Political news
ಬೆಂಗಳೂರು(ಫೆ.15): ರಾಜ್ಯದಲ್ಲಿ ಜೆಡಿಎಸ್ ಗೆ ಒಳ್ಳೆ ವಾತಾವರಣ ಇದೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಅಧಿಕಾರ ಮಾಡುತ್ತೆ ಅದರಲ್ಲಿ ಯಾವುದೇ ಸಂಶಯವಿಲ್ಲ ಪೂರ್ವದಿಂದ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ , ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಅಷ್ಟು ಸತ್ಯ ಸಿದ್ದರಾಮಯ್ಯ ಕೋಲಾರದಲ್ಲಿ ತಪ್ಪಿ ಸಿಕ್ಕಿಕೊಂಡಿದ್ದಾರೆ ಒಳಗೆ ಬರೋಕೂ ಆಗ್ತಿಲ್ಲ, ಹೊರಗೆ ಹೋಗೋಕು ಆಗ್ತಿಲ್ಲ ಸಿದ್ದರಾಮಯ್ಯ ನಮಗೆ ಒಳ್ಳೆ ಸ್ನೇಹಿತರು,ಎಲ್ಲಾದ್ರೂ ಒಳ್ಳೆ ಕಡೆ ನಿತ್ಕೊಳ್ಳಲಿ ಯಾವ ಜಾಗ ಅಂತ ಕೇಳಿದ್ರೆ ಬಹಿರಂಗವಾಗಿ ಹೇಳಲ್ಲ ಪೋನಿನಲ್ಲಿ ಕೇಳಿದರೆ ಹೇಳ್ತೇನೆ ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ .
ಕೋಲಾರ ನಗರದಲ್ಲಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿದ್ದ ಸಿಎಂ ಇಬ್ರಾಹಿಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಅವತ್ತು ನೀವು ನಮ್ಮ ಮಾತು ಕೇಳಿ ನಿಂತ್ತು ಗೆದ್ರಿ ಈಗ ನೀವು ನಮ್ ಜೊತೆ ಇಲ್ಲ ಆದ್ರೂ ನಿಮಗೆ ಒಳ್ಳೆದಾಗ್ಲಿ , ಹುಮನಾಬಾದ್ ಕ್ಷೇತ್ರದಲ್ಲಿ ನನ್ನ ಮಗನ ವಿರುದ್ದ ಪ್ರಚಾರ ಮಾಡಿ ಬಂದಿದ್ದೀರ ಯಾರ ತಂದೆಯಿಂದ ನೀವು ಎರಡು ಸಲ ಗೆದ್ರೋ,ಅಂತವನ ಮಗನಿಗೆ ವಿಷ ಕೊಡೋಕೆ ಹೋಗಿದ್ದೀರಾ ದೇವರು ನಿಮಗೆ ಒಳ್ಳೆಯದನ್ನ ಮಾಡಲಿ, ನಾವು ರಾಜ್ಯದಲ್ಲಿ 224 ಕ್ಷೇತ್ರದಲ್ಲೂ ಗೆಲ್ಲಬೇಕು ಅಂತ ನಮಗೆ ಬೇಕಿರೋದು 123 ಬಾಕಿ 1೦೦ ನಿವು ಹಂಚಿಕೊಳ್ಳಿ .
ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಕೆಲಸ ಮಾಡಿದ ವಿಚಾರವಾಗಿ ಮಾತನಾಡಿ ಸಿದ್ದರಾಮಯ್ಯರಿಗೆ ಬಂದಿದ್ದು ಬ್ಯಾನ್ ಮಾಡಿದ್ದ SDP, PFI ಮತಗಳು ಮೈಸೂರು ಇತಿಹಾಸದಲ್ಲಿ ಅಂತಹ ಎಲೆಕ್ಷನ್ ನಡೆಯಲ್ಲ 30 ಸಾವಿರದಿಂದ ಗೆಲ್ತಿನಿ ಅಂತ ಸಿದ್ದರಾಮಯ್ಯ ಹೇಳಿದ್ರು ನಾನು ನಿಲ್ಲಬೇಡಿ ಅಂತ ಹೇಳಿದ್ದೇ ಎಲೆಕ್ಷನ್ ಗೆ 10 ದಿನ ಇರೋವಾಗಲೇ ನನ್ನ ಬಳಿ ಗೆಲ್ಲೋಲ್ಲ ಅಂತ ಹೇಳಿದ್ರು ನಾನು ಸೋತುಬಿಡ್ತಿನಿ ಕಣಯ್ಯ ಎಲ್ರೂ ಒಂದಾಗಿದ್ದಾರೆ ಅಂತ ಹೇಳಿದ್ರು ದೈರ್ಯ ಬಿಡಬೇಡಿ ನಾವೆಲ್ಲಾ ಇದ್ದಿವಿ ಅಂತ ವಿಶ್ವಾಸ ನೀಡಿದ್ದೆ ರಾತ್ರಿ ಹಗಲು ಅವರ ಪರ ಕೆಲಸ ಮಾಡಿದ್ದೆ ಚುನಾವಣೆ ಖರ್ಚಿಗಾಗಿ ಸಿದ್ದರಾಮಯ್ಯರಿಗಾಗಿ ನನ್ನ 60 ಲಕ್ಷ ರೂ ಸೈಟು ಮಾರಿ 30 ಲಕ್ಷ ಅವರ ಕೈಗೆ ಕೊಟ್ಟಿದ್ದೇನೆ ನನಗೆ ಆ ವೇಳೆ ಮೂಗಿನಲ್ಲಿ ರಕ್ತ ಬಂದಿತ್ತು ಅವತ್ತು ನಾನು ದೇವೇಗೌಡ್ರ ಮಾತು ಕೇಳಿದ್ರೆ ಇವತ್ತು ಸಿದ್ದರಾಮಯ್ಯ ಇರುತ್ತಿರಲಿಲ್ಲ ಅದೇ ರೀತಿ ಬಾದಾಮಿ ಕ್ಷೇತ್ರದಲ್ಲೂ ಇಂತಹ ಇತಿಹಾಸ ಇದೆ ಈಗ ಹೇಳೋಕೆ ಆಗಲ್ಲ ಮುಸ್ಲಿಂ ಸಮಾಜದವರು ಕಡಿಮೆ ಬಲ ಇರೋರು ನಮ್ ಹತ್ರ ಹಣ ಇಲ್ಲಾ ಅದ್ರೆ ಸ್ವಾಭಿಮಾನ ಶಕ್ತಿ ಇದೆ ಅದರಿಂದಲೇ ನಾಲ್ಕು ವರ್ಷದ MLC ಸ್ಥಾನವನ್ನ ಅವರ ಮುಖಕ್ಕೆ ಎಸೆದು ಬಂದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಬಹುಮತ ಬರೋದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉತ್ತರಿಸಿ ಸಾಯಬೇಕಾದ್ರೆ ಕೊನೆ ಆಸೆ ಏನು ಅಂತ ಡಾಕ್ಟರ್ ಕೇಳಿದಂತಹ ಪರಿಸ್ಥಿತಿ ಸಿದ್ದರಾಮಯ್ಯದು ಇವ್ರು ಮುಖ್ಯಮಂತ್ರಿ ಇದ್ದಾಗ 130 ಸೀಟು ಬರುತ್ತೆ ಅಂತ ಹೇಳಿದ್ರು ಎಲ್ಲಾ ಇಟ್ಟುಕೊಂಡೆ ಕಳೆದ ಬಾರಿ 78 ಬರಲಿಲ್ಲ ಈಗ ಏನು ಇಲ್ಲದೇ ಏನು ಬರುತ್ತೆ ಎಂದು ವ್ಯಾಂಗ್ಯವಾಡಿದ್ದಾರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಮೀರ್ ಅಹ್ಮದ್ ನಿಂತಾಗ 42 ಸಾವಿರ ವೋಟು ಬಂದಿದೆ ಸಿದ್ದರಾಮಯ್ಯರಿಗೆ ಎಷ್ಟು ಬರಬಹುದು ರೀ ಅದರಲ್ಲಿ ವರ್ತೂರು ಪ್ರಕಾಶ್ ಇಲ್ಲಿ ಲೋಕಲ್ ಕುರುಬ ಇದ್ದಾನೆ,ಬಿಡ್ತಾನ ? ಎಂದು ಪ್ರಶ್ನೆ ಮಾಡಿದ್ದಾರೆ .
