ಶ್ರೀಹರಿಕೋಟಾ: ಭಾರತದ ಮಹತ್ವದ ಚಂದ್ರಯಾನ-2 ಗಗನ ನೌಕೆ ಯಶಸ್ವಿಯಾಗಿ ಉಡಾವಣೆಯಾಗಿದ್ದು ಭಾರತ ಮತ್ತೊಂದು ದಾಖಲೆ ಬರೆಯುವತ್ತ ದಾಪುಗಾಲು ಹಾಕಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ ಸರಿಯಾಗಿ 2.43ನಿಮಿಷಕ್ಕೆ ಉಡಾಯನವಾದ ಗಗನನೌಕೆ ಚಂದಿರನ ದಕ್ಷಿಣ ದ್ರುವದತ್ತ ಸಾಗಲಿದೆ.ಭೂಸ್ಥಿರ ಕಕ್ಷೆ ಸೇರಿದ ಚಂದ್ರಯಾನ-2 ಗಗನನೌಕೆ ಚಂದಿರನ ಕುರಿತಾದ ಹಲವು ವೈಜ್ಞಾನಿಕ ಸಂಶೋಧನೆಗಳಿಗೆ ಸಹಕಾರಿಯಾಗಲಿದೆ. ಇನ್ನು ಇಂದಿನಿಂದ 54ನೇ ದಿನಗಳವರೆಗೂ ಅಂತರೀಕ್ಷಕ್ಕೆ ಪ್ರಯಾಣ ಬೆಳೆಸಲಿರೋ ಚಂದ್ರಯಾನ-2 ಗಗನನೌಕೆ, ಲ್ಯಾಂಡರ್ ಮತ್ತು ಆರ್ಬಿಟರ್ ಗಳ ಮೂಲಕ ಅಲ್ಲಿಂದ ಚಂದಿರನ ಫೋಟೋ ತೆಗೆದುಕಳುಹಿಸಲಿದೆ.
ಚಂದ್ರನ ಮೈಲ್ಮೈನ ವಿಸ್ತೃತ ಅಧ್ಯಯನ, ಸಮಗ್ರ ಖನಿಜಾಂಶ ವಿಶ್ಲೇಷಣೆ ಕುರಿತಾಗಿ ಸಂಶೋಧನೆ ನಡೆಸಲು ಸಹಕಾರಿಯಾಗಲಿರುವ ಭಾರತದ ಈ ಮಹತ್ವದ ಚಂದ್ರಯಾನ-2 ನೌಕೆ ಸಹಕಾರಿಯಾಗಲಿದೆ. ಇನ್ನು ಭಾರತವಲ್ಲದೆ ಇನ್ನೂ ಮೂರು ದೇಶಗಳು ಚಂದ್ರನ ಅಧ್ಯಯನಕ್ಕೆ ಗಗನನೌಕೆ ಉಡಾವಣೆ ಮಾಡಿದೆ. ಆದರೆ ಚಂದ್ರನ ದಕ್ಷಿಣ ದ್ರುವ ತಲುಪಿ ಅಲ್ಲಿನಿಂದ ಸಂಶೋಧನೆ ನಡೆಸುವಲ್ಲಿ ಭಾರತ ಮೊದಲ ಹೆಜ್ಜೆ ಇಟ್ಟಿದೆ.
ಇನ್ನು ಚಂದ್ರಯಾನ-2 ಸುಮಾರು 978 ಕೋಟಿ ವೆಚ್ಚದ ಯೋಜನೆಯಾಗಿದ್ದು, ಇದನ್ನು ಹೊತ್ತು ನಭಕ್ಕೆ ಜಿಗಿದಿರುವ ಜಿಎಸ್ಎಲ್ವಿ ಎಂಕೆ111 ಭಾರತದ ಅತಿ ಬಲಶಾಲಿ ರಾಕೆಟ್. ಬರೋಬ್ಬಸರಿ 43.43 ಮೀಟರ್ ಎತ್ತರದ ಈ ರಾಕೆಟ್ ತನ್ನ ಗಾತ್ರದಿಂದಾಗಿ ಭಾರತದ ಬಾಹುಬಲಿ ಅಂತಾ ಕರೆಯಲಾಗುತ್ತೆ.
ಇನ್ನು ಜುಲೈ 15ರ ಮಧ್ಯರಾತ್ರಿ ಇಸ್ರೋ ನಡೆಸಿದ ಮೊದಲ ಪ್ರಯತ್ನ ವೇಳೆ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಉಡಾವಣೆ ಸ್ಥಗಿತಗೊಳಿಸಲಾಗಿತ್ತು. ಕೇವಲ 56 ನಿಮಿಷ ಇದ್ದಾಗ ರಾಕೆಟ್ಗೆ ಇಂಧನ ತುಂಬಿಸುವಾಗ ದೋಷ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಉಡಾವಣೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಸಾಕಷ್ಟು ಎಚ್ಚರಿಕೆಯಿಂದ ಹಗಲು ರಾತ್ರಿ ಕಾರ್ಯ ನಿರ್ವಹಿಸಿರುವ ಇಸ್ರೋ ವಿಜ್ಞಾನಿಗಳು ದೋಷಗಳನ್ನು ಸರಿಪಡಿಸಿ ಮತ್ತೆ ಗನನ ನೌಕೆಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ.