Thursday, April 17, 2025

Latest Posts

ಚೇತನ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಇಶಾನ್ ನಾಯಕ..!

- Advertisement -

ಸದ್ಯದಲ್ಲೇ ಸಿಗಲಿದೆ ನೂತನ ಚಿತ್ರದ ಸಂಪೂರ್ಣ ಮಾಹಿತಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ “ಜೇಮ್ಸ್”.
ಈ ಚಿತ್ರವನ್ನು ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ (ಬಹದ್ದೂರ್) ನಿರ್ದೇಶಿಸಿದ್ದರು.” ಜೇಮ್ಸ್” ಸಿನಿಮಾವನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡಮಟ್ಟದ ಯಶಸ್ಸು ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ.

“ಜೇಮ್ಸ್” ನಂತರ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು.
ಆ ಕುತೂಹಲ ಕ್ಕೆ ಈಗ ತೆರೆ ಬಿದ್ದಿದೆ.
ಸದ್ಯದಲ್ಲೇ ಚೇತನ್ ಕುಮಾರ್ ನಿರ್ದೇಶನದ ಚಿತ್ರವೊಂದು ಆರಂಭವಾಗಲಿದೆ. “ರೆಮೋ” ಚಿತ್ರದ ಹಾಡುಗಳು, ಟೀಸರ್ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿರುವ ಸುರದ್ರೂಪಿ ನಟ ಇಶಾನ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ.

“ರೆಮೋ” ಚಿತ್ರದ ಬಿಡುಗಡೆ ನಂತರ ಈ ಚಿತ್ರ ಆರಂಭವಾಗಲಿದೆ. ಶೀಘ್ರದಲ್ಲೇ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.

- Advertisement -

Latest Posts

Don't Miss