Hubli Political News: ಹುಬ್ಬಳ್ಳಿ : ಲೋಕಸಭೆ ಚುನಾವಣೆ ಮುಗಿಯುತ್ತಿದಂತೆ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭೆ ಚುನವಣೆಯಲು ಭರ್ಜರಿ ಜಯ ಗಳಿಸುತ್ತಿದಂತೆ ಫುಲ್ ಆ್ಯಕ್ಟಿವಾ ಆಗಿದ್ದಾರೆ.
ಹೇಗಾದ್ರು ಮಾಡಿ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಮಹದಾಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಜಗದೀಶ್ ದೆಹಲಿಗೆ ತೆರಳಿದ್ದಾರೆ. ನಿನ್ನೆ ರಾತ್ರಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳಿದ್ದ ಶೆಟ್ಟರ್, ಬೆಂಗಳೂರಿನಿಂದ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿಗೆ ಘರ್ ವಾಪ್ಸಿ ವೇಳೆ ಸೂಕ್ತ ಸ್ಥಾನಮಾನದ ಭರವಸೆಯನ್ನು ಬಿಜೆಪಿ ಹೈಕಮಾಂಡ್ ನೀಡಿದೆ.
ಅದಕ್ಕೆ ಪೂರಕವಾಗಿ ಲೋಕಸಭೆ ಟಿಕೆಟ್ ನೀಡಲಾಗಿತ್ತು. ಬೀಗರ ಊರು ಬೆಳಗಾವಿಯಿಂದ ಗೆದ್ದು ಬೀಗ್ತಿರೋ ಜಗದೀಶ್ ಶೆಟ್ಟರ್ ಅವರಿ, ಶತಾಯಗತಾಯ ಕೇಂದ್ರ ಸರ್ಕಾರದಲ್ಲಿ ಸ್ಥಾನ ಗಿಟ್ಟಿಸಬೇಕೆಂಬ ಲೆಕ್ಕಾಚಾರ ಇಟ್ಟುಕೊಂಡಿದ್ದಟರೆ. ಈಗಾಗಲೇ ದೆಹಲಿಯಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರಾದ ಪ್ರಹ್ಲಾದ್ ಜೋಶಿ ಮತ್ತು ಬಸವರಾಜ್ ಬೊಮ್ಮಾಯಿ ಅವರುಕೂಡ ಒಂದು ದಿನ ಮೊದಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಇದರ ಮಧ್ಯೆ ಜಗದೀಶ್ ಶೆಟ್ಟರ್ ಅವರು ಕೂಡ ದೆಹಲಿ ನಾಯಕರ ಜೊತೆ ನೇರ ಸಂಪರ್ಕದಲ್ಲಿ ಇದ್ದು, ಸಚಿವ ಸ್ಥಾನಕ್ಕೆ ಲಾಭಿ ಮುಂದುವರೆಸಿದ್ದಾರೆ.