Bengalore news:
ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ ಮತ್ತು ಲೇಖಕ ಸಿ.ಆರ್ ಸತ್ಯ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.80 ವರ್ಷದ ಸಿ ಆರ್ ಸತ್ಯ ಅವರು ಅನಾರೋಗ್ಯದಿಂದ ಬಳಲುತಿದ್ದರು ಇವರನ್ನು ಹೆಬ್ಬಾಳದ ಬಾಪ್ಟಿಸ್ಟ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದ್ದು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ .ಸತ್ಯ ಅವರಿಗೆ ಪತ್ನಿ,ಪುತ್ರ ಮತ್ತು ಪುತ್ರಿ ಇದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಹೆಬ್ಬಾಳದ ಚಿರಾಗಾರದಲ್ಲಿ ನೆರವೇರಿಸಲಾಯಿತು
ಇನ್ನು ಇವರು ರಾಕೆಟ್ ಅಭಿವೃದ್ದಿಯ ಆರಂಭದಲ್ಲಿ ಹೆಗಲು ಕೊಟ್ಟಿದ್ದ ಇವರು ಕ್ಷಿಪಣಿ ತಜ್ಞ ಮಾಜಿ ರಾಷ್ಟ್ರಪತಿ ಡಾ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಒಡನಾಡಿಯಾಗಿದ್ದರು. ಅಣು ತಜ್ಞ ಡಾ ರಾಜಾರಾಮಣ್ಣ ಇವರಿಗೆ ಮಾರ್ಗದರ್ಶಕರಾಗಿದ್ದರು. ಉತ್ತಮ ಲೇಖಕರಾಗಿರುವ ಇವರು “ಅಳಿವಿಲ್ಲದ ಸ್ಥಾವರ” ” ಡಾ ಯು.ಆರ್ ರಾವ್” ಮತ್ತು “ತ್ರಿಮುಖಿ” ಎನ್ನುವ ಲೇಖನಗಳನ್ನು ಬರೆದಿದ್ದಾರೆ.
ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ, ಮಗನ ಮದುವೆಗೆ ಆಹ್ವಾನಿಸಿದ ಸುಮಲತಾ..
ಚೈತ್ರ ನವರಾತ್ರಿಯಲ್ಲಿ ದುರ್ಗೆಯ ಮೂರ್ತಿಯನ್ನ ಯಾವ ಮಣ್ಣಿನಿಂದ ಮಾಡಲಾಗತ್ತೆ ಗೊತ್ತಾ..?