ಬೆಂಗಳೂರು: ಗಾಡಿ ಓಡಿಸಿ ಸುಸ್ತಾದ ಲೋಕೊ ಪೈಲೆಟ್‌ಗಳಿಗೆ ಈಗ ರಿಲಾಕ್ಸ್ ಮಾಡಿಕೊಳ್ಳಲು ರೆಡಿಯಾಗಿದೆ ಐಟೆಕ್ ಜಿಮ್…ಇದೇ ರೀತಿ ವಿಶ್ರಾಂತಿ ತೆಗೆದುಕೊಳ್ಳಲು 22 ರನ್ನಿಂಗ್ ರೂಂಗಳನ್ನು ಸ್ಥಾಪಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಬೆಂಗಳೂರು ವಿಭಾಗದಲ್ಲಿ 191 ವಸತಿ ಸೌಕರ್ಯಗಳು ಮತ್ತು ಲೋಕೊ ಪೈಲೆಟ್‌ಗಳು ತಾತ್ಕಾಲಿಕ ವಿಶ್ರಾಂತಿ ಪಡೆಯಲು 4 ರನ್ನಿಂಗ್ ರೂಂಗಳಿವೆ. ಕೆಎಸ್‌ಆರ್ ಬೆಂಗಳೂರು, ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ, ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇದೆ.
ರೈಲ್ವೆ ಸಿಬ್ಬಂದಿ ಮೂಲ ಸ್ಟೇಷನ್‌ಗಳಿಂದ ದೂರವಿದ್ದಾಗ ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಈ ವ್ಯವಸ್ಥೆ ಇರುತ್ತದೆ. ಎಸಿ ಕೊಠಡಿ, ರಿಯಾಯಿತಿ ದರದಲ್ಲಿ ಆಹಾರ, ಅನಿಯಮಿತ ಸಮಯದಲ್ಲಿ ಪಾಳಿಗಳನ್ನು ಆರಂಭಿಸುವ ಸಿಬ್ಬಂದಿಗೆ ಆಹಾರದ ಪೊಟ್ಟಣಗಳನ್ನು ಇಲ್ಲಿ ಒದಗಿಸಲಾಗುತ್ತದೆ. ಕಾಲು ಮಸಾಜ್ ಮಾಡುವ ಮಷಿನ್, ಚೆಸ್, ಕೇರಂ ಬೋರ್ಡ್ ಸೌಕರ್ಯಗಳಿವೆ ಎಂದು ವಿವರಿಸಿದರು.
ನಿಗದಿತ ಅವಧಿ ಪೂರ್ಣಗೊಳಿಸುವವರೆಗೆ ಯಾವುದೇ ರನ್ನಿಂಗ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಕರೆಯುವುದಿಲ್ಲ. ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ..

