ಬೆಂಗಳೂರು : ಚಂದ್ರಯಾನ 3 ಯಶಸ್ವಿ ಆದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.
ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರಯಾನ 3 ಯೋಜನೆ ಭಾರತದ ಹಲವು ವರ್ಷಗಳ ಕನಸಾಗಿದೆ. ಇಸ್ರೋ ವಿಜ್ಞಾನಿಗಳು ಭಾರತೀಯರೆಲ್ಲರ ಕನಸನ್ನು ನನಸು ಮಾಡಿದ್ದಾರೆ.
ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಾರಂಭದ ದಿನಗಳಲ್ಲಿಯೇ ಬೆಂಬಲ ಮತ್ತು ನೆರವನ್ನು ನೀಡಿದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲ ನೀಡಿದೆ.
ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಪೂರ್ವವಾದ ಸಾಧನೆ ಮಾಡಿದೆ. ಭಾರತೀಯರೆಲ್ಲರಿಗೂ ಇದು ಹೆಮ್ಮೆಯ ಕ್ಷಣ. ಈ ಅಸಾಧಾರಣ ಸಾಧನೆ ಮಾಡಿದ ಪ್ರತಿಯೊಬ್ಬ ವಿಜ್ಞಾನಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ಮುಂಚೂಣಿ ದೇಶಗಳ ಸಾಲಿನಲ್ಲಿ ಮತ್ತೊಮ್ಮೆ ನಿಚ್ಚಳವಾಗಿ ಪ್ರಕಾಶಿಸಿದೆ.ಇಸ್ರೋ ಸಂಸ್ಥೆಯ ಮುಂದಿನ ದಿನಗಳ ಎಲ್ಲಾ ಪ್ರಯತ್ನಗಳಿಗೂ ಶುಭ ಹಾರೈಸುತ್ತೇನೆ.
Media celebrate : ಚಂದ್ರನ ಮೇಲೆ ಲ್ಯಾಂಡ್ ಆದ ವಿಕ್ರಮ್, ಹುಬ್ಬಳ್ಳಿ ಪತ್ರಕರ್ತರಿಂದ ಪಟಾಕಿ ಸಿಡಿಸಿ ಜಯ ಘೋಷಣೆ:
Media celebrate : ಚಂದ್ರನ ಮೇಲೆ ಲ್ಯಾಂಡ್ ಆದ ವಿಕ್ರಮ್, ಹುಬ್ಬಳ್ಳಿ ಪತ್ರಕರ್ತರಿಂದ ಪಟಾಕಿ ಸಿಡಿಸಿ ಜಯ ಘೋಷಣೆ:
Leaders support: ಜಲ ವಿವಾದ: ಸರ್ವಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಮುಖಂಡರ ಸಂಪೂರ್ಣ ಬೆಂಬಲ :