ಬಾಣಂತಿಯರ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇದ್ದಿದ್ದು ನಾಚಿಕೆಗೇಡಿನ ಸಂಗತಿ: ಜೋಶಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಳ್ಳಾರಿಯಲ್ಲಿ ಬಾಣಂತೀಯರ ಸಾವು ಸೈನ್ಸ್ ಮುಂದುವರೆದಂತ ಕಾಲದಲ್ಲಿ ಆಗಿರೋದು ನಾಚಿಕೆ ಗೇಡಿನಾ ಸಂಗತಿ. ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರೋದು ಅದಕ್ಕಿಂತ ನಾಚಿಕೆಗೇಡು. ಸಿಎಂ ಹೇಳಿದ ಮೂರು ದಿನದ ನಂತರವೂ ಯಾವ ಸಚಿವರು ಹೋಗಲ್ಲ. ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸಿದ ಪ್ರವೃತ್ತಿ ಸರ್ಕಾರಕ್ಕೆ ಶೋಭೆ ತರಲ್ಲ.

ಸ್ಥಳೀಯವಾಗಿ ಔಷಧಗಳು ಲಭ್ಯ ಇಲ್ಲಾ, ಯಾವ ಕಂಪನಿ ಕೊಟ್ರು ತಗೋತಾರೆ. ಸರ್ಕಾರ ದಿವಾಳಿ ಆಗಿದೆ, ದುಡ್ಡಿಲ್ಲ, ಬೊಕ್ಕಸ ಖಾಲಿ ಆಗಿದೆ. ಇದನ್ನ ಹೆಚ್ಚು ರಾಜಕೀಯವಾಗಿ ನಾನು ತಗೋಳಲ್ಲ. ದಿನೇಶ್ ಗುಂಡೂರಾವ್, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಏನೇನೋ ಉತ್ತರ ಕೊಡ್ತಾರೆ. ನೀವು ತಕ್ಷಣ ಹೋಗಬೇಕಿತ್ತು, ಆದರೆ ವಿರೋಧ ಪಕ್ಷದ ನಾಯಕರು ಹೋದ ನಂತರ ನೀವು ಹೋಗ್ತೀರಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

ನಬಾರ್ಡ್ ಯೋಜನೆಯಿಂದ ಅನುದಾನ ಕಡಿತ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ನಬಾರ್ಡ್ ನೀಂದ ಕೋ ಆಪರೇಟಿವ್ ವಲಯಕ್ಕೆ ನೀಡುವ ಸಾಲದಲ್ಲಿ ಕೊರತೆ ಆಗಿಲ್ಲ. ಮುಖ್ಯಮಂತ್ರಿಗಳು ಮನಸಿಗೆ ಬಂದಂಗೆ ಅಟ್ಟರ್ ನಾನಸೆನ್ಸ್ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರ ಜಿರೋ ಪರ್ಸೆಂಟ್ ಬಡ್ಡಿಗೆ ಸಾಲ ನೀಡುವ ನಿರ್ಧಾರ ಕೈಗೊಂಡಿದ್ದು. ಸಿದ್ದರಾಮಯ್ಯ ತೆಗೆದುಕೊಂಡ ನಿರ್ಧಾರವಲ್ಲ. ಮುಡಾ, ಅಬಕಾರಿ, ವಾಲ್ಮೀಕಿ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಇದು ಚರ್ಚೆ ಆಗಬಾರದು ಎಂಬ ಉದ್ದೇಶದಿಂದ ಡೈವರ್ಡ್ ಮಾಡುತ್ತಿದ್ದಾರೆ. ಮುಡ ಅಹಗರಣದಲ್ಲಿ ಈಡಿ ಯಾಕೆ ಬಂತು ಎಂದು ಪ್ರಶ್ನಿಸಿದ್ದಾರೆ. ಮನಿ ಲ್ಯಾಂಡ್ರಿಂಗ್ ಆಗಿದೆ, ಅದಕ್ಕೆ ಈಡಿ ಎಂಟ್ರಿ ಆಗಿದೆ ಎಂದು ಜೋಶಿ ಆರೋಪಿಸಿದ್ದಾರೆ.

ನ್ಯಾಯಾಂಗದ ಮೇಲೆ‌ ಪ್ರಭಾವ ಬೀರುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂಬುದು ಸುಳ್ಳು. ಯುಪಿಎ ಅವಧಿಯಲ್ಲಿ ಯಾರ ಮೇಲೆ ಪ್ರಭಾವ ಬೀರಿದ್ದರಿ ಎಂಬ ಟ್ರ್ಯಾಕ್ ರೆಕಾರ್ಡ್ ಇದೆ. ಸಿದ್ದರಾಮಯ್ಯ ಮೊದಲು ನಿಮ್ಮ ನಾಯಕರು ಏನ್ ಮಾಡಿದ್ದಾರೆ ನೋಡಿ. ಪೆಗಾಸಸ್ ನಲ್ಲಿ ವಿಚಾರ ಇಟ್ಕೊಂಡು 15 ದಿನ ಸದನ ನಡೆಯಂತೆ ಮಾಡಿದ್ರು. ಈಗ ಪೆಗಾಸಸ್ ಏನಾಗಿದೆ ? ಯಾವುದೇ ಸಾಕ್ಷಿ ಇಲ್ಲ ಎಂದು ಬಂದಿದೆ. ರಾಹುಲ್ ಗಾಂಧಿ, ಜಾರ್ಜ್ ಸಿರೋಸಿಸ್ ಅಣತಿಯಂತೆ ಕೆಲಸ ಮಾಡ್ತಾರೆ. ಒಬ್ಬ ಬುದ್ದಿ ಹೀನ ನಾಯಕನಿಂದ ಕಾಂಗ್ರೆಸ್ ಅವನತಿ ಹೊಂದುತ್ತಿದೆ. ಕಾಂಗ್ರೆಸ್ ನಾಯಕರು ಒಳ್ಳೆಯ ಲೀಡರ್ ಹುಡುಕಿಕೊಳ್ಳೋದು ಒಳ್ಳೆಯದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

About The Author