ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ.. ಯಾವಾಗ ಏನ್ ಬೇಕಾದ್ರೂ ಆಗಬಹುದು. ಯಾರು ಯಾವ ಪಕ್ಷಕ್ಕಾದ್ರೂ ಹೋಗಬಹುದು. ಈ ಹಿಂದೆಯೂ ಇಂಥಾ ಹಲವಾರು ಘಟನೆಗಳು ನಡೆದಿವೆ. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಎಸ್.ಎಂ. ಕೃಷ್ಣ, ಬಂಗಾರಪ್ಪ ಅವರು ಕೂಡ ಇದಕ್ಕೆ ಹೊರತಾಗಿಲ್ಲ.
ಜೆಡಿಎಸ್ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ಸಿಗೆ ಬಂದಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಎಸ್.ಎಂ. ಕೃಷ್ಣ ಅವರು ದಿಢೀರನೇ ಬಿಜೆಪಿ ಪಕ್ಷ ಸೇರಿದ್ದಾರೆ. ಒಂದು ಪಕ್ಷದಲ್ಲಿ ಇದ್ದೋರು ನಾಳೆ ಯಾವ ಪಕ್ಷ ಸೇರ್ತಾರೆ ಅನ್ನೋದನ್ನ ಹೇಳೋಕೆ ಆಗಲ್ಲ.
ಸದ್ಯ, ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಜೊತೆಗೆ, ಪಕ್ಷಾಂತರ ಪರ್ವಕ್ಕೂ ಪುಷ್ಠಿ ಸಿಕ್ಕಿದೆ. ಮಂಡ್ಯದಲ್ಲಿ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿಕೆ, ರಾಜ್ಯ ರಾಜಕೀಯ ಭವಿಷ್ಯಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿಗೆ ಬರುವುದು ಅನುಮಾನ. ಬಂದ್ರೆ ತಡೆಯೋಕೆ ನಾವ್ಯಾರು. ಯಾರು ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಬಹುದು. ಹೀಗೇ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ, ಅಶ್ವತ್ಥ್ ನಾರಾಯಣ್ ಅವರು ಮಾತನಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಪಕ್ಷಕ್ಕೆ ಬರುವುದು ಬೇಡ ಅಂತಾ, 2 ದಿನಗಳ ಹಿಂದಷ್ಟೇ ಆರ್. ಅಶೋಕ್ ಹೇಳಿದ್ರು. ಈ ಬೆನ್ನಲ್ಲೇ ಅಶ್ವತ್ಥ್ ನಾರಾಯಣ್ ಮಾತು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈಗ ಶಿವಕುಮಾರ್ ಕಾಂಗ್ರೆಸ್ಸಿಗೆ ನಿಷ್ಠರಾಗಿದ್ದಾರೆ. ಅವರಿಗೇ ನಾವೇಕೆ ಅಗೌರವ ಸೂಚಿಸಬೇಕು. ಅವರಿಗೆ ಮಸಿ ಬಳಿಯುವಂತ ಕೆಲಸ ನಾವೇಕೆ ಮಾಡ್ಬೇಕು. ಅವರಲ್ಲಿ ಗುದ್ದಾಟ ನಡೀತಿದೆ. ಸರ್ಕಾರ ಯಾವ ಮಟ್ಟಕ್ಕೆ ಹೋಗುತ್ತದೆ ಕಾದು ನೋಡೋಣ ಅಂತಾ, ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.