Monday, December 23, 2024

Latest Posts

ಕಿಚ್ಚನ ಜೊತೆ ಮಿರ ಮಿಂಚಲು ಬರುತ್ತಿದ್ದಾಳೆ ಶ್ರೀಲಂಕಾ ಸುಂದ್ರಿ…! ಕತ್ರೀನಾ ಬದಲು ಜಾಕ್ವೆಲಿನ್ ಹಿಂದೆ ಬಿದ್ದಿದ್ಯಾಕೆ ‘ಫ್ಯಾಂಟಮ್’ ಟೀಂ..?

- Advertisement -

ಕಿಚ್ಚನ ಫ್ಯಾಂಟಮ್ ಅಖಾಡದಿಂದ ನಯಾ ಸಮಾಚಾರವೊಂದು ರಿವೀಲ್ ಆಗಿದೆ. ಈಗಾಗ್ಲೇ ಕಲರ್ ಫುಲ್ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹುಟ್ಟಿಸಿರುವ ಫ್ಯಾಂಟಮ್ ಲೋಕದಿಂದ ಸಖತ್ ನ್ಯೂಸ್ ವೊಂದು ಹೊರ ಬಿದ್ದಿದೆ. ಸೌತ್ ಇಂಡಸ್ಟ್ರೀಯಲ್ಲಿ ಸೆನ್ಸೇಷಲ್ ಆಗಿರುವ ಕಿಚ್ಚನ ಸಿನಿಮಾದಲ್ಲಿ ಸೊಂಟು ಬಳುಕಿಸಲು ಶ್ರೀಲಂಕಾ ಸುಂದ್ರಿ ಫ್ಯಾಂಟಮ್ ಬಳಗ ಸೇರ್ತಿದ್ದಾಳಂತೆ.

ಕಿಚ್ಚನ ಜೊತೆ ಜಾಕ್ವೆಲಿನ್

ಫ್ಯಾಂಟಮ್ ಸಿನಿಮಾದಲ್ಲಿ ಸಾಂಗ್ ವೊಂದಕ್ಕೆ ಬಾಲಿವುಡ್ ಬ್ಯೂಟಿ ಸೊಂಟ ಬಳುಕಿಸ್ತಾರೆ ಎನ್ನಲಾಗ್ತಿತ್ತು. ಆ ಮ್ಯೂಸಿಕಲ್ ಟ್ರ್ಯಾಕ್ ಗೆ ಬ್ಯೂಟಿಫುಲ್ ಕತ್ರೀನ್ ಕೈಫ್ ಬರ್ತಾರೆ ಅಂತಾ ನ್ಯೂಸ್ ಬಿಟೌನ್ ಗಲ್ಲಿ ಗಲ್ಲಿಗಳಲ್ಲೂ ಹಬ್ಬಿತ್ತು. ಆದ್ರೆ ಕ್ಯಾಟ್ ಗೆ ಡೇಟ್ ಮ್ಯಾಚ್ ಆಗ್ತಿಲ್ಲವಂತೆ. ಹೀಗಾಗಿ ಕ್ಯಾಟ್ ಬಿಟ್ಟು ಫ್ಯಾಂಟಮ್ ಬಳಗ ಶ್ರೀಲಂಕಾ ಸುಂದ್ರಿ ಜಾಕ್ವೆಲಿನ್ ಹಿಂದೆ ಬಿದ್ದಿದೆ.

ಈಗಾಗ್ಲೇ ಜಾಕ್ವೆಲಿನ್ ಜೊತೆ ಸಿನಿಮಾ ಟೀಂ ಮಾತುಕತೆ ನಡೆಸಿದ್ದು, ಆಕೆ ಒಕೆ ಎಂದಿದ್ದಾಳಂತೆ. ಕಿಚ್ಚ ಜೊತೆ ಗ್ಲಾಮರ್ ಬ್ಯೂಟಿ ಜಾಕ್ವೆಲಿನ್ ಹೆಜ್ಜೆ ಹಾಕಲಿದ್ದು, ಕಿಚ್ಚ ಸುದೀಪ್ ಅಭಿಮಾನಿಗಳಂತೂ ಈ ಪೇರ್ ತೆರೆಮೇಲೆ ನೋಡಲು ಎಕ್ಸೈಟ್ ಆಗಿದ್ದಾರೆ.

- Advertisement -

Latest Posts

Don't Miss