ಆ 3 ಕಾರಣದಿಂದ ಜಾತಿಗಣತಿಗೆ ಸಿದ್ದರಾಮಯ್ಯ ಓಕೆ ಅಂದ್ರಾ?

ಸ್ವಪಕ್ಷದವರ ವಿರೋಧ ಎದುರಾದ್ರೂ, ಸಿಎಂ ಸಿದ್ದರಾಮಯ್ಯ ಮಾತ್ರ ಜಾತಿಗಣತಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಸಿದ್ದರಾಮಯ್ಯರ ಇಂಥದ್ದೊಂದು ನಿಲುವಿನ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಈ ಮಧ್ಯೆ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಜಾತಿಗಣತಿ ಹಿಂದೆ ಮೂರು ಕಾರಣಗಳು ಇವೆಯಂತೆ. ನಂಬರ್.1 ಆಡಳಿತ ವೈಫಲ್ಯ, ನಂಬರ್ 2. ಒಳಜಗಳ ಮರೆಮಾಚಲು, ನಂಬರ್ 3. ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಮೆಚ್ಚಿಸಲು, ಜಾತಿ ಸಮೀಕ್ಷೆ ನಾಟಕ ಆಡುತ್ತಿದ್ದಾರೆಂದು ಟೀಕಿಸಿದ್ದಾರೆ.

ಬೀದರ್‌ನಲ್ಲಿ ಜಾತಿಗಣತಿ ಬಗ್ಗೆ ಮಾತನಾಡಿದ ಪ್ರಹ್ಲಾದ್‌ ಜೋಶಿ, ನೈಜ ಸಮಸ್ಯೆಗಳನ್ನ ಡೈವರ್ಟ್ ಮಾಡಲು ಸಮೀಕ್ಷೆ ನಡೆಯುತ್ತಿದೆ. ಸರಿಯಾದ ರಸ್ತೆಗಳಿಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಗುಂಡಿ ಮುಚ್ಚಲು ಹಣ ಇಲ್ಲದ ಪರಿಸ್ಥಿತಿಗೆ ತಲುಪಿದ್ದಾರೆ. ಅವರ ಸೋಲನ್ನು ಡೈವರ್ಟ್ ಮಾಡುವ ಕಾರಣಕ್ಕೆ, ಈ ರೀತಿ ಕೆಲಸ ಮಾಡುತ್ತಿದ್ದಾರೆ.

ಹಿಂದೂ ಧರ್ಮದವರನ್ನ ಒಕ್ಕಲೆಬ್ಬಿಸಿ ಕಳಿಸ್ತೀವಿ ಅಂದ್ರು, ರಾಜ್ಯ ಸರ್ಕಾರ ಏನೂ ಮಾಡಿಲ್ಲ. ನವೆಂಬರ್‌ನಲ್ಲಿ ನಾನು ಮುಖ್ಯಮಂತ್ರಿ ಆಗೇ ಆಗ್ತೀನಿ ಅಂತ, ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅದೇ ರೀತಿ ಕ್ರಾಂತಿ ಆಗುತ್ತೆ ಎಂದು, ರಾಜಣ್ಣನೂ ಹೇಳಿದ್ದಾರೆ. ಸೆಪ್ಟೆಂಬರ್ ಕ್ರಾಂತಿ ಮುಗಿಯುತ್ತಾ ಬಂದಿದೆ. ಹೀಗಾಗಿ ಕ್ರಾಂತಿ ಮುಂದೆ ಹಾಕಲು ಈ ರೀತಿ ಮಾಡ್ತಿದ್ದಾರೆ.

ಕಾಂಗ್ರೆಸ್ ಯಾವಾಗಲೂ ಎಸ್ಸಿ, ಎಸ್ಟಿ, ಒಬಿಸಿಗೆ ವಿರೋಧ ಮಾಡ್ತಾ ಬಂದಿದೆ. ನೆಹರೂ ಅವರಿಂದ ರಾಜೀವ್‌ ಗಾಂಧಿವರೆಗೂ, ನಿಮ್ಮ ಎಲ್ಲಾ ನೇತಾರರು ರಿಸರ್ವೇಶನ್‌ಗೆ ವಿರೋಧ ಮಾಡಿದ್ದಾರೆ. ಈಗ ಸಿದ್ದರಾಮಯ್ಯ ಡ್ರಾಮ ಮಾಡ್ತಿದ್ದಾರೆ. ಕ್ರಿಶ್ಚಿಯನ್ ಬ್ರಾಹ್ಮಣ, ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಮುಸಲ್ಮಾನ್ ಲಿಂಗಾಯತ , ಇವೆಲ್ಲಾ ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಮೆಚ್ಚಿಸುವುದಕ್ಕೆ ಮಾಡಿದ್ದಾರೆ ಅಂತಾ, ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.

About The Author