ರಾಯಚೂರು: ನಗರದಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದ ಅಂಬೇಡ್ಕರ್ ವೃತ್ತದಿಂದ ರೈಲ್ವೆ ನಿಲ್ಧಾಣಕ್ಕೆ ಹೋಗುವ ರಸ್ತೆಯಲ್ಲಿ ಭಿಕರ ಕಾರು ಅಪಘಾತ ಸಂಭವಿಸಿದ್ದು ಮಳೆಯಲ್ಲಿ ಬೇಗವಾಗಿ ಬರುತ್ತಿದ್ದ ಕಾರೊಂದು ಎದುರಿಗೆ ಬಂದಿರುವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ ನಂತರ ಅಷ್ಟರಲ್ಲಿ ಬೈಕ್ಗೆ ಡಿಕ್ಕಿ ಆಗುವುದನ್ನುತಪ್ಪಿಸಲುಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಮಕ್ಕಳಿಗೆ ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ವಿದ್ಯಾರ್ಥಿ ಸ್ಥಳದಲ್ಲೆ ಬಿದ್ದಿದ್ದಾಳೆ ಇನ್ನೊಬ್ಬ ವಿದ್ಯಾರ್ಥಿ ಇರುವ ಜಾಗದಿಂದ 10ಅಡಿ ದೂರ ಹಾರಿ ಬಿದ್ದಿದ್ದಾಳೆ.
ಗಾಯಗೊಂಡಿರುವ ವಿದ್ಯಾರ್ಥಿಗಳು ದೇವದುರ್ಗ ತಾಲೂಕಿನ ಬೂಮನಗುಂಡ ಗ್ರಾಮದ ಶಿವಮಂಗಳ ಮತ್ತು ಸಿರವಾರ ತಾಲೂಕಿನ ಬೇವಿನೂರು ಗ್ರಾಮದ ಜ್ಯೋತಿ ಎಂದು ಗುರುತಿಸಲಾಗಿದೆ.ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಆದರೆ ಬೈಕ್ ಸವಾರ ಶೀವರಾಜ್ ಪಾಟೀಲ್ ಗೆ ಕಾಲು ಮುರಿದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ಆಧಾರದ ಮೇಲೆ ನಗರ ಟ್ರಾಫಿಕ್ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಅಪಘಾತಕ್ಕೆ ಕಾರಣವಾದ ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ ಜಾಗ್ವಾರ್ ಕಾರಿನ ಮಾಲಿಕ ಮೊಹಮದ್ ಜಾಫರ್ ಎನ್ನುವವರು ಪ್ರಕರಣ ಸಂಭವಿಸಿದ ಬಳಿಕ ತಲೆಮರೆಸಿಕೊಂಡಿದ್ದಾರೆ.
School holiday: ರಾಯಚೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ladakh: ಭಾರತೀಯ ಮಹಿಳೆಯ ಶವ ಪಾಕಿಸ್ತಾನ ಆಕ್ರಮಿತ ಬಾಲ್ಟಿಸ್ಥಾನದಲ್ಲಿ ಶವವಾಗಿ ಪತ್ತೆ
ladakh: ಭಾರತೀಯ ಮಹಿಳೆಯ ಶವ ಪಾಕಿಸ್ತಾನ ಆಕ್ರಮಿತ ಬಾಲ್ಟಿಸ್ಥಾನದಲ್ಲಿ ಶವವಾಗಿ ಪತ್ತೆ