ಸುಜುಕಿ ಬಲೆನೋ ಸೇಫ್ ಅಲ್ವಾ..? ಗ್ರಾಹಕರ ಕುಟುಂಬ ಬದುಕಿದ್ದೇ ಪವಾಡ..!

ಬೆಂಗಳೂರು: ಇತ್ತೀಚಿಗೆ ಚಾಲನೆಯಲ್ಲಿದ್ದಾಗಲೇ ಕಾರ್ ಗಳು ಹೊತ್ತಿ ಉರಿಯುತ್ತಿರೋದು ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕಾಗಿ ಕೆಲ ಕಂಪನಿಗಳ ಕಾರಿನ ಮಾಡೆಲ್ ಗಳನ್ನೇ ವಾಪಾಸ್ ಕೂಡ ಪಡೆದ ನಿದರ್ಶನ ಕೂಡ ಇದ್ದಾವೆ. ಈ ನಡುವೆಯೂ ಮಾರುತಿ ಕಂಪನಿಯ ಸುಜಿಕಿ ಬಲೆನೋ ಕಾರ್ ಕೂಡ ಅಲ್ಲಲ್ಲಿ ಚಾಲನೆಯ ವೇಳೆಯಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರೋದು ಹೆಚ್ಚಾಗಿವೆ. ಹೀಗಾಗಿ ಸುಜುಕಿ ಬಲೆನೋ ಸೇಫ್ ಅಲ್ವಾ.? ಎನ್ನುವಂತ ಪ್ರಶ್ನೆ ಎದ್ದಿದೆ. ಇದಕ್ಕೆ ಸ್ಪಷ್ಟ ನಿದರ್ಶನವೆನ್ನುವಂತೆ ಈ ಕೆಳಗಿನ ಘಟನೆ ಬಗ್ಗೆ ಓದಿ..

ಕನಸಿನ ಕಾರು ಕಣ್ಮುಂದೆ ಭಸ್ಮ..!
ಕಾರಿಗೆ ಆಕಸ್ಮಿಕ ಬೆಂಕಿ.. ಸುಟ್ಟು ಕರಕಲಾದ ಕಾರು..! ಅದೃಷ್ಟವಶಾತ್ ಪವಾಡ ರೀತಿಯಲ್ಲಿ ಕಾರಲ್ಲಿ ಇದ್ದವರು ಬಚಾವ್..
ಈ ರೀತಿ ತುಂಬಾ ಸಲ ಸುದ್ದಿ ನೋಡಿದ್ದೀವಿ, ಸುದ್ದಿ ಮಾಡಿದ್ದೀವಿ.. ಆದ್ರೆ, ಸ್ವತಃ ಅನಿಭವಿಸೋದು ಇದೆಯಲ್ಲ.. ಅಬ್ಬಾ.. Its really scared & Pain. ನಂಗೂ ಹೀಗೆ ಆಯ್ತು.. ಶುಕ್ರವಾರ (ಜುಲೈ 15, 2022) ಬೇಗ ಕೆಲಸ ಮುಗಿಸಿ, ಊರಿಗೆ ಹೋಗ್ತಿದ್ದೆ. ಕುರುಬರಹಳ್ಳಿಯಿಂದ ಹೆಬ್ಬಾಳ ಮಾರ್ಗವಾಗಿ ಹೊಸಕೋಟೆಗೆ ಹೋಗೋದು ನಂಗೆ ರೂಢಿ. ಅದರಂತೆ ಹೊರಟೆ. ಶುಕ್ರವಾರ ರಾತ್ರಿ 8.25ರ ಸುಮಾರಿಗೆ ನಾಗವಾರ ಸಮೀಪ ಹೋಗ್ತಿದ್ದಂತೆ ಶಾಕ್.