ಕೊಟ್ಟ ಕುದುರೆಯನ್ನು ಏರದವನು ಶೂರನು ಅಲ್ಲ, ಧೀರನು ಅಲ್ಲ ಅಂತ ಕುಮಾರಸ್ವಾಮಿಗೆ ನಿನ್ನೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಕೊಟ್ಟಿದ್ದು ಕುದುರೆ ಅಲ್ಲ,ಕತ್ತೆ ಅವರ ಬಳಿ ಇದ್ದ 12 ಕುದುರೆಗಳು ಹೋಯ್ತಾಲ್ವಾ, ಸರ್ಕಾರ ತೆಗೆದಿದ್ದು ಸಿದ್ದರಾಮಯ್ಯ ಹಿಂದೆ ಇಂದ ಬೆನ್ನಿಗೆ ಚಾಕು ಹಾಕಿದ್ರಿ ರೈತ ಮಕ್ಕಳ ಕುತ್ತಿಗೆ ಕೊಯ್ದಿದ್ರಿ ದೇವೇಗೌಡ್ರು ನಿಮಗೆ ಪಾರ್ಟಿ ಅಧ್ಯಕ್ಷ ಮಾಡಿದ್ರು ಈ ಸ್ಥಾನಕ್ಕೆ ನಿಮ್ಮನ್ನು ತಂದ್ರಲ್ವಾ ನಿಮಗೆ ಅವರ ಬಗ್ಗೆ ಸ್ಮರಣೆ ಏನಾದ್ರು ಇದಿಯಾ, ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡರು ನಮಗೆ ಅಲ್ಪಸಂಖ್ಯಾತರು ಓಟು ಹಾಕಿಲ್ಲ ಎನ್ನುವ ಹೇಳಿಕೆ ಕುರಿತು , ಅದನ್ನ ಬಹಿರಂಗವಾಗಿ ಸ್ಟೇಜ್ ನಲ್ಲಿ ಸಾಬ್ರು ವೋಟು ಬೇಡ ಅಂತ ಹೇಳೊಕೆ ಹೇಳಿ ,ನಿಸ್ಸಾರ್ ಅಹ್ಮದ್ ನ ಸೋಲಿಸಿ ಇಲ್ಲಿ ಜೆಡಿಎಸ್ ನ ಗೆಲಿಸಿದ್ದಾರೆ ನಾನು ಜನಾತ ದಳದ ಅಧ್ಯಕ್ಷ ಇದ್ದಾಗ ಶ್ರೀನಿವಾಸಗೌಡರ ಮನೆಲಿ ತಿನ್ನೋಕೆ ತಟ್ಟೆ ಇರಲಿಲ್ಲ ಇಪ್ಕೋ ಟೋಕಿಯಾ ಅಧ್ಯಕ್ಷ ಮಾಡಿದ್ದು ದೇವೇಗೌಡ್ರು ಇವತ್ತು ಶ್ರೀನಿವಾಸಗೌಡ ದುಡ್ಡು ಮಾಡಿಕೊಂಡಿದ್ದು ದೇವೇಗೌಡ್ರ ಕೃಪೆ ಇಂದಲೇ ತಿಂದು ಮನೆಗೆ ಕನ್ನ ಹಾಕಿದೋನು ಗೌಡ್ರು, ಗೌಡ್ರಿಗೆ ಬಿಟ್ಟಿಲ್ಲ.ಇನ್ನು ಸಾಬರಿಗೆ ನೀನು ಬಿಟ್ಟೀಯಾ ಎಂದು ಶಾಸಕ ಶ್ರೀನಿವಾಸಗೌಡ ವಿರುದ್ದ ಗರಂ ಆಗಿದ್ದಾರೆ.