- Advertisement -
ರಮ್ಯಾ ಹಾಗೂ ಜಗ್ಗೇಶ್ ಮಧ್ಯೆ ಮೊದಲಿನಿಂದ ವೈಮನಸ್ಸು ಇರಲಿಲ್ಲ. ಉಳಿದ ಕಲಾವಿದರಂತೆ ಚೆನ್ನಾಗಿಯೇ ಇದ್ದರು. ಆದರೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಜಗ್ಗೇಶ್ ಕಾಲ್ ಮಾಡಿ ರಮ್ಯಾ ಕಾಲೆಳೆದ ವಿಡಿಯೋ ಅಂದು ಭಾರೀ ಚರ್ಚೆಯಾಗಿತ್ತು.
ನೀರ್ ದೋಸೆ ಜಗಳ ಅಂತಲೇ ಇವರ ನಡುವಿನ ವಾರ್ ಎಲ್ಲೆಡೆ ವೈರಲ್ ಆಗಿತ್ತು. ‘ನೀರ್ ದೋಸೆ’ ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು.ನಟಿ ರಮ್ಯಾ ಅವರು ಜಗ್ಗೇಶ್ ಕುಳಿತಿದ್ದಲ್ಲಿ ಬಂದು ಅವರ ಪಕ್ಕವೇ ಇದ್ದ ಸೀಟ್ನಲ್ಲಿ ಕುಳಿತುಕೊಂಡು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಜಗ್ಗೇಶ್ ಅವರ ಕೈ ಹಿಡಿದು ಹ್ಯಾಂಡ್ ಶೇಕ್ ಮಾಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋವನ್ನು ಜಗ್ಗೇಶ್ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ
- Advertisement -