ಇದ್ದಕ್ಕಿದ್ದಂತೆ ನನ್ನ NEXA Suzuki Motorcycle India #Baleno ರೋಡ್ ಮಧ್ಯದಲ್ಲೇ ಸ್ಟಾಪ್ ಆಯ್ತು. ಏನ್ ಆಯ್ತು ಅಂತ ನೋಡುವಷ್ಟರಲ್ಲಿ ಮುಂದೆ ಬಾನೆಟ್ ಮೇಲೆ ದಟ್ಟ ಹೊಗೆ. ತಕ್ಷಣ ಡೋರ್ ತೆಗೆಯಲು ಹೋದೆ, ಮುಂದಿನ ಡೋರ್ ಓಪನ್ ಆಗಲಿಲ್ಲ. ಹಿಂದಿನ ಸೀಟಲ್ಲಿದ್ದ ಪತ್ನಿ ಪ್ರಿಯಾ, ಹಿಂದಿನ ಡೋರ್ ಓಪನ್ ಮಾಡಿದ್ರು. ಅಬ್ಬಾ.. ಕಡೇ ಪಕ್ಷ ಹಿಂದಿನ ಡೋರ್ ಓಪನ್ ಆಯ್ತು. ಪತ್ನಿ, ಮಗ, ಮಗಳು ಬೇಗ ಕಾರಿಂದ ಹೊರಗೆ ನಡೆದ್ರು. ನಾನು ಕೂಡ ಮರು ಯೋಚಿಸದೆ ಹಿಂದಿನ ಡೋರ್ ನಿಂದ ಹೊರ ಬಂದೆ.
ಹೊರ ಬಂದಾಕ್ಷಣ ಆ ಭೀಕರ ದೃಶ್ಯ ನೋಡಿ, ಕಂಗಾಲಾದೆ. ಕಾರು ಧಗ ಧಗನೇ ಹೊತ್ತಿ ಉರಿಯುತ್ತಿತ್ತು. ಪತ್ನಿ, ಮಕ್ಕಳನ್ನ ರಸ್ತೆ ಬದಿ ನಿಲ್ಲಿಸಿ, ಕಾರ್ ಬಳಿ ಬಂದೆ.. ಸ್ಥಳೀಯರು ಜೊತೆಯಾಗಿ ಬೆಂಕಿ ನಂದಿಸಲು ಯತ್ನಿಸಿದ್ರು.. But no way.. ಬೆಂಕಿ ಧಗ ಧಗ ಅಂತ ಕಾರನ್ನ ಭಸ್ಮಾ ಮಾಡ್ತು. ಸುಮಾರು 20 ನಿಮಿಷ ಉರಿಯುತ್ತಲೇ ಇತ್ತು.. ಬೆಂಕಿ ನಂದಿಸಲು ಎಷ್ಟೇ ಪ್ರಯತ್ನ ಪಟ್ರು ಆಗಲಿಲ್ಲ. ಕೊನೆಗೆ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ರು..
ಇತ್ತ, ಮಗ, ಮಗಳು, ಪತ್ನಿ ಬೆಚ್ಚಿ ಬಿದ್ದಿದ್ರು.. ಕಣ್ಣೀರಾಕಿದ್ರು.. ನಂಗೆ, ನಮಗೇನೂ ಆಗಲಿಲ್ಲ, ಸದ್ಯ ಪ್ರಾಣ ಉಳಿತೂ ಅನ್ನೋ ಸಮಾಧಾನ, ನೆಮ್ಮದಿ. ಆದ್ರೆ, 16-06-2017 ರಲ್ಲಿ ಕಷ್ಟವಾದ್ರೂ ಇಷ್ಟಪಟ್ಟು ತಗೊಂಡ #Baleno ಕಾರು ಕಣ್ಮುಂದೆಯೇ ಭಸ್ಮವಾಯ್ತು..
ಐದೇ ವರ್ಷಕ್ಕೆ ಕಾರೊಂದು ಹೀಗೆ ಸುಟ್ಟು ಹೋದ್ರೆ ಹೇಗೆ..?
#insurance ಕಂಪನಿಯವರು ಕೇವಲ IDV ವ್ಯಾಲೂವ್ ಮೇಲೆ ಹಣ ಕೊಡ್ತಾರಂತೆ
ಅದಕ್ಕೂ ನೂರೆಂಟು ಪ್ರಶ್ನೆ, ಸರ್ವೇ, ತನಿಖೆ..
