Wednesday, June 12, 2024

Latest Posts

ಜಗದೀಶ್ ಶೆಟ್ಟರ್‌ ಮೈಯಲ್ಲಿರೋದು ಜನಸಂಘದಿಂದ ಬಂದ ಬಿಜೆಪಿ ರಕ್ತ, ಕಾಂಗ್ರೆಸ್‌ನದ್ದಲ್ಲ: ಸಿಟಿ ರವಿ

- Advertisement -

Political News: ಚಿಕ್ಕಮಗಳೂರು: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿರುವ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್‌ (Jagadish Shettar) ಮೈಯಲ್ಲಿ ಹರಿಯುತ್ತಿರುವುದು ಜನಸಂಘದಿಂದ ಬಂದಿರುವ ಬಿಜೆಪಿಯ ರಕ್ತವೇ ಹೊರತು ಕಾಂಗ್ರೆಸ್‌ನದ್ದಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಸಿಟಿ ರವಿ (CT Ravi) ಹೇಳಿದ್ದಾರೆ.

ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ.ರವಿ, ಜಗದೀಶ್ ಶೆಟ್ಟರ್ ಸದ್ಯ ಅತಂತ್ರ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ನೀವು ಪಾರ್ಟಿ ಚೇಂಜ್ ಮಾಡಿರಬಹುದು, ಆದರೆ ನಿಮ್ಮ ಬ್ಲಡ್ ಚೇಂಜ್ ಮಾಡೋಕಾಗುತ್ತಾ? ಅದು ಜನಸಂಘದಿಂದ ಬಂದಂತಹ ಬಿಜೆಪಿಯ ಬ್ಲಡ್, ಕಾಂಗ್ರೆಸ್‌ನ ರಕ್ತ ಅಲ್ಲ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಅವರ ಡಿ.ಎನ್.ಎಸ. ಸಂಘ ಪರಿವಾರದ್ದು, ಕಾಂಗ್ರೆಸ್ಸಿನದ್ದಲ್ಲ ಎಂದ ಸಿಟಿ ರವಿ, ಜಗದೀಶ್ ಶೆಟ್ಟರ್ ಅವರ ಚಿಕ್ಕಪ್ಪ ಜನ ಸಂಘದಿಂದ ಗೆದ್ದಿದ್ದರು. ಬಿಜೆಪಿ ರಿಪೇರಿ ಮಾಡೋದಕ್ಕೆ ಆಗೋದಿಲ್ಲ ಅನ್ನೋದು ಅವರಿಗೆ ಶೋಭೆ ತರಲ್ಲ. ಬಿಜೆಪಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರೂಪುಗೊಂಡಂತಹ ಪಕ್ಷ. ಬಿಜೆಪಿಯ ಪ್ರೊಡಕ್ಷನ್ ಯೂನಿಟ್ ಚೆನ್ನಾಗಿದೆ. ಪ್ರಾಡಕ್ಟ್ ಗಳು ಕೆಲವೊಮ್ಮೆ ಫಸ್ಟ್ ಕ್ವಾಲಿಟಿ, ಸೆಕೆಂಡ್ ಕ್ವಾಲಿಟಿಯಾಗಿ ರೂಪಗೊಳ್ಳುತ್ತವೆ ಎಂದರು.

ಪ್ರೊಡಕ್ಷನ್ ಯುನಿಟ್ ಎಲ್ಲಿಯವರೆಗೂ ಚೆನ್ನಾಗಿರುತ್ತೋ, ಅಲ್ಲಿಯವರೆಗೆ ಯಾರೂ ಬಿಜೆಪಿಯನ್ನ ಅಲುಗಾಡಿಸಲು ಸಾಧ್ಯವಿಲ್ಲ ಎಂದ ಸಿಟಿ ರವಿ, ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಸೈದ್ದಾಂತಿಕ ನೆಲೆಯಲ್ಲಿ ರೂಪುಗೊಂಡ ಪಕ್ಷವೆಂಬ ಅರಿವಿದೆ. ಹೊಸದಾಗಿ ಮತಾಂತರವಾಗಿರುವ ಕೆಲವರು ನಾವು ಕಟ್ಟರ್ ಎಂದು ತೋರಿಸಿಕೊಳ್ಳಲು ಮಾಡುವ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ನನ್ನನ್ನ ನಂಬುತ್ತಾರೋ? ಇಲ್ಲವೋ ಎಂದು ಜಗದೀಶ್ ಶೆಟ್ಟರ್ ಬಿಜೆಪಿಗೆ ಬೈಯುತ್ತಿದ್ದಾರೆ ಎಂದು ಹೇಳಿದರು.

ಅಲ್ಲದೇ, ನಮ್ಮ ಜಗದೀಶ್ ಶೆಟ್ಟರ್ ಬಿಜೆಪಿಗೆ ಬೈದರೆ ನನ್ನನ್ನ ಕಾಂಗ್ರೆಸ್ ನವರು ನಂಬುತ್ತಾರೆಂದು ಭಾವಿಸಿದ್ದಾರೆ. ಇದಕ್ಕಾಗಿಯೇ ಅವರು ಬಿಜೆಪಿಗೆ ಪದೇ ಪದೇ ಬೈಯ್ಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಸಿಟಿ ರವಿ, ಜಗದೀಶ್ ಶೆಟ್ಟರ್ ಸದ್ಯ ಅತಂತ್ರ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ನೀವು ಪಾರ್ಟಿ ಚೇಂಜ್ ಮಾಡಿರಬಹುದು ಆದರೆ ನಿಮ್ಮ ಬ್ಲಡ್ ಚೇಂಜ್ ಮಾಡೋಕಾಗುತ್ತಾ? ಅದು ಜನಸಂಘದಿಂದ ಬಂದಂತಹ ಬಿಜೆಪಿ ಬ್ಲಡ್ ಎಂದು ಹೇಳಿದರು.

ಇನ್ನು ನಿನ್ನೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕೂಡ ಜಗದೀಶ್ ಶೆಟ್ಟರ್ ಮೈಯಲ್ಲಿ ಹರೀತಿರೋದು ಬಿಜೆಪಿಯ ರಕ್ತ. ಅವರು ಬಿಜೆಪಿ ವಾಪಸ್ ಬಂದರೆ ಸ್ವಾಗತ ಎಂದು ಹೇಳಿದ್ದರು.

ಬೆಂಗಳೂರಿನ 35 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಇಮೇಲ್‌ನಲ್ಲಿತ್ತು ಮುಜಾಹಿದ್ದೀನ್ ಹೆಸರು

ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ

8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು! ರಷ್ಯಾ ಮಹಿಳೆಯರಿಗೆ ಪುಟಿನ್ ಕರೆ

- Advertisement -

Latest Posts

Don't Miss