ಹುಬ್ಬಳ್ಳಿ: ಇನ್ನೇನು ಕೆಲವೇ ತಿಂಗಳುಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಶುರುವಾಗಲಿದ್ದು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ಹಿಂದೇಟು ಹಾಕುತ್ತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಬೇರೊಂದು ಜವಬ್ದಾರಿಯನ್ನು ನೀಡಿದೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಪಕ್ಷದ ಮುಖಂಡರನ್ನು ಸೆಳೆದುಕೊಳ್ಳುವ ಮತ್ತು ಪಕ್ಷವನ್ನು ಬಲಪಡಿಸುವ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಅತಿ ಹೆಚ್ಚು ಸ್ಥಾನ ಗೆಲ್ಲುವ ದೂರ ದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದ ಸಂಘಟನೆಯ ಜವಬ್ದಾರಿಯನ್ನು ಜಗದೀಶ ಶೇಟ್ಟರ್ ಅವರಿಗೆ ವಹಿಸಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಜವಬ್ದಾರಿಯನ್ನು ನೀಡುವ ಕುರಿತು ಚರ್ಚೆ ಮಾಡಲು ಈಗಾಗಲೇ ದೆಹಲಿಗೆ ತೆರಳಿರುವ ಶೇಟ್ಟರ್ ಅವರು ಎರಡು ದಿನಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಲೋಕ ಸಭೆ ಚುನಾವಣೆ ತಂತ್ರಗಾರಿಕೆ ಕುರಿತ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡ ನನ್ನನ್ನು ಕರೆದಿದ್ದಾರೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧ.ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸೀಟು ಗೆಲ್ಲಿಸಿಕೊಂಡು ಬರೋದೆ ಗುರಿ.ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ತೇನೆ. ಬಿಜೆಪಿಯಿಂದ ಪಕ್ಷಾಂತರಗೊಂಡಾಗ ಕೆಲ ಕಂಡೀಷನ್ ಹಾಕಿದ್ದೆ. ಅದರಂತೆಯೇ ಕಾಂಗ್ರೆಸ್ ನಡೆದುಕೊಂಡಿದೆ. ನನ್ನನ್ನು ಕಾಂಗ್ರೆಸ್ ನವರು ಗೌರವಯುತವಾಗಿ ನಡೆಸಿಕೊಳ್ತಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅವರು ಕೊಡೋ ಜವಾಬ್ದಾರಿ ನಿಭಾಯಿಸ್ತೇನೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ದಿಸಿ ಪರಾಭವಗೊಂಡಿರುವ ಶೇಟ್ಟರ್. ಆದ್ರೆ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸೀಟು ಗೆಲ್ಲಲು ಸಹಕಾರಿಯಾಗಿದ್ದರು. .ಪಕ್ಷಾಂತರ ಅದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶೆಟ್ಟರ್ ರನ್ನು ಎಂ.ಎಲ್.ಸಿ. ಮಾಡಿದ್ದ ಕಾಂಗ್ರೆಸ್. ಇದೀಗ ಮಹತ್ವದ ಜವಾಬ್ದಾರಿ ಕೊಡಲು ದೆಹಲಿಗೆ ಕರೆಸಿಕೊಳ್ಳಲಾಗುತ್ತಿದೆ.
Araga Jnanendra : ಖರ್ಗೆ ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ: ಆರಗ ಜ್ಞಾನೇಂದ್ರ