ಹೀಗೆ ರನ್ನಿಂಗ್ ನಲ್ಲಿ ಇರುವಾಗಲೇ ಕಾರಿಗೆ ಬೆಂಕಿ ಬಿದ್ರೆ ಹೊಣೆ ಯಾರು.? ಪ್ರಶ್ನೆಗಳು ಮಾತ್ರ ಉಳಿದಿವೆ.. ಉತ್ತರ ಸಿಕ್ತಿಲ್ಲ..
ಸದ್ಯ, ಜೀವ ಉಳಿದಿದೆ.. ಅದೇ ಪುಣ್ಯ..
ಹೌದು.. ಹೀಗೆ ತಮಗಾದಂತ ಘಟನೆಯನ್ನು ಬೆಂಗಳೂರಿನ ಹಿರಿಯ ಪತ್ರಕರ್ತ ಸತೀಶ್ ಆಂಜಿನಪ್ಪ ಎಂಬುವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಕ್ಷಣಾರ್ಧದಲ್ಲಿ ಕಾರ್ ಹೊತ್ತಿ ಉರಿದಿದ್ದರ ನಡುವೆ ಬಚಾವ್ ಆಗಿ ಬಂತ ತಮ್ಮ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಅಂದಹಾಗೇ ಸತೀಶ್ ಅವರು 2017ರಲ್ಲಿ ಇಷ್ಟಪಟ್ಟು ಮಾರುತಿ ಸುಜುಕಿ ಕಂಪನಿಯ ಬಲೆನೋ ಕಾರನ್ನು ಖರೀದಿಸಿದ್ದರು. ಅಷ್ಟೇ ಕಾಳಜಿ ವಹಿಸಿ ಕಾಲ ಕಾಲಕ್ಕೆ ಕಂಪನಿಯ ಶೋ ರೂಂ ಸರ್ವಿಸ್ ಸೆಂಟರ್ ನಲ್ಲಿಯೇ ಸರ್ವಿಸ್ ಕೂಡ ಮಾಡಿಸಿದ್ದರು. ಹೀಗಿದ್ದು ಕಳೆಜ ಜು.15, 2022ರಂದು ತಮ್ಮೂರಿಗೆ ತೆರಳುತ್ತಿದ್ದ ವೇಳೆಯಲ್ಲಿ ದಾರಿ ಮಧ್ಯೆಯೇ ಕಾರಿನ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡು, ಆ ಬಳಿಕ ಹೊತ್ತಿ ಉರಿದಿದ್ದು ಮಾತ್ರ ಸುಜುಕಿ ಬಲೆನೋ ಕಾರು ಸೇಫ್ ಅಲ್ವಾ ಎನ್ನುವ ಆತಂಕವನ್ನು ಗ್ರಾಹಕರಲ್ಲಿ ಹುಟ್ಟಿಸಿದೆ.
ಸೋ ಈಗ ಕಾರು ಖರೀದಿಸುವವರು ಈ ಎಲ್ಲಾ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿ, ತಿಳಿದುಕೊಂಡು ಖರೀದಿಸೋದು ಒಳಿತು. ಇಲ್ಲವಾದಲ್ಲಿ ಇಷ್ಟಪಟ್ಟು ಖರೀದಿಸಿದಂತ ಕಾರೇ ಮುಂದೊಂದು ದಿನ ತಮ್ಮ ಪ್ರಾಣಕ್ಕೆ ಕುತ್ತು ತಂದರು ತರಬಹುದು. ಎಚ್ಚರ ವಹಿಸಿ, ಹತ್ತುಬಾರಿ ಇಂತಹ ಕಾರನ್ನು ಕೊಳ್ಳೋ ಮುನ್ನ ಯೋಚಿಸಿ ಎಂಬುದು ನಮ್ಮ ಕಳಕಳಿ ಕೂಡ ಆಗಿದೆ.

About The Author