Saturday, April 19, 2025

Latest Posts

ಇಟಲಿಯಲ್ಲಿ ಮಹಾದುರಂತ ದೋಣಿ ಇಬ್ಬಾಗವಾಗಿ ವಲಸಿಗರ ಮಾರಣ ಹೋಮ..!

- Advertisement -

International News:

Feb:27: ಇಟಲಿಯಲ್ಲಿ ಮಹಾ ದುರಂತವೊಂದು ನಡೆದಿದೆ.ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯ ಮಧ್ಯಭಾಗ ತುಂಡಾಗಿ ಮುಳುಗಿದ ಪರಿಣಾಮ 59 ಮಂದಿ ಮೃತರಾದ ಘಟನೆ ಇಟಲಿಯ ದಕ್ಷಿಣ ಕರಾವಳಿ ಸಮುದ್ರದಲ್ಲಿ ಕ್ರೋಟೋನ್ ನಗರದ ಬಳಿ ನಡೆದಿದ್ದು, ದೋಣಿಯಲ್ಲಿ 100ಕ್ಕೂ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದರು. ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿದ ಪರಿಣಾಮ ದೋಣಿಯ ಮಧ್ಯಭಾಗ ತುಂಡಾಗಿ, ದೋಣಿ ಎರಡು ಭಾಗವಾಯಿತು. ಈ ಅವಘಡದಲ್ಲಿ ಮೃತಪಟ್ಟ ವಲಸಿಗರ ಪೈಕಿ ಕೆಲವೇ ತಿಂಗಳ ಮಗು ಹಾಗೂ 12 ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಕರಾವಳಿ ಪಡೆ, ಗಡಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಹಲವರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

ಬಂಧನದಿಂದ ಮುಕ್ತಿ ಹೊಂದಿ ಖುಷಿಯಿಂದ ಆಕಾಶದಲ್ಲಿ ಹಾರಾಡಿದ ಗಿಳಿ

ತೃತೀಯಲಿಂಗಿ ವಾರ್ತಾವಾಚಕಿ ಮೇಲೆ ಗುಂಡಿನ ದಾಳಿ…!

ನಾಲಿಗೆ ಮೂಲಕ ಪೈಂಟಿಂಗ್..! ನಿಬ್ಬೆರಗಾದ ಜನ..!

- Advertisement -

Latest Posts

Don't Miss