www.karnatakatv.net: ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ನರೇಂದ್ರ ಮೋದಿಯನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ.
“ನೀವು ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ,” ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ “ಧನ್ಯವಾದಗಳು” ಎಂದು ಉತ್ತರಿಸಿದ್ದಾರೆ. ನಂತರ ಇಸ್ರೇಲ್ ಪ್ರಧಾನಿ “ಬನ್ನಿ ನಮ್ಮ ಪಕ್ಷಕ್ಕೆ ಸೇರಿ,” ಎಂದು ಪ್ರಧಾನಿ ಮೋದಿ ಅವರನ್ನ ಆಹ್ವಾನಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜೋರಾಗಿ ನಕ್ಕಿದ್ದಾರೆ.
ಹಾಗೇ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಜೊತೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಪ್ರಧಾನಿ ಜೊತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಕೂಡಾ ಉಪಸ್ಥಿತಿ ಇದ್ದರು. ಇನ್ನು ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ಭಾರತೀಯರು ಇಸ್ರೇಲ್ ಜೊತೆಗಿನ ಸ್ನೇಹ ಸಂಬoಧಕ್ಕೆ ಗೌರವ ನೀಡುತ್ತಾರೆ. ದ್ವಿಪಕ್ಷೀಯ ಸಂಬoಧ ಹಾಗೂ ವ್ಯವಹಾರ ವೃದ್ಧಿ ಮಾಡಲು ನಾವು ಜೊತೆಯಾಗಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ,” ಎಂದು ತಿಳಿಸಿದ್ದಾರೆ.
ಗ್ಲಾಸ್ಗೋದಲ್ಲಿ ನಡೆದ COP26 ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಮಾತನಾಡಿ, “ಜಾಗತಿಕ ತಾಪಮಾನ ಏರಿಕೆ ಆಗುವುದನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ತಡೆಯುವ ನಿಟ್ಟಿನಲ್ಲಿ ನೆಟ್ ಜೀರೋ ಗುರಿಯನ್ನು ಭಾರತ ದೇಶವು 2070 ರಲ್ಲಿ ತಲುಪಲಿದೆ,” ಎಂದು ಘೋಷಣೆ ಮಾಡಿದ್ದಾರೆ. ಹಾಗೇ COP26 ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಅಮೆರಿಕ ಹಾಗೂ ಯುರೋಪ್ ದೇಶಗಳು ನಿಟ್ಟಿನಲ್ಲಿ ನೆಟ್ ಜೀರೋ ಗುರಿಯನ್ನು 2050 ರ ವೇಳೆಗೆ ತಲುಪಲಾಗುತ್ತದೆ ಎಂದು ತಿಳಿಸಿದೆ. ಈ ಸಂದರ್ಭದಲ್ಲೇ ಚೀನಾವು 2060 ರಲ್ಲಿ ನೆಟ್ ಜೀರೋ ಗುರಿಯನ್ನು ತಲುಪಲಾಗುವುದು ಎಂದು ತಿಳಿಸಿದೆ. ಆದರೆ “ಭಾರತ ಮಾತ್ರ ಈ ಗುರಿಯನ್ನು ಹೆಚ್ಚುವರಿ ಹತ್ತು ವರ್ಷವನ್ನು ತೆಗೆದುಕೊಳ್ಳಲಿದೆ. ನೆಟ್ ಜೀರೋ ಗುರಿಯನ್ನು ಭಾರತ ದೇಶವು 2070 ರಲ್ಲಿ ತಲುಪಲಿದೆ,” ಎಂದು ಪ್ರಧಾನಿ ಘೋಷಣೆ ಮಾಡಿದ್ದಾರೆ.