ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿಯ ಪಟಿಯಾಲಾ ಕೋರ್ಟ್ ನಲ್ಲಿ ಜಾಮೀನು ಸಿಕ್ಕಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಟಿ ಸಿಲುಕಿದ್ದಾರೆ. ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಸುಕೇಶ್ ಚಂದ್ರಶೇಖರ್ ಮೇಲಿದ್ದು, ಅವರ ಜೊತೆ ಆಪ್ತರಾಗಿದ್ದ ಜಾಕ್ವೆಲಿನ್ ಅವರ ಹೆಸರು ಕೂಡ ಇದರಲ್ಲಿ ಸಿಲುಕಿದೆ. ತನಿಖಾಧಿಕಾರಿಗಳು ಹಲವು ಸಲ ವಿಚಾರಣೆ ನಡೆಸಿದ್ದಾರೆ.
ಹಾಸದಲ್ಲಿ ನೂತನ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ಕಟ್ಟಡ ಉದ್ಘಾಟನೆ
ಜಾಮೀನು ಸಿಕ್ಕ ಹಿನ್ನೆಲೆ ವಿಚಾರಣೆ ಮುಗಿಸಿ ಹೊರಬಂದ ನಂತರ ಅವರ ಪೋಟೋ, ವಿಡಿಯೋಗಳನ್ನು ಚಿತ್ರಿಸಲು ಕ್ಯಾಮೆರಾಗಳು ಮುಗಿಬಿದ್ದಿವೆ. ಇನ್ನು ಇದೇ ವೇಳೆ ಚಿತ್ರೀಕರಿಸಿದ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿ ನೆಟ್ಟಿಗರು ಜಾಕ್ವೆಲಿನ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ನಟಿ ಜಾಕ್ವೆಲಿನ್ ವಾದ ಮಂಡಿಸುತ್ತಿದ್ದಾರೆ. ನ್ಯಾಯಾಲಯದಿಂದ ಹೊರಬರುವಾಗ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಮಾಧ್ಯಮಗಳು ಮುಗಿಬಿದ್ದಿದ್ದವು.
ಮಕ್ಕಳಿಗೆ ಪಠ್ಯದ ಜೊತೆ ಸಾಮಾಜಿಕ ಪ್ರಜ್ಞೆ ಕೂಡ ಇರಲಿ : ಎಸ್ಪಿ ಹರಿರಾಮ್ ಶಂಕರ್