Friday, October 18, 2024

Latest Posts

Japan: ಜಾದು ಎಂಬಂತೆ ನಾಯಿಯಂತಾದ ಮನುಷ್ಯ

- Advertisement -

ಅಂತರಾಷ್ಟ್ರೀಯ ಸುದ್ದಿ: ಕೆಲವೊಂದಿಷ್ಟು ಜನ ಇರ್ತಾರೆ ಅವರು ,ಮನುಷ್ಯರಾದಿರದೇ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಅಂತ ಬಯಸುತ್ತಾರೆ. ಹೇಗೆಂದರೆ ಮೈ ತುಂಬಾ ಅಚ್ಚೆ ಹಾಕಿಸಿಕೊಂಡು ಬರಿಮೈಯಲ್ಲಿ ಸಾರ್ವಜನಿಕವಾಗಿ ತಿರುಗಾಡಬೇಕು ಜನ ನಮ್ಮನ್ನು ನೋಡಬೇಕು ಎಂದು ಸಾಕಷ್ಟು ಹಣ ಖರ್ಚು ಮಾಡಿ ಹುಚ್ಚಾಟ ಮಾಡುತ್ತಾರೆ ಅದು ಅವರಿಗೆ ಫ್ಯಾಷನ್ ಅನಿಸುತ್ತದೆ . ಅದೇ ರೀತಿ ಜಪಾನಿನ ಒಬ್ಬ ವ್ಯಕ್ತಿ ನಾಯಿಯಂತೆ ಕಾಣಬೇಕು ಎಂದುಕೊಂಡು ಬರೂಬ್ಬರಿ 12 ಲಕ್ಷ ಖರ್ಚು ಮಾಡಿ ಕೊನೆಗೂ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.  

ಜಪಾನ್‌ನ ಟೋಕೋ ನಾಯಿಯಂತೆ ಕಾಣಲು ಬರೋಬ್ಬರಿ 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ನಾಯಿಯಂತೆ ನೈಜತೆಗೆ ಹತ್ತಿರವಾದ ಪೋಷಾಕನ್ನು ಕಂಪನಿಯೊಂದು ಸಿದ್ಧಪಡಿಸಿಕೊಟ್ಟಿದೆ. ಇದನ್ನು ಧರಿಸಿರುವ ಟೋಕೊ ನಿಜಕ್ಕೂ ನಾಯಿಯಂತೆಯೇ ಕಾಣುತ್ತಾನೆ. ಅದನ್ನು ಧರಿಸಿ ರಸ್ತೆಗಳಲ್ಲಿ ಮೊದಲ ಬಾರಿಗೆ ನಡೆದಾಡಿದ್ದಾನೆ. ಟಿವಿ ಜಾಹೀರಾತುಗಳು ಮತ್ತು ಚಲನಚಿತ್ರಗಳಿಗೆ ವೇಷಭೂಷಣಗಳನ್ನು ತಯಾರಿಸುವ ಜಪಾನಿನ ಕಂಪನಿ ಜೆಪ್ಪೆಟ್, ಟೋಕೊಗಾಗಿ ನಾಯಿಯಂತೆ ಕಾಣುವ ಅದ್ಭುತವಾದ ಉಡುಪನ್ನು ತಯಾರಿಸಿದೆ.

ಇದೀಗ ಈ ನಾಯಿಯ ಪೋಷಾಕನ್ನು ತಯಾರಿಸಲು ಸುಮಾರು ದಿನಗಳು ಹಾಗೂ ಲಕ್ಷಾಂತರ ರೂಪಾಯಿ ಬೇಕಾಗಬಹುದು ಎಂದು ಟೋಕೋಗೆ ತಿಳಿಸಿದೆ. ತನ್ನ ಕನಸು ನನಸಾಗಿಸಿಕೊಳ್ಳಲು ತಕ್ಷಣವೇ ನೈಜತೆಗೆ ಹತ್ತಿರವಾದ ನಾಯಿಯ ತ ಇರುವ ಬಟ್ಟೆಗಳನ್ನು ಆರ್ಡರ್ ಮಾಡಿದ್ದಾನೆ. ಜೆಪ್ಪೆಟ್ ಕಂಪನಿ 40 ದಿನಗಳಲ್ಲಿ ಸುಮಾರು 12 ಲಕ್ಷ ಖರ್ಚು ಮಾಡಿ ನಾಯಿಯಂತಹ ವೇಷಭೂಷಣವನ್ನು ತಯಾರಿಸಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಟೋಕೋ ಈ ಉಡುಪುಗಳನ್ನು ಧರಿಸಿ ಊರಿನ  ಬೀದಿಗಳಲ್ಲಿ ಓಡಾಡುತ್ತಿದ್ದರೆ ಜನ ಈ ನಾಯಿ ವಿಶೇಷವಾಗಿದೆ ಎಂದು ಅದನ್ನು ಮಾತನಾಡಿಸಿ ಅದರ ಜೊತೆ ಸೆಲ್ಫಿ ಕ್ಲಕ್ಕಿಸಿಕೊಂಡರು.

Transgender : ಮಂಗಳಮುಖಿಯರಿಂದ ಸಾರ್ವಜನಿಕರಿಗೆ ಕಿರುಕುಳ : ಪ್ರಕರಣ ದಾಖಲು

Businessman : ಇಡಿಯಿಂದ ಇಬ್ಬರು ಉದ್ಯಮಿಗಳ 40.22 ಕೋಟಿ  ಆಸ್ತಿ ಜಪ್ತಿ…!

Vande Bharath : ರೈಲ್ವೇ ಇಲಾಖೆ ಮೇಲೆ ಪ್ರಯಾಣಿಕರ ಕಿಡಿ..!

- Advertisement -

Latest Posts

Don't Miss