Friday, March 14, 2025

Latest Posts

ಕರ್ನಾಟಕದಲ್ಲಿ ಜೂಜು-ಬೆಟ್ಟಿಂಗ್ ಆಡಿದ್ರೆ ಜೈಲು ಗ್ಯಾರೆಂಟಿ..!

- Advertisement -

www.karnatakatv.net : ಬೆಂಗಳೂರು: ಕರ್ನಾಟಕದಲ್ಲಿ ಆನ್ ಲೈನ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಇಂದು ವಿಧಾನಸಭೆಯಲ್ಲಿ ಮಹತ್ವದ ವಿಧೇಯಕವನ್ನು ಮಂಡನೆಯಾಗಿತ್ತು. ಹೀಗಾಗಿ ಇನ್ಮುಂದೆ ಕರ್ನಾಟಕದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ , ಬೆಟ್ಟಿಂಗ್ ನಲ್ಲಿ ತೊಡಗಿದ್ರೆ ಒಂದರಿಂದ 3 ವರ್ಷಗಳ ವರೆಗೂ ಜೈಲು ಶಿಕ್ಷೆ ಜೊತೆಗೆ  ಲಕ್ಷ ದಂಡ ವಿಧಿಸಲಾಗುತ್ತೆ. 

ಕರ್ನಾಟಕ ಪೊಲೀಸ್ ಕಾಯ್ದೆ-1963 ಕ್ಕೆ ತಿದ್ದುಪಡಿ ತರಲಾಗುತ್ತಿದೆ.ಈ ತಿದ್ದುಪಡಿಯನ್ನು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು, ಈಗ ವಿಧಾಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಂಡನೆ ಮಾಡಿದ್ದಾರೆ. ಮಸೂದೆ ಎರಡೂ ಸದನದಲ್ಲಿ ಅಂಗೀಕಾರವಾಗಿ ನಂತರ ರಾಜ್ಯಪಾಲರ ಅನುಮತಿಯೊಂದಿಗೆ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಕರ್ನಾಟಕ ಟಿವಿ – ಬೆಂಗಳೂರು

- Advertisement -

Latest Posts

Don't Miss