ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯಂತೆ. ಹಿರಿಯ ನಾಯಕರೊಬ್ಬರು ಸಿಎಂ ಆಗ್ತಾರಂತೆ. ಡಿಕೆಶಿ, ಜಾರಕಿಹೊಳಿ ಯಾರಿಗೂ ಸಿಎಂ ಪಟ್ಟ ಸಿಗೋದಿಲ್ವಂತೆ. ಹೀಗಂತ ಬೆಳಗಾವಿಯಲ್ಲಿ ಶಾಸಕ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನವೆಂಬರ್‌ನಲ್ಲಿ ಬ್ಲಾಕ್ ಹಾರ್ಸ್ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆಯವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನನ್ನ ಜೀವನದಲ್ಲಿ ಒಂದು ದಿನವಾದ್ರೂ ಸಿಎಂ ಅಗಬೇಕೆಂದು ಖರ್ಗೆ ಕುಳಿತಿದ್ದಾರೆ. ಅವರೇ ಸಿಎಂ ಆಗ್ತಾರೆ . ಡಿಕೆ ಶಿವಕುಮಾರ್ ಬೇಡ, ಸತೀಶ್ ಜಾರಕಿಹೊಳಿಯೂ ಬೇಡ. ಖರ್ಗೆಯವರನ್ನೇ ಸಿಎಂ ಮಾಡೋಣ ಎನ್ನುವ ಲೆಕ್ಕಾಚಾರಕ್ಕೆ ಬರ್ತಾರೆ. ಸಿದ್ದರಾಮಯ್ಯರನ್ನು ಕೆಳಗಿಳಿಸೋದು ಪಕ್ಕಾ ಆಗಿದೆ. ಹೀಗಾಗಿಯೇ ಹೈಕಮಾಂಡ್ ಮಾತಿಗೆ ಬದ್ಧ ಅಂತಾ ಹೇಳ್ತಿದ್ದಾರೆ.
ತಮ್ಮ ಪುತ್ರನ ಮೂಲಕ ಸಿದ್ದರಾಮಯ್ಯ ಧಮ್ಕಿ ಹಾಕಿದ್ದಾರೆ. ಸತೀಶ್ ಜಾರಕಿಹೊಳಿಗೆ ಎಲ್ಲಾ ಅರ್ಹತೆ ಇದೆ. ನೀವೇನಾದ್ರೂ ಡಿಕೆ ಶಿವಕುಮಾರ್‌ಗೆ ಕೊಟ್ರೆ, ಸತೀಶ್ ಜಾರಕಿಹೊಳಿ ಜೊತೆ 70-80 ಮಂದಿಯನ್ನು ಕರೆದುಕೊಂಡು ಹೊರಗೆ ಬರುತ್ತೇವೆ. ಈ ಸಂಕೇತವನ್ನ ಹೈಕಮಾಂಡ್‌ಗೆ ಕೊಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ.
ಅಲ್ಲಿ ರಾಷ್ಟ್ರೀಯ ಅಧ್ಯಕ್ಷನನ್ನಾಗಿ ಕೂರಿಸಿದ್ದಾರೆ. ಅಲ್ಲಿ ಕೆಲಸವೂ ಇಲ್ಲ. ಯಾವ ರಾಜ್ಯಗಳೂ ಇಲ್ಲ. ಉತ್ಪನ್ನವೂ ಬರದಂತೆ ಆಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಆಗೋಕೆ ಮಲ್ಲಿಕಾರ್ಜುನ ಖರ್ಗೆಯವರು ಹೊರಟಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರೇ ಮುಖ್ಯಮಂತ್ರಿ ಆಗಬೇಕೆಂದು ಕುಳಿತಾಗ, ಯಾವ ಡಿಕೆ, ಯಾವ ಸತೀಶ್ ಜಾರಕಿಹೊಳಿಯನ್ನ ಕೇಳ್ತಾರೆ.
ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಈಶ್ವರ ಖಂಡ್ರೆ ಕಾಂಪಿಟೇಶನ್ ಇದೆ. ಸತೀಶ್ ಜಾರಕಿಹೊಳಿಯನ್ನು ಮುಖ್ಯಮಂತ್ರಿ ಅಂತಾ ಹೇಳ್ತಾರೆ ಎಂದು, ಸಿದ್ದರಾಮಯ್ಯಗೆ ಎಂ.ಬಿ. ಪಾಟೀಲ್ ಹಾರ ಹಾಕ್ತಾರೆ. ಅವರಲ್ಲೇ ಕಾಂಪಿಟೇಷನ್ ಇದೆ. ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಯಾರೇ ಸಿಎಂ ಆದ್ರೂ ನಮ್ಮ ವಿರೋಧವಿಲ್ಲ. 2028ರಲ್ಲಿ ಕಾಂಗ್ರೆಸ್ ಮಣ್ಣಾಗಿ ಹೋಗುತ್ತೆ. ಕೊನೆಯದಾಗಿ ಯಾರು ಆಗ್ತಾರೋ ಆಗ್ಲಿ ಎಂದು ಯತ್ನಾಳ್ ಟೀಕಿಸಿದ್ದಾರೆ.

