ಧಾರವಾಡ: ದೇಶದಲ್ಲಿ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಯಶಸ್ವಿಯಾದ ನಂತರ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದು ಆದಿತ್ಯ ಎಲ್ 1 ಉಡಾವಣೆ ಮಾಡಿದ್ದಾರೆ. ವಿಜ್ಞಾನಿಗಳ ಈ ಕಾರ್ಯಕ್ಕೆ ರಾಷ್ಟಮಟ್ಟದಲ್ಲಿ ಯಶಸ್ವಿಯಾಗಲೆಂದು ಜನ ಹಾರೈಸುತ್ತಿದ್ದಾರೆ.
ಈಗ ಧಾರವಾಡದ ಜೆ ಎಸ್ ಎಸ್ ಶ್ರೀಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಕಿರುನಾಟಕ ಮಾಡುವ ಮೂಲಕ ಯಶಸ್ವಿಯಾಗಲೆಂದು ಶುಭ ಹಾರೈಸಿದ್ದಾರೆ. ಶಾಲಾ ಮಕ್ಕಳು ಭೂಮಿ, ಚಂದ್ರ, ಪ್ರಗ್ಯಾನ್ ವಿಕ್ರಮ್, ವೇಷ ತೊಟ್ಟ ಮಕ್ಕಳು ಭೂಮಿ ತಾಯಿ ತನ್ನ ಮಕ್ಕಳಿಗೆ ಚಂದ್ರನ ಕುರಿತಾದ ಕತೆಗಳನ್ನು ಹೇಳುತ್ತಿದ್ದಳು ಮಕ್ಕಳಾದ ಪ್ರಜ್ಞಾನ್ ಮತ್ತು ವಿಕ್ರಮ್ ಚಂದ್ರನೂರಿಗೆ ಹೋಗಿ ಆಟವಾಡುತ್ತಿರುವುದು ಮಕ್ಕಳಿಗೆ ಚಂದಮಾಮ ಆಟವಾಡುವುದಕ್ಕೆ ಅಂಗಳದಲ್ಲಿ ಜಾಗ ನೀಡಿರುವುದು ಚಂದ್ರನ ಅಂಗಳದಲ್ಲಿ ಆಟವಾಡುತ್ತಿರುವ ವಿಕ್ರಮ್ ಮತ್ತು ಪ್ರಜ್ಞಾನ್ ಎಂದು ಕತೆಯನ್ನು ಸೃಷ್ಠಿ ಮಾಡಿ ಶಾಲೆಯಲ್ಲಿರುವ ಪುಟಾಣಿ ಮ್ಕಕಳ ಮೂಲಕ ನಾಟಕ ಮಾಡಿಸಿ ಆದಿತ್ಯ ರಾಕೇಟ್ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
Cricket: ಪಾಕ್ ವಿರುದ್ದ ಭಾರತ ಗೆಲುವು ಸಾಧಿಸಲಿ ಎಂದು ಕ್ರೀಡಾಭಿಮಾನಿಗಳಿಂದ ಪೂಜೆ..!