Friday, November 14, 2025

Latest Posts

EV ವಾಹನಗಳಿಗೆ ಡಿಮ್ಯಾಂಡ್ ಇಲ್ವಾ? : ಈ ಬ್ರ್ಯಾಂಡ್‌ನ ಸ್ಕೂಟರ್ ಖರೀದಿಸಿದ್ದಾರಾ?

- Advertisement -

ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆಗಾಗಿ ಸರ್ಕಾರವು ಸಬ್ಸಿಡಿ ನೀಡಿ ಪ್ರೋತ್ಸಾಹಿಸಿತ್ತು. ಆದರೆ ಇದೀಗ ಸರ್ಕಾರ ನೀಡಿದ್ದ ಸಬ್ಸಿಡಿ ಗಡುವು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಹಲವಾರು ಸಣ್ಣ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳು ಮಾರುಕಟ್ಟೆಯಿಂದ ವೇಗವಾಗಿ ಮರೆಯಾಗುತ್ತಿವೆ. ಬೆಲೆಗಳನ್ನು ಆಕರ್ಷಕವಾಗಿಡಲು ಸಬ್ಸಿಡಿಗಳನ್ನು ಹೆಚ್ಚು ಅವಲಂಬಿಸಿದ್ದ ಸಣ್ಣ ಕಂಪನಿಗಳಿಗೆ ಇದು ತೀವ್ರವಾಗಿ ಹೊಡೆತ ಬಿದ್ದಿದೆ. ಸಬ್ಸಿಡಿ ಕಡಿತವು ಹಲವು ಸವಾಲುಗಳನ್ನು ತಂದೊಡ್ಡಿದ್ದು, ಸಣ್ಣ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರನ್ನು ಮಾರುಕಟ್ಟೆಯಿಂದ ಹೊರಬರಲು ಒತ್ತಾಯಿಸಬಹುದು ಎಂದು ಉದ್ಯಮ ತಜ್ಞರು ಹೇಳುತ್ತಿದ್ದಾರೆ.

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಾಯರಕರಾದ ‘ಒಕಿನಾವಾ ಆಟೋಟೆಕ್’ 2023ರಲ್ಲಿ ಸಬ್ಸಿಡಿಯೊಂದಿಗೆ ಗ್ರಾಹಕರಿಗೆ 31,618 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ 2024ರಲ್ಲಿ ಕಡಿಮೆ ಸಬ್ಸಿಡಿಯೊಂದಿಗೆ ಈ ಮಾರಾಟವು 4,855ಕ್ಕೆ ವಾರ್ಷಿಕ ಮಾರಾಟ ಕುಸಿದಿದೆ. ಈ ವರ್ಷ ಜುಲೈವರೆಗೆ ಕೇವಲ 1,422 ಯುನಿಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಒಡೆತನದಲ್ಲಿರುವ ಮತ್ತೊಂದು ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿರುವ ‘ಆಂಪಿಯರ್’, 2023ರಲ್ಲಿ 66,958 ವಾಹನಗಳು, 2024ರಲ್ಲಿ 36,148 ವಾಹನಗಳು ಹಾಗೂ 2025ರಲ್ಲಿ ಇಲ್ಲಿಯವರೆಗೆ 26,963 ಯುನಿಟ್‌ ವಾಹನಗಳಿಗೆ ಇಳಿದಿದೆ. ಹಾಗೆಯೇ AMO ಮೊಬಿಲಿಟಿ ಕಂಪನಿಯು 2025 ರಲ್ಲಿ ಕೇವಲ 25 ವಾಹನಗಳನ್ನು ಮಾರಾಟ ಮಾಡಿದೆ. FAME – II ನ ಭಾಗವಾಗಿರುವ ಹಂತ ಹಂತದ ಉತ್ಪಾದನಾ ಕಾರ್ಯಕ್ರಮ ಅಡಿಯಲ್ಲಿ ಹಲವಾರು ಕಂಪನಿಗಳು ಸ್ಥಳೀಕರಣ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಲೆಕ್ಕಪರಿಶೋಧನೆಗಳು ಕಂಡುಕೊಂಡ ನಂತರ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ಸಬ್ಸಿಡಿಗಳ ಮೇಲಿನ ನಿರ್ಬಂಧವನ್ನು ಹೇರಿದ ನಂತರ ಈ ಕುಸಿತ ಸಂಭವಿಸಿದೆ.

ಈಗಾಗಲೇ ಕೆಲವು ಸಣ್ಣ ಕಂಪನಿಗಳು ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸಿವೆ, ಸಬ್ಸಿಡಿಗಳು ನಿಂತ ನಂತರ ಏಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆಗಳು ಒಟ್ಟಾರೆಯಾಗಿ 9,000 ಕೋಟಿ ರೂ.ಗಳಿಗಿಂತ ಹೆಚ್ಚು ನಷ್ಟ ಅನುಭವಿಸಿವೆ ಎಂಬ ವರದಿಗಳಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಬ್ಸಿಡಿಗಳನ್ನು ತೆಗೆದು ಹಾಕುವುದರಿಂದ ಮಾರುಕಟ್ಟೆ ಅಲುಗಾಡುವಿಕೆಗೆ ಕಾರಣವಾಗಿದೆ.

ಸಣ್ಣ EV ದ್ವಿಚಕ್ರ ವಾಹನ ಮಾರಾಟಗಾರರು ಸರ್ಕಾರದ ಬೆಂಬಲವಿಲ್ಲದೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ನಿರ್ಗಮಿಸುವಂತೆ ಒತ್ತಾಯಿಸಲ್ಪಡುತ್ತಿವೆ. ಸಬ್ಸಿಡಿ – ಮುಕ್ತ ಮಾರುಕಟ್ಟೆಯಲ್ಲಿ ಬದುಕುಳಿಯಲು ನಾವೀನ್ಯತೆ ಮತ್ತು ವೆಚ್ಚ – ದಕ್ಷತಾ ತಂತ್ರಗಳ ಮೂಲಕ ಹೊಂದಿಕೊಳ್ಳುತ್ತಿರುವ ದೊಡ್ಡ ಕಂಪನಿಗಳ ಸುತ್ತ ಉದ್ಯಮವು ಏಕೀಕರಣಗೊಳ್ಳುತ್ತಿದೆ ಎಂಬುದು ಸಾಬೀತಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss