ಇಸ್ರೇಲ್ನಲ್ಲಿ ಕರೊನಾ ಮಹಾಮಾರಿ ಮಿತಿಮೀರುತ್ತಿರುವ ಹಿನ್ನೆಲೆ ಎರಡನೇ ಬಾರಿಗೆ ದೇಶಾದ್ಯಂತ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ಮೂಲಕ ಎರಡನೇ ಬಾರಿಗೆ ದೇಶಾದ್ಯಂತ ಕಠಿಣ ಲಾಕ್ಡೌನ್ ಜಾರಿ ಮಾಡಿದ ವಿಶ್ವದ ಮೊದಲ ದೇಶ ಇಸ್ರೇಲ್ ಆಗಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಇಸ್ರೆಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸೆಪ್ಟೆಂಬರ್ 18ರ ಮಧ್ಯಾಹ್ನ 2 ಗಂಟೆಯಿಂದ ಲಾಕ್ಡೌನ್ ಜಾರಿಗೆ ಬರಲಿದೆ. ಹಾಗೂ ದೇಶದಲ್ಲಿ ಮೂರು ವಾರಗಳ ಕಾಲ ಈ ಲಾಕ್ಡೌನ್ ಇರಲಿದೆ ಅಂತಾ ಹೇಳಿದ್ರು.
ಸರ್ಕಾರದ ಈ ನಿರ್ಧಾರ ನಿಮಗೆ ಭಾರವಾಗಬಹುದು ಎಂದು ನನಗೆ ತಿಳಿದಿದೆ. ಆದರೂ ದೇಶದ ಹಿತದೃಷ್ಟಿಯಿಂದ ಈ ಲಾಕ್ಡೌನ್ ಅನಿವಾರ್ಯ ಅಂತ ತಡರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.
ಇಸ್ರೇಲ್ನಲ್ಲಿ ಪ್ರಸ್ತುತ ದಿನಕ್ಕೆ 3000 ಕರೊನಾ ಕೇಸ್ಗಳು ದಾಖಲಾಗ್ತಿವೆ. ಇಸ್ರೇಲ್ನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಕರೊನಾ ಕೇಸ್ಗಳಿದ್ದು ಈವರೆಗೆ 1119 ಮಂದಿ ಕರೊನಾದಿಂದ ಸಾವನ್ನಪ್ಪಿದ್ದಾರೆ.