರಿಸಬೇಕಾಯಿತು. ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿದ್ದಾರೆ. ಆದರೆ ಸಂಪ್ರದಾಯದ ಪ್ರಕಾರ ಬಿಗ್‌ ಬಾಸ್‌ ಇವರನ್ನು ಬೀಳ್ಕೊಡಬೇಕಿತ್ತು. ಇದ್ಯಾವುದೂ ಆಗೇ ಇಲ್ಲ. ಬಹುಶಃ ರಕ್ಷಿತಾ ಶೆಟ್ಟಿ ಅವರು ಸೀಕ್ರೇಟ್‌ ರೂಮ್‌ಗೆ ಹೋಗಿದ್ದಾರೆ ಎನ್ನಲಾಗಿದೆ.

ಕೆಲ ಸೀಸನ್‌ಗಳಿಂದ ಸೀಕ್ರೇಟ್‌ ರೂಮ್‌ ಎನ್ನೋದು ಇರಲಿಲ್ಲ. ಈ ಬಾರಿ ಸೀಕ್ರೇಟ್‌ ರೂಮ್‌ ಇಟ್ಟಿದ್ದರೆ, ಇನ್ನಷ್ಟು ಆಟಕ್ಕೆ ಮಜಾ ಬರೋದಂತೂ ಗ್ಯಾರಂಟಿ. ಪ್ರಮುಖ ಸ್ಪರ್ಧಿಗಳಾಗಿ ಸ್ಪಂದನಾ ಸೋಮಣ್ಣ, ಕರಿಬಸಪ್ಪ, ಧನುಷ್ ಗೌಡ, ಅಶ್ವಿನಿ ಗೌಡ, ಕಾವ್ಯ ಶೈವ, ಡಾಗ್ ಸತೀಶ್, ಧ್ರುವಂತ್, ಆರ್‌ಜೆ ಅಮಿತ್, ಮಲ್ಲಮ್ಮ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ಜಾಹ್ನವಿ, ಚಂದ್ರಪ್ರಭ, ಗಿಲ್ಲಿ ನಟ, ಮಂಜುಭಾಷಿಣಿ, ರಾಶಿಕಾ, ಅಭಿಷೇಕ್ ಶ್ರೀಕಾಂತ್ ಮುಂದುವರೆದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss