ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಅಸಹಾಯಕ ಸ್ಥಿತಿಯಲ್ಲಿರುವದನ್ನು ನಾನು ನೋಡ್ತಿದಿನಿ. ರಾಜಕೀಯ ವಿದ್ಯಮಾನ ನೋಡಿದರೆ ಇಬ್ಬರು ಕೂಡಾ ಯಾರೂ ಹಿಂದೆ ಸರಿಯೋದಿಲ್ಲ ಎಂಬ ಪ್ರತಿಷ್ಟೆಗೆ ಬಿದ್ದಿದ್ದಾರೆ. ಇದೇ ರೀತಿ ಮುಂದೆ ನಡೆದರೆ ರಾಜ್ಯ ರಾಜಕೀಯ ಅಲ್ಲೋಲ ಕಲ್ಲೋಲ ಆಗೋ ಸಾಧ್ಯತೆ ಇದೆ ಅಂತ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಏನೂ ಬೇಕಾದರೂ ಆಗಬಹುದು. ಇದನ್ನು ಬಗೆಹರಿಸಲು ಹೈಕಮಾಂಡ್ ಎರಡ್ಮೂರು ಸೂತ್ರ ಬಿಟ್ಟರೂ ಇಬ್ರೂ ಅದನ್ನ ಒಪ್ಪಿಕೊಳ್ಳಲು ತಯಾರಿಲ್ಲ. ಇಬ್ರನ್ನೂ ಬಿಟ್ಟು ಬೇರೆಯ ಸೂತ್ರ ತಯಾರು ಮಾಡೋ ಸಾಧ್ಯತೆ ಇದೆ ಅಂತ ನನಗೆ ತಿಳಿದು ಬಂದಿದೆ. ಈಗ ನಮಗೆ ಕಾಣ್ತಿರೋ ಎರಡು ಕುದುರೆಗಳ ಜೊತೆ ಇನ್ನೊಂದು ಕಾಣದೇ ಇರೋ ಮೂರನೇ ಕುದರೆ ರೇಸಿಗೆ ಬಂದ್ರೂ ಆಶ್ಚರ್ಯ ಇಲ್ಲ ಎಂದಿದ್ದಾರೆ.
ಕೇಂದ್ರದಲ್ಲಿ ಚರ್ಚೆ ಆಗ್ತಾ ಇದೆ. ಫೋಟೋದಲ್ಲಿ ನಾಲ್ಕೈದು ಕುದುರೆ ಕಾಣುತ್ವೆ ಆದರೆ ಓಡೋ ಕುದುರೆಗಳು ಯಾವುದು? ಫೋಟೋದಲ್ಲಿ ಇರೋ ಕುದುರೆಗಳು ಓಡಲ್ಲ. ಇದೇ ತರ ಮುಂದುವರೆದರೆ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆ ಮಾಡಬೇಕಾಗಬಹುದು. ಕುದುರೆ ವ್ಯಾಪಾರವನ್ನ ಕಾಂಗ್ರೆಸ್ ಯಾವಾಗಿಂದ ಪ್ರಾರಂಭ ಮಾಡಿದೆ? ಅಂತ ಪ್ರಶ್ನಿಸಿ 1969 ರಿಂದಲೇ ಕುದುರೆ ವ್ಯಾಪಾರ ಪ್ರಾರಂಭ ಮಾಡಿದ್ದಾರೆ.
ಹೀಗಾಗಿ ಆಗ ಜಾರಕಿಹೊಳಿ ಎಲ್ಲಿದ್ರು? ಆಗಿನ್ನೂ ಅವರು ರಾಜಕೀಯದಲ್ಲಿ ಇರಲೇ ಇಲ್ಲ. ಕಾಂಗ್ರೆಸ್ ಇತಿಹಾಸ ತೆಗೆದು ನೋಡಿದರೆ ಗೊತ್ತಾಗುತ್ತೆ. ಮಹಾರಾಷ್ಟ್ರದ ಎಲ್ಲಾ ಶಾಸಕರನ್ನು ವಿಲಾಸ್ ರಾವ್ ದೇಶಮುಖ್ ರನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದು ಮರೆತು ಬಿಟ್ಟರಾ? ಅಂತ ಪ್ರಶ್ನಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

