Sunday, October 5, 2025

Latest Posts

ಕೃಷ್ಣೆಗಾಗಿ ರಾಜ್ಯದಲ್ಲಿ ಹೋರಾಟದ ಕಹಳೆ

- Advertisement -

ರಾಜ್ಯದ 3 ಜಿಲ್ಲೆಗಳಿಗೆ ಕೃಷ್ಣಾ ನದಿ ನೀರನ್ನು ತರುವ, ಗಂಭೀರ ಪ್ರಯತ್ನಕ್ಕೆ ವೇದಿಕೆ ಸಿದ್ಧವಾಗಿದೆ. ಹಲವು ದಶಕಗಳಿಂದ ಕಾವೇರಿ ಕೊಳ್ಳದ ನೀರಿಗಾಗಿ, ಜಾತಕ ಪಕ್ಷಿಯಂತೆ ಕಾಯುತ್ತಾ ಕೂತಿದ್ರೂ, ಕನಸು ನನಸಾಗುವ ಲಕ್ಷಣಗಳು ಕಾಣಿಸ್ತಿಲ್ಲ. ಹೀಗಾಗಿ ನೆರೆಯ ಆಂಧ್ರ ಪ್ರದೇಶದ ಕುಪ್ಪಂನಲ್ಲಿ ಹರಿಯುತ್ತಿರುವ ಕೃಷ್ಣೆಯನ್ನು, ರಾಜ್ಯಕ್ಕೆ ತರಲು ಪ್ರಯತ್ನ ಶುರುವಾಗಿದೆ.

ಕೃಷ್ಣಾ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಿ ಎಂದು, ಸರ್ಕಾರದ ಮುಂದೆ ಹಕ್ಕೊತ್ತಾಯ ಸಲ್ಲಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿಯೇ ಜಲಾಗ್ರಹ ಜಂಟಿ ಕ್ರಿಯಾಸಮಿತಿ ಉಗಮವಾಗಿದೆ.

ಆನಂತಪುರ, ಹಿಂದೂಪುರ, ಕುಪ್ಪಂವರೆಗೂ ಬಂದಿರುವ ಕೃಷ್ಣ ಮತ್ತು ಗೋದಾವರಿ ನದಿ ನೀರನ್ನು, ರಾಜ್ಯದ ಗಡಿ ಜಿಲ್ಲೆಗಳಿಗೆ ಹರಿಸಬೇಕೆಂಬ ಬೇಡಿಕೆ ಇದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ-ಜೆಡಿಎಸ್‌ ಪಕ್ಷಗಳು, ಈ ಬಗ್ಗೆ ದನಿ ಎತ್ತಿದ್ದವು. ಇದು ಚುನಾವಣಾ ಪ್ರಚಾರ ಅಸ್ತ್ರವಾಗಿಯೂ ಬಳಕೆಯಾಯಿತು. ಇದೀಗ ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆಯಲ್ಲಿ, ಭೂಮಿ ಮೇಲ್ಮೈ ನೀರನ್ನು ಹರಿಸಬೇಕೆಂಬ ಉದ್ದೇಶದಿಂದ ಸಮಿತಿ ರಚನೆಯಾಗಿದೆ.

ಇದಕ್ಕೆ ಪೂರಕವಾಗಿ ಸಂಸದ ಡಾ. ಕೆ. ಸುಧಾಕರ್‌ ಕೂಡ, ಆಂಧ್ರ ಸಿಎಂ ಚಂದ್ರಬಾಬುನಾಯ್ಡು ಅವರನ್ನು ಭೇಟಿಯಾಗಿದ್ದಾರೆ. ಕೃಷ್ಣ ನದಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಮತ್ತೊಂದೆಡೆ ಕೋಲಾರ ಸಂಸದ ಮಲ್ಲೇಶ್‌ ಬಾಬು ಕೂಡಾ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ.

ಈಗಾಗಲೇ ರಾಜ್ಯದ ಗೌರಿಬಿದನೂರು, ಬಾಗೇಪಲ್ಲಿ, ಮುಳಬಾಗಿಲು, ಕೋಲಾರ ಹೀಗೆ ಗಡಿ ಭಾಗದ ಜಿಲ್ಲೆಗಳ ಸುಮಾರು 5ರಿಂದ 20 ಕಿಲೋ ಮೀಟರ್‌ ವ್ಯಾಪ್ತಿಯೊಳಗೆ, ಕೃಷ್ಣಾ ನದಿ ನೀರು ಬರುತ್ತಿದೆ. ಪರಿಣಾಮ ಕೆರೆಗಳು ತುಂಬಿಕೊಂಡಿದ್ದು, ಜನರ ನೀರಿನ ಸಮಸ್ಯೆಗೂ ಮುಕ್ತಿ ಸಿಕ್ಕಿದೆ.

- Advertisement -

Latest Posts

Don't Miss